ಸಂಸದ (ಮಧ್ಯಪ್ರದೇಶ): ಮಧ್ಯಪ್ರದೇಶದ ಟಿಕಮ್‌ಗರ್ ಜಿಲ್ಲೆಯ ಕಾಶಿಮಾಜ್ರಾ ಎಂಬ ಗ್ರಾಮದ ಬಾವಿಯೊಂದರಲ್ಲಿ 25 ವರ್ಷದ ಮಹಿಳೆ ಮತ್ತು ಆಕೆಯ ಮೂವರು ಅಪ್ರಾಪ್ತ ಮಕ್ಕಳ ಮೃತ ದೇಹಗಳು ಇಂದು ಪತ್ತೆಯಾಗಿವೆ. ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಕೊಲೆ ಮಾಡಿ ಅಲ್ಲಿ ಬಿಸಾಡಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.
ಮೃತ ಮಹಿಳೆಯ ಪತಿಯು ಭಾನುವಾರ ಸಂಜೆ ತನ್ನ ಪತ್ನಿ ಮತ್ತು ಮೂವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತೆರಳಿ ದೂರು ನೀಡಿದ್ದರು. ಆದರೆ, ಬೆಳಗ್ಗೆ ಹುಡುಕಾಟ ನಡೆಸಿದಾಗ ಹೆಂಡತಿ ಸೇರಿದಂತೆ ಮೂವರು ಮಕ್ಕಳ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ.
ಕಳೆದ ರಾತ್ರಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳು ಕಾಣೆಯಾಗಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆ ದೂರಿನಂತೆ ಶೋಧನೆ ನಡೆಸುತ್ತಿದ್ದಾಗ ತಾಯಿ ಸೇರಿದಂತೆ ಮೂವರು ಮಕ್ಕಳ ಮೃತ ದೇಹಗಳು ಬಾವಿಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿತು. ದೂರು ನೀಡಿದ ವ್ಯಕ್ತಿ ಬಾವಿಯಲ್ಲಿ ತೇಲಾಡುತ್ತಿರುವ ಶವಗಳನ್ನು ಪತ್ತೆ ಮಾಡಿದ್ದಾರೆ.
ಶವಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಮಹಿಳೆ ಮಾನಸಿಕ ಸಮಸ್ಯೆ ಎದುರುಸುತ್ತಿದ್ದಳು. ಹಾಗಾಗಿ ಆಗಾಗಾ ಗ್ವಾಲಿಯರ್ ಮತ್ತು ಜಾನ್ಸಿಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಮೃತ ಮಹಿಳೆಯ ಕುಟುಂಬ ಸದಸ್ಯರು ತಮಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.