ETV Bharat / bharat

ಕರುಳಬಳ್ಳಿ ಕಾಪಾಡಲು ಹೆತ್ತಮ್ಮನ ಹೋರಾಟ.. ಆದರೂ ಬದುಕುಳಿಯಲಿಲ್ಲ ಕುಡಿ

ನವೀನ್​ ಸಣ್ಣ ಕೊಳವೊಂದರಲ್ಲಿ ಈಜಾಡುತ್ತಿದ್ದಾಗ ಕೊಳದಲ್ಲಿದ್ದ ದೊಡ್ಡ ರಂಧ್ರದೊಳಗೆ ಬಿದ್ದಿದ್ದಾನೆ. ಮೇಲೆ ಬರಲಾಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಆತನ ಜೊತೆಗಿದ್ದ ಬೇರೆ ಮಕ್ಕಳು ತಾಯಿ ಭವಾನಿಗೆ ಮಾಹಿತಿ ನೀಡಿದ್ದಾರೆ..

author img

By

Published : Dec 18, 2020, 1:50 PM IST

ಕರುಳಬಳ್ಳಿ ಕಾಪಾಡಲು ಹೆತ್ತಮ್ಮನ ಪರದಾಟ
ಕರುಳಬಳ್ಳಿ ಕಾಪಾಡಲು ಹೆತ್ತಮ್ಮನ ಪರದಾಟ

ಹೈದರಾಬಾದ್​ : ಈಜಲೆಂದು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ ತಾಯಿ ತನ್ನ ಕರುಳ ಕುಡಿ ಕಾಪಾಡಲು ಹರಸಾಹಸ ಪಡುತ್ತಿರುವ ದೃಶ್ಯ ಮನಕಲುಕುವಂತಿದೆ. ಇದು ಹೈದರಾಬಾದ್​ನ ಮೂಸಾಪೇಟೆ ಎಂಬಲ್ಲಿ ನಡೆದ ಘಟನೆ.

ಭವಾನಿ ಮತ್ತು ವೆಂಕಟರಾವ್ ದಂಪತಿ ಮಗ ನವೀನ್​(8) ಮೃತ ಬಾಲಕ. ಈ ದಂಪತಿ ಕಳೆದ 15 ವರ್ಷದ ಹಿಂದೆ ಉದ್ಯೋಗಕ್ಕಾಗಿ ಹೈದರಾಬಾದ್​ಗೆ ಆಗಮಿಸಿದ್ದತ್ತು. ಗುತ್ತಿಗೆಗಾರರಾಗಿ ಕೆಲಸ ಮಾಡುತ್ತಿದ್ದ ವೆಂಕಟರಾವ್​ ದಂಪತಿಗೆ ಇಬ್ಬರು ಗಂಡು ಮಕ್ಕಳು.

ನವೀನ್​ ಸಣ್ಣ ಕೊಳವೊಂದರಲ್ಲಿ ಈಜಾಡುತ್ತಿದ್ದಾಗ ಕೊಳದಲ್ಲಿದ್ದ ದೊಡ್ಡ ರಂಧ್ರದೊಳಗೆ ಬಿದ್ದಿದ್ದಾನೆ. ಮೇಲೆ ಬರಲಾಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಆತನ ಜೊತೆಗಿದ್ದ ಬೇರೆ ಮಕ್ಕಳು ತಾಯಿ ಭವಾನಿಗೆ ಮಾಹಿತಿ ನೀಡಿದ್ದಾರೆ.

ಕರುಳಬಳ್ಳಿ ಕಾಪಾಡಲು ಹೆತ್ತಮ್ಮನ ಪರದಾಟ..

ಈ ವಿಷಯ ತಿಳಿದ ತಕ್ಷಣ ತಾಯಿ ಬಂದು, ಇತರರ ಸಹಾಯದೊಂದಿಗೆ ಮಗನನ್ನು ರಂಧ್ರದಿಂದ ಹೊರತೆಗೆದಿದ್ದಾಳೆ. ಕರುಳ ಕುಡಿಯ ಜೀವ ಉಳಿಸಲೆಂದು ಬಾಯಿಯ ಮೂಲಕ ಕೃತಕ ಉಸಿರನ್ನು ನೀಡಿದ್ದಾಳೆ.

ಆದರೆ, ನವೀನ್​ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಕುಕಟ್ಪಲ್ಲಿ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ನವೀನ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕರುಳಬಳ್ಳಿ ಅಂತ್ಯದ ಸುದ್ದಿ ತಿಳಿದ ತಾಯಿ ಭವಾನಿಯ ಆಕಂದ್ರನ ಮುಗಿಲುಮುಟ್ಟುವಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.