ETV Bharat / bharat

ಕಣ್ಣು ಬಿಟ್ಟ ಕೂಸು ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಅಪ್ಪ.. ಒಂದೇ ಕಡೆ ಮಗು ಜನನ, ತಂದೆ ಮರಣ

ಆಂಧ್ರದಲ್ಲಿ ಆಸ್ಪತ್ರೆಯಲ್ಲಿ ಮಗು ಜನಸಿದ್ದು, ಅದೇ ಆಸ್ಪತ್ರೆಯಲ್ಲಿ ಮಗುವಿನ ತಂದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

author img

By ETV Bharat Karnataka Team

Published : Oct 22, 2023, 12:26 PM IST

ಒಂದೇ ಕಡೆ ಮಗು ಜನನ, ತಂದೆ ಮರಣ
ಒಂದೇ ಕಡೆ ಮಗು ಜನನ, ತಂದೆ ಮರಣ

ಪಲ್ನಾಡು(ಆಂಧ್ರಪ್ರದೇಶ): ಒಂದೆಡೆ ಜನನ.. ಇನ್ನೊಂದೆಡೆ ಮರಣ.. ಈ ಎರಡು ಘಟನೆಗಳು ಒಂದೇ ದಿನ ಒಂದೇ ಕುಟುಂಬದಲ್ಲಿ ನಡೆದಿವೆ. ಮಗು ಜನಿಸಿದ್ದಕ್ಕೆ ಸಂಭ್ರಮಿಸಬೇಕಿದ್ದ ಕುಟುಂಬಕ್ಕೆ ಮಗುವಿನ ತಂದೆ ಶವವಾಗಿ ಅದೇ ಆಸ್ಪತ್ರೆಯ ಬೆಡ್​ ಮೇಲಿರುವುದು ಆಕಾಶವೇ ತಲೆಮೇಲೆ ಕಳಚಿ ಬಿದ್ದಂತಾಗಿದೆ. ಆಂಧ್ರಪ್ರದೇಶದಲ್ಲಿ ಈ ಕರುಳು ಹಿಂಡುವ ಕರುಣಾಜನಕ ಘಟನೆ ನಡೆದಿದೆ. ಒಂದೇ ಆಸ್ಪತ್ರೆಯಲ್ಲಿ ಮಗು ಜಗತ್ತನ್ನು ನೋಡಲು ಕಣ್ಣು ತೆರೆಯುವಷ್ಟರಲ್ಲಿ ತನ್ನ ಪ್ರಪಂಚವಾಗಿರಬೇಕಾದ ಅಪ್ಪ ಕೊನೆಯುಸಿರೆಳೆದಿದ್ದಾರೆ.

ಹೌದು, ಒಂದೆಡೆ ಆರೋಗ್ಯ ಶ್ರೀ, ಜಗನಣ್ಣಶ್ರೀ ಆರೋಗ್ಯ ಸುರಕ್ಷಾ ಯೋಜನೆಗಳು ಇದ್ದು ಬಡವರಿಗೆ ಆಸರೆಯಾಗುತ್ತಿದೆ ಎಂದು ಸರ್ಕಾರದ ಮುಖಂಡರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಇಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯವೇ ಇಲ್ಲದಂತಾಗಿದೆ. ತುಂಬು ಗರ್ಭಿಣಿ ರಾತ್ರೋರಾತ್ರಿ ಹೆರಿಗೆಗೆ ಮೂರು ಮೂರು ಆಸ್ಪತ್ರೆಗೆ ತಿರುಗುವ ಅವ್ಯವಸ್ಥೆ ಉಂಟಾಗಿದೆ.

ನಡೆದಿದ್ದೇನು?: ಕಾರಂಪುಡಿಯ ಬತ್ತಿನ ಆನಂದ್ ಅವರ ಪತ್ನಿ ರಾಮಾಂಜಿನಿ ತುಂಬು ಗರ್ಭಿಣಿಯಾಗಿದ್ದು, ಅವರಿಗೆ ಶುಕ್ರವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ರಾತ್ರಿ 9 ಗಂಟೆಗೆ ಆನಂದ ತನ್ನ ಪತ್ನಿಯನ್ನು ಆಶಾ ಕಾರ್ಯಕರ್ತೆಯರ ಜತೆ ಕಾರಂಪುಡಿ ಪಿಎಚ್‌ಸಿ(ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ) ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಗುರಜಾಲ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. 108 ಆಂಬ್ಯುಲೆನ್ಸ್ ನಲ್ಲಿ 20 ಕಿ.ಮೀ ದೂರದ ಗುರಜಾಲ ಆಸ್ಪತ್ರೆಗೆ ಬಂದರು. ಇಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದ್ದು, ರಕ್ತಹೀನತೆ ಕಂಡು ಬಂದಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು.

ಮತ್ತೆ ಅಲ್ಲಿಂದ 70 ಕಿ.ಮೀ. ದೂರದ ನರಸರಾಯಪೇಟೆಗೆ ಹೋಗಿ ದಾಖಲು ಮಾಡಿದರು. ಆದರೆ ಇಲ್ಲಿ ದುರದೃಷ್ಟವಶಾತ್​ ಪತಿ ಆನಂದ್​ ಹೆಂಡತಿಯನ್ನು ನರಸರಾಯಪೇಟೆ ಆಸ್ಪತ್ರೆಗೆ ಆಂಬ್ಯುಲೆನ್ಸ್​ನಲ್ಲಿ ಕಳುಹಿಸಿ ತಾನು ದ್ವಿಚಕ್ರವಾಹನದಲ್ಲಿ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಜೂಲಕಲ್ಲು ಎಂಬಲ್ಲಿ ರಸ್ತೆಯ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಕಾರಂಪುಡಿಯಿಂದ ಆಂಬುಲೆನ್ಸ್‌ನಲ್ಲಿ ನರಸರಾವ್‌ಪೇಟೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮುಂಜಾನೆ ಪತ್ನಿಗೆ ಹೆಣ್ಣು ಮಗುವಿನ ಜನನವಾಯಿತು. ಆದರೆ ಇತ್ತ ಗಾಯಗೊಂಡಿದ್ದ ಆನಂದ್​ ತನ್ನ ಪತ್ನಿ, ಮಗುವನ್ನು ನೋಡುವ ಮುನ್ನವೇ ಕಣ್ಮುಚ್ಚಿದ್ದರು. ಈ ಘಟನೆಯಿಂದ ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ. ಇತ್ತ ಪತಿಯನ್ನು ಕಳೆದುಕೊಂಡ ರಾಮಾಂಜಿನಿಗೆ ಮಗು ಜನಿಸಿದ್ದಕ್ಕೆ ಸಂತಸ ಪಡಲಾರದೆ ಮಮ್ಮಲ ಮರುಗುವಂತಾಗಿದೆ.

ಇದನ್ನೂ ಓದಿ: ಗರ್ಬಾ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಬಾಲಕ ಸಾವು.. ಸಂಭ್ರಮದ ಮಧ್ಯೆ ಮಡುಗಟ್ಟಿದ ಶೋಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.