ETV Bharat / bharat

ಜರ್ಮನಿ ವಿರುದ್ಧ 'ಗೆಲುವಿನ ಗೋಲು' ದಾಖಲಿಸಿದ ಮುಮ್ತಾಜ್‌ ಅಮ್ಮನ ದಿಲ್‌ಖುಷ್‌! - ತರಕಾರಿ ಮಾರಾಟ ಮಾಡುತ್ತಿರುವ ಮುಮ್ತಾಜ್ ಖಾನ್ ಪೋಷಕರು

ಲಖನೌದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದ ಹಾಕಿ ಆಟಗಾರ್ತಿ ಮುಮ್ತಾಜ್ ಖಾನ್ ಅವರ ಸಾಧನೆಗೆ ಪೋಷಕರು ಮಾತ್ರವಲ್ಲ, ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ಹಾಕಿ ಆಟಗಾರ್ತಿ ಮುಮ್ತಾಜ್ ಖಾನ್
ಹಾಕಿ ಆಟಗಾರ್ತಿ ಮುಮ್ತಾಜ್ ಖಾನ್
author img

By

Published : Apr 4, 2022, 11:51 AM IST

Updated : Apr 4, 2022, 12:10 PM IST

ಲಖನೌ: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಫ್‌ಐಹೆಚ್ ಹಾಕಿ ಮಹಿಳಾ ಜೂನಿಯರ್ ವಿಶ್ವಕಪ್‌ ಪೂಲ್ ಪಂದ್ಯದಲ್ಲಿ ಭಾರತವು ಜರ್ಮನಿ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ಮುಮ್ತಾಜ್ ಖಾನ್ ಬಾರಿಸಿದ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತ್ತು. ಈ ಸಂದರ್ಭದಲ್ಲಿ ಮಗಳ ಸಾಧನೆ ಕಂಡು ಲಖನೌದಲ್ಲಿ ತರಕಾರಿ ಮಾರುವ ಅವರ ತಾಯಿ ಕೈಸರ್ ಜಹಾನ್ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಭಾರತದಲ್ಲಿ ಹೊಸ ಹಾಕಿ ಸೆನ್ಸೇಷನ್ ಕ್ರಿಯೇಟ್​ ಮಾಡಿರುವ ಮುಮ್ತಾಜ್ ಖಾನ್ ಅವರಿಗೆ ಈಗ 19 ವರ್ಷ. ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಇದೀಗ ದೇಶದ ಗಮನ ಸೆಳೆದಿದ್ದಾರೆ. ಲಖನೌದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನದ ಬಂಡಿ ಸಾಗಿಸುತ್ತಿರುವ ಮುಮ್ತಾಜ್ ಕುಟುಂಬಸ್ಥರು ಮಗಳ ಕ್ರೀಡಾ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಮ್ತಾಜ್ ಖಾನ್, ಹಾಕಿ ಸ್ಟಿಕ್‌ನೊಂದಿಗೆ ಭಾರತದ ಪ್ರಬಲ ಎದುರಾಳಿಗಳನ್ನು ಹಿಮ್ಮೆಟ್ಟಿಸುವುದಲ್ಲದೇ, ತನ್ನ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂಬ ಕೊರಗನ್ನು ಕೂಡ ದೂರ ಮಾಡಿದ್ದಾರೆ. ಈಕೆಗೆ 5 ಜನ ಸಹೋದರಿಯರಿದ್ದು, ತಂದೆ-ತಾಯಿಯ ಬದುಕಿಗೆ ಸಾಥ್​ ನೀಡುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಮುಮ್ತಾಜ್ ಖಾನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪೋಷಕರು

ಮುಮ್ತಾಜ್ ಖಾನ್ ಅವರ ತಾಯಿ ಕೈಸರ್ ಜಹಾನ್, ಪುತ್ರಿಯ ಸಾಧನೆ ಗುರುತಿಸಿ ಈ ಹಿಂದೆ ಟೀಕಿಸಿದ ಎಲ್ಲರಿಗೂ ತಿರುಗೇಟು ನೀಡಿದ್ದಾರೆ. "ನನಗೆ ಹೆಣ್ಣುಮಕ್ಕಳು ಮಾತ್ರ ಇದ್ದಾರೆ ಎಂದು ಜನ ಆಗಾಗ ಟೀಕೆ ಮಾಡುತ್ತಿದ್ದರು. ಆದ್ರೆ, ಮುಮ್ತಾಜ್ ನಮಗೆ ಗೌರವ ತಂದು ಕೊಟ್ಟಿದ್ದಾಳೆ. ನನ್ನ ಮಗಳು ದೇಶಕ್ಕಾಗಿ ಆಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಗಂಡು ಮಕ್ಕಳು ಬೇಕು ಎಂಬ ಸಾಮಾಜಿಕ ಕಳಂಕಗಳನ್ನು ಆಕೆ ಮುರಿದಿದ್ದಾಳೆ. ನನ್ನ ಮಗಳು 100 ಗಂಡು ಮಕ್ಕಳಿಗೆ ಸಮಾನ" ಎಂದು ಸಂಭ್ರಮದಿಂದ ನುಡಿದರು.

ಮಾಧ್ಯಮಗಳೊಂದಿಗೆ ಮುಮ್ತಾಜ್ ಖಾನ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸಹೋದರಿ ಫರ್ಹಾ ಖಾನ್, "ನನ್ನ ಸಹೋದರಿ ಅಂತರರಾಷ್ಟ್ರೀಯ ಹಾಕಿ ಆಟಗಾರ್ತಿ ಎಂಬುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಬಡತನದ ನಡುವೆಯೂ ಪೋಷಕರು ನಮಗಿಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಸಾಧನೆ ಮಾಡಲು ಬೆಂಬಲ ನೀಡುತ್ತಿದ್ದಾರೆ. ನನ್ನ ತಂದೆ ಹಫೀಜ್ ಖಾನ್ ತರಕಾರಿ ಮಾರಾಟ ಮಾಡಿಕೊಂಡಿದ್ದು, ಎಲ್ಲಾ ಮಕ್ಕಳಿಗೂ ಸಪೋರ್ಟ್​ ಮಾಡುತ್ತಾರೆ" ಎಂದರು.

ಇದನ್ನೂ ಓದಿ: ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ: ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶ

Last Updated : Apr 4, 2022, 12:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.