ETV Bharat / bharat

ಋಷಿಕೇಶದ ಶೀತಲ್​​​ಳನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದ ಕೆನಡಾದ ಶಾನ್​!

ಕೆನಡಾದ ಹೌಸ್ ಆಫ್ ಕಾಮನ್ಸ್‌ನ ಸದಸ್ಯೆ ಕರೋಲ್ ಹ್ಯೂಸ್ ಅವರ ಪುತ್ರ ಶಾನ್ ಹಾಗೂ ಉತ್ತರಾಖಂಡದ ನಿವಾಸಿ ಶೀತಲ್ ಪುಂಡೀರ್ ಅವರ ವಿವಾಹ ಋಷಿಕೇಶ್​ದಲ್ಲಿ ನೆರವೇರಿತು. ಕೆನಡಾದ ವರ ಶಾನ್​ನೂ ವಧು ಶೀತಲ್ ಜೊತೆ ಏಳು ಸುತ್ತು ಸಪ್ತ ಪದಿ ತುಳಿಯುವದರೊಂದಿಗೆ ಆಗ್ನಿಸಾಕ್ಷಿಯಾಗಿ ಸೋಮವಾರ ವಿವಾಹ ಬಂಧಕ್ಕೆ ಒಳಗಾದರು.

author img

By

Published : Mar 2, 2023, 8:37 PM IST

Updated : Mar 2, 2023, 8:50 PM IST

Rishikesh's Sheetal Canada's Shaan wedding ceremony
ಹಿಂದೂ ಸಂಪ್ರದಾಯದಂತೆ ಋಷಿಕೇಶ್​ದ ಶೀತಲ್​​ ಕೆನಡಾದ ಶಾನ್ ಮದುವೆ ಸಮಾರಂಭ
ಹಿಂದೂ ಸಂಪ್ರದಾಯದಂತೆ ವಿವಾಹ
ಹಿಂದೂ ಸಂಪ್ರದಾಯದಂತೆ ವಿವಾಹ

ಋಷಿಕೇಶ್(ಉತ್ತರಾಖಂಡ):ಭಾರತೀಯ ಹಿಂದೂ ಸಂಪ್ರದಾಯ, ವಿವಿಧ ಆಚರಣೆಗಳು ವಿದೇಶಿಯರಿಗೆ ತುಂಬಾ ಇಷ್ಟ. ಭಾರತೀಯ ಸಂಸ್ಕೃತಿಗೆ ಮನಸೋತಿರುವ ವಿದೇಶಿಗರು ಇತ್ತೀಚೆಗೆ ಭಾರತೀಯ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಕೆನಡಾದ ಹೌಸ್ ಆಫ್ ಕಾಮನ್ ಸದಸ್ಯ ಕರೋಲ್ ಹ್ಯೂಸ್ ಅವರ ಮಗ ಶಾನ್ ಅವರು, ಉತ್ತರಾಖಂಡ ಋಷಿಕೇಶ್​ ಪುಣ್ಯಭೂಮಿಯ ಹೆಣ್ಣು ಮಗಳು ಶೀತಲ್ ಅವರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.

ಋಷಿಕೇಶ್​ದ ಪುಣ್ಯನೆಲದಲ್ಲಿ ವರ ಶಾನ್​ ವಧು ಶೀತಲ್​​​ ಜೊತೆ ಸಪ್ತಪದಿ ತುಳಿಯುವದರೊಂದಿಗೆ ಅಗ್ನಿಸಾಕ್ಷಿಯಾಗಿ ಸೋಮವಾರ ಶುಭದಿನದಂದು ಮದುವೆಯಾದರು. ನಂತರ ಒಬ್ಬರಿಗೊಬ್ಬರು ಹೂವು ಮಾಲೆ ಬದಲಿಸುವ ಮೂಲಕ ಇಬ್ಬರು ಏಳು ಜನ್ಮಗಳವರೆಗೆ ಒಟ್ಟಿಗೆ ಇರುವುದಾಗಿ ಪ್ರತಿಜ್ಞೆ ಮಾಡಿದರು. ಋಷಿಕೇಶ್​ದ ನಿವಾಸಿ ದಿವಂಗತ ಶ್ರೀರಾಮ್ ಅವರ ಪುತ್ರಿ ಶೀತಲ್ ಪುಂಡಿರ್ ಅವರು ಭಾರತೀಯ ವೈದಿಕ ಸಂಪ್ರದಾಯದಂತೆ ಕೆನಡಾದ ನಿವಾಸಿ ಶಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವರನ ತಾಯಿ ಕರೋಲ್ ಹ್ಯೂಸ್ ಅವರು ಕೆನಡಾದ ಫೆಡರಲ್ ಚುನಾವಣೆಗಳಲ್ಲಿ ಹೌಸ್ ಆಫ್ ಕಾಮನ್ಸ್‌ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ನ್ಯೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ಕರೋಲ್ ಹ್ಯೂಸ್ ಅವರು, ಕೆನಡಾದ ಸಹಾಯಕ ಉಪಾಧ್ಯಕ್ಷರು ಮತ್ತು ಎಲ್ಲ ಸಮಿತಿಗಳ ಅಧ್ಯಕ್ಷರಾಗಿದ್ದಾರೆ.

ಹಿಂದೂ ಸಂಪ್ರದಾಯದಂತೆ ವಿವಾಹ
ಹಿಂದೂ ಸಂಪ್ರದಾಯದಂತೆ ವಿವಾಹ

ಶೀತಲ್ ಅವರ ಮಾವ ಕೀತ್ ಹ್ಯೂಸ್ ಅವರು ಕೆನಡಾದ ನಿಕಲ್ ಮೈನಿಂಗ್‌ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ ಶಾನ್ ಅವರು ನ್ಯೂ ಡೆಮಾಕ್ರಟಿಕ್ ಪಕ್ಷದ ನೀತಿ ಸಲಹೆಗಾರರಾಗಿದ್ದಾರೆ. ಪ್ರಸ್ತುತ ಹ್ಯೂಸ್ ಕುಟುಂಬವು ಕೆನಡಾದ ಹ್ಯಾಮರ್ ಒಂಟಾರಿಯೋದಲ್ಲಿ ವಾಸಿಸುತ್ತಿದೆ. ಋಷಿಕೇಶ್​ ನಿವಾಸಿ ಶೀತಲ್ ಪುಂಡೀರ್ ಅವರ ತಂದೆ ಶ್ರೀರಾಮ್ ಪುಂಡೀರ್ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ನಂತರ ಚಿಕ್ಕಪ್ಪ ನಟವರ್ ಶ್ಯಾಮ್ ಅವರು, ಶೀತಲ್ ಮತ್ತು ಅವರ ಕುಟುಂಬವನ್ನೂ ನೋಡಿಕೊಂಡರು. ಶೀತಲ್ ಅವರು ಓಂ ಕಾರಾನಂದ ಶಾಲೆಯಲ್ಲಿ ಓದಿದರು. ನಂತರ ಕೆನಡಾದಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡು, ಪೂರ್ಣಗೊಳಿಸಿದರು.

ಶೀತಲ್ ಅವರು 2009 ರಲ್ಲಿ ಪಿಎಚ್‌ಡಿ ಮಾಡಲು ಕೆನಡಾಕ್ಕೆ ತೆರಳಿದ್ದರು. ಆಂಟಿಕಾನ್ಸರ್ ಡ್ರಗ್ ಡಿಸ್ಕವರಿ ವಿಷಯದ ಮೇಲೆ ಪಿಎಚ್‌ಡಿ ಕೂಡಾ ಪೂರ್ಣಗೊಳಿಸಿದ್ದಾರೆ. ಬಳಿಕ ಅವರು ಕೆನಡಾದ ಫಾಂಗೆ ಕಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಅಲ್ಲಿಂದ ನೇತ್ರಶಾಸ್ತ್ರದ ಮೇಲೆ ಎಂಡಿ ಮುಗಿಸಿದರು. ಪ್ರಸ್ತುತ ಶೀತಲ್ ನೇತ್ರಶಾಸ್ತ್ರಜ್ಞೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

2018 ರಲ್ಲಿ, ಅವರು ಕೆನಡಾದ ಪೌರತ್ವವನ್ನು ಪಡೆದಿದ್ದರು. ತನ್ನ ಅಧ್ಯಯನದ ಸಮಯದಲ್ಲಿ ಶೀತಲ್ ಅವರು ಶಾನ್ ಅವರನ್ನು ಭೇಟಿ ಮಾಡುತ್ತಿದ್ದರು. ಆ ಭೇಟಿ ಕ್ರಮೇಣ ಪ್ರೀತಿಗೆ ತಿರುಗಿತು. ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ನಾವು ಮದುವೆಯಾಗಲು ನಿರ್ಧರಿಸಿದೇವು ಎನ್ನುತ್ತಾರೆ ಶೀತಲ್.

ಹಿಂದೂ ಸಂಪ್ರದಾಯದಂತೆ ವಿವಾಹ
ಹಿಂದೂ ಸಂಪ್ರದಾಯದಂತೆ ವಿವಾಹ

ಭಾರತೀಯ ವೈದಿಕ ಸಂಪ್ರದಾಯದ ಪ್ರಕಾರ ಮದುವೆ ನಡೆಯಬೇಕೆಂದು ಶೀತಲ್ ಅವರ ಬೇಡಿಕೆಗೆ ಶಾನ್ ಹಾಗೂ ಅವರ ಕುಟುಂಬದವರು ಸಂತೋಷವಾಗಿ ಒಪ್ಪಿಕೊಂಡರು. ಶಾನ್ ಪೋಷಕರು ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದು, ಋಷಿಕೇಶ್​ದಲ್ಲಿ ಸೋಮವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ನೆರವೇರಿತು. ವೈದಿಕ ಸಂಪ್ರದಾಯದಂತೆ ಮದುವೆ ಜರುಗಿದ್ದು, ಮದುವೆಯ ಸಮಯದಲ್ಲಿ ಅವಿಭಕ್ತ ಕುಟುಂಬ ಅನ್ಯೋನ್ಯತೆಯ ಪ್ರೀತಿ , ಈ ಎಲ್ಲ ಸಂತಸದ ಸಮಯವನ್ನು ತನ್ನ ಜೀವನದುದ್ದಕ್ಕೂ ಮರೆಯಲಾಗದು ಎಂದು ಶಾನ್ ತಿಳಿಸಿದರು.

ಇದನ್ನೂಓದಿ:ಮಗಳು ಗ್ರೇಸಿಯಾಗಾಗಿ ಸುರೇಶ್ ರೈನಾ ಹಾಡಿದ ಹಾಡು ಸಖತ್ ವೈರಲ್​..

Last Updated : Mar 2, 2023, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.