ಹರ್ದಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಹರ್ದಾದಲ್ಲಿ ಮನ ಕಲಕುವಂತಹ ನೋವಿನ ಘಟನೆ ನಡೆದಿದೆ. ಇಂದು ಬುಧವಾರ ಬೆಳಗ್ಗೆ ತುಂಬಾ ವೇಗವಾಗಿ ಬಂದಿರುವ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಸಂಭವಿಸಿದ ತಕ್ಷಣವೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ತಿಮರ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಪೋಖರ್ನಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ಸ್ಥಳೀಯರ ಮಾಹಿತಿ ಆಧಾರ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಮೃತರನ್ನು ಗುರುತು ಪತ್ತೆಯಾಗಿದೆ. ಮೃತಪಟ್ಟಿರುವ ಎಲ್ಲರೂ ಹರ್ದಾ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದ ವೇಳೆ ಅವಘಡ: ಮಾಹಿತಿಯ ಪ್ರಕಾರ, ಬರ್ಕಳ ಗ್ರಾಮದ ನಿವಾಸಿ ಅಖಿಲೇಶ್ ಕುಶ್ವಾಹ, ರಾಕೇಶ್, ರಾಕೇಶ್ ಅವರ ಪತ್ನಿ ಶಿವಾನಿ ಮತ್ತು ಆದರ್ಶ್ ಅವರು ನಸ್ರುಲ್ಲಗಂಜ್‌ನ ದೀಪಗಾಂವ್‌ನಿಂದ ಮದುವೆ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ಪೋಖರ್ಣಿ ಗ್ರಾಮದ ಬಳಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದೆ. ಇದರಿಂದ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿದ್ದವರು ಕೆಳಗಿಳಿಯಲು ಸಹ ಆದ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಎಲ್ಲರೂ ಸುಟ್ಟು ಕರಕಲಾದರು.
6 ತಿಂಗಳ ಹಿಂದೆ ರಾಕೇಶ್ ವಿವಾಹ: ಮೃತರೆಲ್ಲರೂ ಹರ್ದಾ ಜಿಲ್ಲೆಯ ಬರ್ಕಲಾ ಚರಖೇಡಾ ನಿವಾಸಿಗಳು ಆಗಿದ್ದಾರೆ. ಮೃತ ರಾಕೇಶ್ಗೆ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ಹೇಳಲಾಗುತ್ತಿದೆ. ಅಪಘಾತದ ಬಗ್ಗೆ ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಕಾರಿನ ವೇಗ ತುಂಬಾ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಇದರಿಂದ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೇ ಈ ಅವಘಡ ಸಂಭವಿಸಿದೆ.
ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು, ಹಲವರಿಗೆ ಗಾಯ: ಖಾಸಗಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಜರುಗಿದೆ. ಮೃತ ಕಾರ್ಮಿಕರನ್ನು ಮಹಮ್ಮದ್ ಅಜೀಜ್ (40) ಹಾಗೂ ರಮೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ. ಬೋರ್ಜೋರಾದ ಘುತ್‌ಘುಟಿಯಾದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಬಾಯ್ಲರ್ ಸ್ಫೋಟಗೊಂಡಿದ್ದರಿಂದ ಕಾದ ಕಬ್ಬಿಣದ ದ್ರವ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.
14 ಕಾರ್ಮಿಕರಿಗೆ ಸುಟ್ಟಗಾಯಗಳಾಗಿವೆ. ಗಾಯಗೊಂಡ ಕಾರ್ಮಿಕರನ್ನು ದುರ್ಗಾಪುರದ ಬಿಧಾನ್ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಜೊತೆಗೆ ಗಂಭೀರ ಸ್ಥಿತಿಯಲ್ಲಿದ್ದ 8 ಜನರನ್ನು ದುರ್ಗಾಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಐವರನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮಂಗಳವಾರ ತಡರಾತ್ರಿ ಬಿಹಾರದ ಮುಜಾಫರ್‌ಪುರ ಮತ್ತು ಸಮಸ್ತಿಪುರ ಮೂಲದ ಕಾರ್ಮಿಕರಾದ ಮಹಮ್ಮದ್ ಅಜೀಜ್ ಮತ್ತು ರಮೇಶ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಇದನ್ನೂ ಓದಿ: ಮಹಾರಾಷ್ಟ್ರ: ಮಕ್ಕಳ ಕಳ್ಳಸಾಗಣೆಯಿಂದ 59 ಮಕ್ಕಳನ್ನು ರಕ್ಷಿಸಿದ ಭೂಸಾವಲ್ ರೈಲ್ವೇ ಪೊಲೀಸರು