ವಿಶಾಖಪಟ್ಟಣ(ಆಂಧ್ರಪ್ರದೇಶ): ಸಣ್ಣ ಹೊಳೆಯೊಂದನ್ನು ದಾಟುವ ವೇಳೆ ತಾಯಿ ಮತ್ತು ಮಗ ಇಬ್ಬರೂ ಕೊಚ್ಚಿ ಹೋಗಿರುವ ದುರ್ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದ್ದು, ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ.
ಪೆದ್ದಬಯಲು ಮಂಡಲ್ನ ಚಿಕಟಿಪಲ್ಲಿ ಗ್ರಾಮದವರಾದ ರಾಮುಲಮ್ಮ ಮತ್ತು ಆಕೆಯ ಮಗ ಪ್ರಶಾಂತ್ ವಾರದ ಸಂತೆಗಾಗಿ ಜಿ.ಮಡುಗುಲ ಮಂಡಲ್ನ ಮಡ್ಡಿಗರುವು ಪ್ರದೇಶಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ.
ಚಿಕುಪನಸಾ ಬಳಿಯ ಗುಡ್ಡದ ಬಳಿ ಸಣ್ಣ ಹೊಳೆಯನ್ನು ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಬಂದ ಪ್ರವಾಹದಿಂದ ಇಬ್ಬರೂ ಕೊಚ್ಚಿ ಹೋಗಿದ್ದಾರೆ. ಗ್ರಾಮಸ್ಥರು ಮೃತದೇಹಗಳನ್ನು ಹೊರತೆಗೆದಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Breaking News... Air Indiaವನ್ನು ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ TATA ಗ್ರೂಪ್.. ವರದಿ