ETV Bharat / bharat

'ಜಿಲ್ಲಾಧಿಕಾರಿಯ ಕಪಾಳಕ್ಕೆ ಬಾರಿಸಿದರೆ ರಾಜಕಾರಣಿ': ಬಿಜೆಪಿ ಸಂಸದನ 'ರಾಜಕೀಯ ಪಾಠ'! - establishes as a political leader

ಮಧ್ಯಪ್ರದೇಶದ ರೇವಾ ಕ್ಷೇತ್ರದ ಸಂಸದ ಜನಾರ್ಧನ್​ ಮಿಶ್ರಾ ಕಾರ್ಯಕ್ರಮವೊಂದಲ್ಲಿ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜಕೀಯ ನಾಯಕನಾಗಿ ಪ್ರಾಮುಖ್ಯತೆ ಪಡೆಯುವುದು ಹೇಗೆ ಎಂಬುವುದನ್ನು ಈ ರೀತಿಯಲ್ಲಿ ವಿವರಿಸಿದ್ದಾರೆ.

ಮಧ್ಯಪ್ರದೇಶದ ರೇವಾ ಕ್ಷೇತ್ರದ ಸಂಸದ ಜನಾರ್ಧನ್​ ಮಿಶ್ರಾ

author img

By

Published : Apr 14, 2022, 4:52 PM IST

ಭೋಪಾಲ್​ (ಮಧ್ಯಪ್ರದೇಶ): ಬಿಜೆಪಿಯ ಹಿರಿಯ ನಾಯಕ ಮತ್ತ ಸಂಸದ ಜನಾರ್ಧನ್​ ಮಿಶ್ರಾ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅಥವಾ ಯಾವುದೇ ಆಯುಕ್ತರಿಗೆ ಕಪಾಳಕ್ಕೆ ಬಾರಿಸಿದರೆ ಒಬ್ಬ ರಾಜಕೀಯ ನಾಯಕನಾಗಿ ಒಂದೆರಡು ವರ್ಷಗಳ ಕಾಲದಲ್ಲೇ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.! ರೇವಾ ಕ್ಷೇತ್ರದ ಸಂಸದ ಮಿಶ್ರಾ ಕಾರ್ಯಕ್ರಮವೊಂದಲ್ಲಿ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜಕೀಯ ನಾಯಕನಾಗಿ ಪ್ರಾಮುಖ್ಯತೆ ಪಡೆಯುವುದು ಹೇಗೆ ಎಂಬುವುದನ್ನು ಈ ರೀತಿಯಲ್ಲಿ ವಿವರಿಸಿದರು.

'ನಮ್ಮ ಕಾಲದಲ್ಲಿ ಜನರು ರಾಜಕಾರಣಿ ಎಂದು ಗುರುತಿಸಿಕೊಳ್ಳಲು ಜಿಲ್ಲಾಧಿಕಾರಿ ಅಥವಾ ಆಯುಕ್ತರಿಗೆ ಕಪಾಳಮೋಕ್ಷ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳಿಗೆ ಬಾರಿಸಿದರೆ ನಾವು ಮುಂದಿನ ಒಂದೆರಡು ವರ್ಷಗಳಲ್ಲೇ ರಾಜಕೀಯ ನಾಯಕರಾಗಿ ಬೆಳೆಯಬಹುದು ಎಂಬುದೂ ನಮಗೆ ಗೊತ್ತಿತ್ತು. ಇಂತಹ ಅವಕಾಶವನ್ನು ಎಂದೂ ಕಳೆದುಕೊಳ್ಳುತ್ತಿರಲಿಲ್ಲ' ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಗಿರೀಶ್ ಗೌತಮ್, ರಾಜ್ಯಸಭಾ ಸಂಸದ ಅಜಯ್ ಪ್ರತಾಪ್ ಸಿಂಗ್, ಮಾಜಿ ಸಚಿವ ರಾಜೇಂದ್ರ ಶುಕ್ಲಾ ಮತ್ತು ಹಲವಾರು ಬಿಜೆಪಿ ಶಾಸಕರು ಉಪಸ್ಥಿತರಿದ್ದರು. ಈ ಹಿಂದೆ ಜನಾರ್ಧನ್​ ಮಿಶ್ರಾ, ಪ್ರಧಾನಿ ನರೇಂದ್ರ ಮೋದಿ ಗಡ್ಡದ ಬಗ್ಗೆ ವಿಚಿತ್ರವಾದ ಹೇಳಿಕೆ ನೀಡಿದ್ದರು.

ಮಿಶ್ರಾ ಹೇಳಿಕೆಯನ್ನು ಕಾಂಗ್ರೆಸ್​ ಟೀಕಿಸಿದೆ. ಎರಡು ಬಾರಿ ಸಂಸದರಾಗಿ, ಬಿಜೆಪಿಯ ಹಿರಿಯ ನಾಯಕರಾಗಿ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಯುವಕರಿಗೆ ಒಳ್ಳೆಯ ದಾರಿಯನ್ನು ಹೇಳಿಕೊಡಬೇಕಾದ ನಾಯಕರು, ಅಧಿಕಾರಿಗಳಿಗೆ ಬಾರಿಸಿ ಎಂದು ಸಲಹೆ ನೀಡುವುದು ದುರದೃಷ್ಟಕರ ಎಂದು ರಾಜ್ಯ ಕಾಂಗ್ರೆಸ್​ನ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: 'ಭಾರತೀಯನೆಂದು ಸಾಬೀತುಪಡಿಸಲು ಬಲವಂತವಾಗಿ ಹಿಂದಿ ಕಲಿಯುವ ಅವಶ್ಯಕತೆಯಿಲ್ಲ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.