ದಾತಿಯಾ(ಮಧ್ಯಪ್ರದೇಶ) : ಕೇರಳದ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 'ಮೀನು ಹಿಡಿಯೋದ್ರಲ್ಲಿ ಪಪ್ಪು ಬ್ಯುಸಿ' ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೀ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ, ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಜೆಪಿ ನಡ್ಡಾ ಅವರು ಅಸ್ಸೋಂನಲ್ಲಿ ಹಾಗೂ ರಾಜನಾಥ್ ಸಿಂಗ್ ಕೇರಳದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಪಪ್ಪು ಮಾತ್ರ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದಾರೆ ಎಂದು ಮಿಶ್ರಾ ಹೇಳಿದರು.
ಇದನ್ನೂ ಓದಿ: ಕೇರಳ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಟ: ರಾಹುಲ್ ಗಾಂಧಿ ಸಂಭ್ರಮ ನೋಡಿ
ಈಗ ಮೀನು ಹಿಡಿಯುತ್ತಾ, ಬಳಿಕ ಚುನಾವಣೆಯಲ್ಲಿ ಸೋತಾಗ ಇವಿಎಂ ಯಂತ್ರದಲ್ಲಿ ದೋಷವಿದೆಯೆಂದು ರಾಹುಲ್ ಗಾಂಧಿ ಆರೋಪಿಸುತ್ತಾರೆ. ಆದರೆ, ಬಿಜೆಪಿ ವಿಧಾನಸಭೆ ಚುನಾವಣೆಗಾಗಿ ಕಠಿಣ ಪ್ರಚಾರ ನಡೆಸುತ್ತಿದೆ ಎಂದರು.
ಮಾರ್ಚ್ 27ರಿಂದ ಏಪ್ರಿಲ್ 29ರೊಳಗೆ ನಾಲ್ಕು ರಾಜ್ಯಗಳಾದ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸೋಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.