ಹೈದರಾಬಾದ್(ತೆಲಂಗಾಣ): ಕೆಜಿಎಫ್ ಬೆಡಗಿ ಮೌನಿರಾಯ್ ಅವರು ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿವೆ.
![ನಟಿ ಮೌನಿರಾಯ್ಗೆ ಮಾಂಗಲ್ಯಧಾರಣೆ ಮಾಡಿದ ಸೂರಜ್](https://etvbharatimages.akamaized.net/etvbharat/prod-images/14294141_th1.jpg)
ನಟಿ ಮೌನಿ ರಾಯ್, ಸೂರಜ್ ದುಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ಗುಸುಗುಸು ಹರದಾಡುತ್ತಿತ್ತು. ಆದರೆ, ಅವರು ಗೋವಾದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
![ಕೆಜಿಎಫ್ ಬೆಡಗಿ ಮೌನಿರಾಯ್- ಉದ್ಯಮಿ ಸೂರಜ್](https://etvbharatimages.akamaized.net/etvbharat/prod-images/14294141_ddd.jpg)
ಝಗಮಗಿಸುವ ಮಂಟಪದಲ್ಲಿ ಸೂರಜ್ ಅವರು ಮೌನಿರಾಯ್ಗೆ ಮಾಂಗಲ್ಯಧಾರಣೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರ ಮದುವೆ ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದಿದೆ. ಕೋವಿಡ್ ಕಾರಣ ದಂಪತಿಯ ಅತ್ಯಾಪ್ತರು, ಕುಟುಂಬಸ್ಥರು ಮಾತ್ರ ಮದುವೆ ಸಾಕ್ಷಿಯಾಗಿದ್ದಾರೆ.
![ಕೆಜಿಎಫ್ ಬೆಡಗಿ ಮೌನಿರಾಯ್](https://etvbharatimages.akamaized.net/etvbharat/prod-images/14294141_th2.jpg)
ಓದಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಟ್ ಲುಕ್ಗೆ ಫ್ಯಾನ್ಸ್ ಫಿದಾ..
ಇನ್ನು ಮದುವೆಯ ಬಳಿಕ ಮೌನಿರಾಯ್ ಮತ್ತು ಸೂರಜ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದುಬೈನಲ್ಲಿ ಉದ್ಯಮಿಯಾಗಿದ್ದ ಸೂರಜ್ ಮೌನಿರಾಯ್ಗೆ 2019 ರಲ್ಲಿ ಪರಿಚಯವಾಗಿದ್ದ. ಬಳಿಕ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದದ್ದು ಸುದ್ದಿಯಾಗಿತ್ತು. ಇದೀಗ ನಟಿ ಬಂಧುಗಳ ಸಮ್ಮುಖದಲ್ಲಿ ಗೌಪ್ಯವಾಗಿ ಸಪ್ತಪದಿ ತುಳಿದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ