ಸೂರ್ಯಪೇಟೆ(ತೆಲಂಗಾಣ) : ಗಾಂಜಾ (ಮರಿಜುವಾನಾ) ವ್ಯಸನಿಯಾಗಿದ್ದ ತನ್ನ ಮಗನಿಗೆ ತಾಯಿಯೋರ್ವಳು ಭಾರಿ ಶಿಕ್ಷೆ ನೀಡಿದ್ದಾಳೆ. ಸೂರ್ಯಪೇಟೆ ಜಿಲ್ಲೆಯ ಕೊಡಾದ ನಗರದ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕ ಎರಡು ವರ್ಷಗಳಿಂದ ಗಾಂಜಾ ಚಟಕ್ಕೆ ಬಿದ್ದಿದ್ದ. ಗಾಂಜಾ ಸೇವನೆಯನ್ನು ನಿಲ್ಲಿಸುವಂತೆ ತಾಯಿ ಹೇಳಿದರೂ ಆತ ಅವಳ ಮಾತನ್ನು ಕೇಳಿರಲಿಲ್ಲ. ಪರಿಣಾಮ ತಾಯಿ ಈ ನಿರ್ಧಾರಕ್ಕೆ ಬಂದಿದ್ದಾಳೆ.
ಅವನ ವರ್ತನೆಯಿಂದ ಬೇಸತ್ತ ತಾಯಿ, ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಅಮಾನುಷವಾಗಿ ಥಳಿಸಿದ್ದಾಳೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: 10 ದಿನದ ವಿಕಲಚೇತನ ಶಿಶುವನ್ನ ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟೋದ ನಿರ್ದಯಿ ಪೋಷಕರು
ಕೆಲವು ನೆಟಿಜನ್‌ಗಳು ತಾಯಿಯ ಕ್ರಮವನ್ನು ಬೆಂಬಲಿಸಿದ್ದರೆ, ಕೆಲವರು ಮಗನೊಂದಿಗೆ ಕ್ರೂರವಾಗಿ ವರ್ತಿಸಬಾರದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಸಲಹೆ ನೀಡುತ್ತಿದ್ದಾರೆ.