ETV Bharat / bharat

ಇಡೀ ದಿನ ಸೋಂಕಿತರ ಮಧ್ಯೆಯೇ ಕೋವಿಡ್​ ರೋಗಿಯ ಶವ ಇಟ್ಟ ಆಸ್ಪತ್ರೆ ಸಿಬ್ಬಂದಿ!

author img

By

Published : Apr 29, 2021, 9:14 AM IST

ಮಧ್ಯಪ್ರದೇಶದ ಗ್ವಾಲಿಯಾರ್​ನ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ದಿನಪೂರ್ತಿ ಸೋಂಕಿತರ ಮಧ್ಯಯೇ ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನಿಟ್ಟು ಎಡವಟ್ಟು ಮಾಡಿದ್ದಾರೆ.

Dead body left unattended for hours  District Headquarters Hospital in Murar  Covid-19 patient died and body left unattended  ಸೋಂಕಿತರ ಮಧ್ಯ ಕೋವಿಡ್​ ರೋಗಿ ಶವವನಿಟ್ಟ ಆಸ್ಪತ್ರೆ ಸಿಬ್ಬಂದಿ  ಗ್ವಾಲಿಯಾರ್​ನಲ್ಲಿ ಸೋಂಕಿತರ ಮಧ್ಯ ಕೋವಿಡ್​ ರೋಗಿ ಶವವನಿಟ್ಟ ಆಸ್ಪತ್ರೆ ಸಿಬ್ಬಂದಿ  ಗ್ವಾಲಿಯಾರ್​ ಆಸ್ಪತ್ರೆ ಸುದ್ದಿ  ಗ್ವಾಲಿಯಾರ್​ ಕೊರೊನಾ ಸುದ್ದಿ
ಸೋಂಕಿತರ ಮಧ್ಯ ಕೋವಿಡ್​ ರೋಗಿ ಶವವನಿಟ್ಟ ಆಸ್ಪತ್ರೆ ಸಿಬ್ಬಂದಿ

ಗ್ವಾಲಿಯಾರ್: ಮಧ್ಯಪ್ರದೇಶದ ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೋವಿಡ್​ನಿಂದ ನಿಧನರಾದ ರೋಗಿಯ ಮೃತದೇಹವನ್ನು ಇತರ ಸೋಂಕಿತ ರೋಗಿಗಳ ಪಕ್ಕದಲ್ಲೇ ಇರಿಸಿರುವ ಘಟನೆ ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಂಕಿತರ ಮಧ್ಯ ಕೋವಿಡ್​ ರೋಗಿಯ ಶವ ಇಟ್ಟ ಆಸ್ಪತ್ರೆ ಸಿಬ್ಬಂದಿ

ಮುರಾರ್‌ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದ್ರೆ ಆತನ ಶವವನ್ನು ಆಸ್ಪತ್ರೆ ಸಿಬ್ಬಂದಿ ಸಾಗಿಸದೆ 24 ಗಂಟೆಗಳ ಕಾಲ ಕೋವಿಡ್​ ಸೋಂಕಿತರ ಬೆಡ್​ಗಳ ಪಕ್ಕದಲ್ಲೇ ಬಿಟ್ಟಿದ್ದಾರೆ ಎಂದು ರೋಗಿಗಳ ಸಂಬಂಧಿಗಳು ಆರೋಪಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಆ ವ್ಯಕ್ತಿ ಕೋವಿಡ್​ನಿಂದಾಗಿ ಮೃತಪಟ್ಟಿದ್ದಾನೆ. ಆದ್ರೆ ಆಸ್ಪತ್ರೆಯವರು ಆ ದೇಹವನ್ನು ಬೇರೆಡೆ ಸ್ಥಳಾಂತರಿಸದೆ ಸೋಂಕಿತರ ಬೆಡ್​ಗಳ ಪಕ್ಕದ ಬೆಡ್​ ಮೇಲೆಯೇ ಬಿಟ್ಟಿದ್ದಾರೆ ಎಂದು ಕೋವಿಡ್​ ಸೋಂಕಿತರ ಸಂಬಂಧಿಗಳು ಆರೊಪಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್ ಶಾಸಕ ಸತೀಶ್ ಸಿಕಾರ್ವಾರ್ ಹಸ್ತಕ್ಷೇಪದ ನಂತರ ಆಸ್ಪತ್ರೆಯ ಪ್ರಾಧಿಕಾರವು ಶವವನ್ನು ಸ್ಥಳಾಂತರಿಸಿತು. ಕೆಲವೇ ಕೆಲವು ಸಾಮಾನ್ಯ ಉದ್ಯೋಗಿಗಳು ಲಭ್ಯವಿರುವುದರಿಂದ ದೇಹವನ್ನು ತಡವಾಗಿ ತೆರವುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.