ETV Bharat / bharat

ಬಲವಂತದ ಮತಾಂತರ ಆರೋಪ: ಪ್ರಾರ್ಥನಾ ಸ್ಥಳದ​ ಮೇಲೆ ಹಿಂದೂ ಸಂಘಟನೆಗಳ ದಾಳಿ, ಕ್ರಮಕ್ಕೆ ಆಗ್ರಹ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮತ್ತೊಂದು ಮತಾಂತರದ ಪ್ರಕರಣ ಬೆಳಕಿಗೆ ಬಂದಿದೆ. ಭೋಪಾಲ್‌ನ ಟಿಟಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವನಗರದಲ್ಲಿರುವ ಪ್ರಾರ್ಥನಾ ಸ್ಥಳವೊಂದರಲ್ಲಿ ರಹಸ್ಯವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ದಾಳಿ ಮಾಡಿವೆ.

Madhya Pradesh BJP MP VD Sharma spoke to reporters
ಮಧ್ಯಪ್ರದೇಶ ಬಿಜೆಪಿ ಸಂಸದ ವಿ ಡಿ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Nov 27, 2022, 6:33 PM IST

ಭೋಪಾಲ್: ಮಧ್ಯಪ್ರದೇಶದಲ್ಲಿ ಮತಾಂತರ ಪ್ರಕ್ರಿಯೆ ನಿಲ್ಲುತ್ತಿಲ್ಲ ಎಂಬ ಆರೋಪದ ಮಧ್ಯೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾಜಧಾನಿ ಭೋಪಾಲ್‌ನ ಟಿಟಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವನಗರದಲ್ಲಿ ಚರ್ಚ್​ವೊಂದರಲ್ಲಿ ರಹಸ್ಯವಾಗಿ ಮತಾಂತರ ನಡೆಸುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಈ ಮತಾಂತರಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ಕುರಿತಾಗಿ ಹಿಂದೂ ಸಂಘಟನೆ ಪದಾಧಿಕಾರಿಗಳು ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅನ್ಯ ಧರ್ಮದ ಗುರುಗಳು ಹಿಂದೂಗಳನ್ನು ಮತಾಂತರಗೊಳಿಸಿ ಪರಿವರ್ತಿಸಿ ಬಲವಂತ ಮತಾಂತರ ಮಾಡುತ್ತಿದ್ದರು. ಎಚ್ಚೆತ್ತ ಹಿಂದೂ ಸಂಘಟನೆಗಳು, ಬಜರಂಗದಳ, ಸಂಸ್ಕೃತಿ ಬಚಾವೋ ಮಂಚ್ ಶಿವನಗರದ ಪ್ರಾರ್ಥನಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿವೆ ಎಂದು ಸಂಘಟನೆಯ ವಕ್ತಾರರು ಆರೋಪಿಸಿದ್ದಾರೆ. ಆದರೆ ಮತ್ತೊಂದೆಡೆ ಹಿಂದೂಗಳು, ನಮ್ಮ ಸ್ವಇಚ್ಛೆಯ ಮೇಲೆ ಆ ಧರ್ಮದ ಸೃಷ್ಟಿಕರ್ತನನ್ನು ಪ್ರಾರ್ಥಿಸುತ್ತಿದ್ದೇವೆ, ಅದರಲ್ಲಿ ತಪ್ಪೇನಿದೆ" ಎಂದು ವಾದಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಸದ ಆಗ್ರಹ : ಯಾರಾದರೂ ಮತಾಂತರದಂಥ ಚಟುವಟಿಕೆ ನಡೆಸಿದರೆ, ಜೈಲಿನ ಕಂಬಿಗಳ ಹಿಂದೆ ಹೋಗಬೇಕಾಗುತ್ತದೆ. ಭೋಪಾಲ್‌ ನಲ್ಲಿ ನಡೆದ ಮತಾಂತರ ಘಟನೆ ಬಗ್ಗೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ. ಪೊಲೀಸರಿಂದ ತನಿಖೆ ಮುಂದುವರಿದಿದ್ದು ಮುಗಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ವಿ.ಡಿ. ಶರ್ಮಾ ತಿಳಿಸಿದ್ದಾರೆ.

ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರಲ್ಲಿ15 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಭೋಪಾಲ್ ಎಸಿಪಿ ಸಿ ಎಸ್ ಪಾಂಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪೊಲೀಸ್ ಭದ್ರತೆಯಲ್ಲಿ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಬಂದ ದಲಿತ ವರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.