ETV Bharat / bharat

ಮೋರ್ಬಿ ದುರಂತ: ನ್ಯಾಯಾಂಗ ತನಿಖೆಗಾಗಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ - ಸುಪ್ರೀಂಕೋರ್ಟ್

ನ.14 ರಂದು ಗುಜರಾತ್ ಮೋರ್ಬಿ ಸೇತುವೆ ಕುಸಿತದ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.

Morbi bridge collapse
ಮೋರ್ಬಿ ಸೇತುವೆ ಕುಸಿತ
author img

By

Published : Nov 1, 2022, 2:11 PM IST

ನವದೆಹಲಿ: ಗುಜರಾತ್‌ನ ಮೋರ್ಬಿ ಸೇತುವೆ ಕುಸಿತ ದುರಂತದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ.14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ವಕೀಲ ವಿಶಾಲ್ ತಿವಾರಿ ಅವರು ತುರ್ತು ವಿಚಾರಣೆಗಾಗಿ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾ.ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ನೀವು ಬಹಳ ಫಾಸ್ಟ್. ನಿಮ್ಮ ಮನವಿ ಏನು ಎಂದು ಕೇಳಿದೆ.

ಈ ವೇಳೆ, 'ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆಗೆ ನಾನು ಕೋರುತ್ತಿದ್ದೇನೆ' ಎಂದು ವಕೀಲರು ಹೇಳಿದರು. ನಂತರ ಪೀಠವು ನವೆಂಬರ್ 14 ರಂದು ಪಿಐಎಲ್ ಅನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದೆ.

'ಸೇತುವೆ ಕುಸಿತ 134ಕ್ಕೂ ಹೆಚ್ಚು ಸಾವು ನೋವುಗಳಿಗೆ ಕಾರಣವಾಗಿದೆ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಕಳೆದ ಒಂದು ದಶಕದಿಂದ, ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ ನಿರ್ವಹಣೆ ಚಟುವಟಿಕೆಗಳಿಂದಾಗಿ ನಮ್ಮ ದೇಶದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಆದರೆ, ಅಪಾರ ಪ್ರಮಾಣದ ಸಾರ್ವಜನಿಕ ಸಾವುನೋವುಗಳನ್ನು ತಪ್ಪಿಸಬಹುದಾಗಿತ್ತು' ಎಂದು ಪಿಐಎಲ್‌ನಲ್ಲಿ ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: ಮೊರ್ಬಿ ತೂಗು ಸೇತುವೆ ಕುಸಿದು 60 ಜನರ ಸಾವು: ಗುಜರಾತ್​ ದುರಂತಕ್ಕೆ ನಿಜವಾದ ಕಾರಣವೇನು?

ಘಟನೆಯ ಹಿನ್ನೆಲೆ ಹೀಗಿದೆ: ಮೋರ್ಬಿಯ ಮಚ್ಚು ನದಿಯ ಮೇಲೆ ಶತಮಾನಕ್ಕೂ ಹೆಚ್ಚು ಹಳೆಯದಾದ ತೂಗು ಸೇತುವೆಯನ್ನು ವ್ಯಾಪಕ ದುರಸ್ತಿ ಮತ್ತು ನವೀಕರಣದ ನಂತರ ಐದು ದಿನಗಳ ಹಿಂದಷ್ಟೇ ಮತ್ತೆ ತೆರೆಯಲಾಗಿತ್ತು. ಜನರಿಂದ ಕಿಕ್ಕಿರಿದಿದ್ದ ಸೇತುವೆ ಭಾನುವಾರ ಸಂಜೆ 6.30ರ ಸುಮಾರಿಗೆ ಕುಸಿದು ಬಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 140 ಕ್ಕೂ ಹೆಚ್ಚಾಗಿದೆ.

ವರದಿಗಳ ಪ್ರಕಾರ ಸೇತುವೆಯನ್ನು ನಿರ್ವಹಣೆಗಾಗಿ ಸುಮಾರು 8 ತಿಂಗಳ ಕಾಲ ಮುಚ್ಚಲಾಗಿದ್ದು, ದುರಸ್ತಿ ಕಾರ್ಯವನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಘಟನೆ ಸಂಬಂಧ ಗುಜರಾತ್ ಪೊಲೀಸರು ಐಪಿಸಿ ಸೆಕ್ಷನ್ 304 ಮತ್ತು 308 (ನರಹತ್ಯೆಗೆ ಯತ್ನ) ಅಡಿಯಲ್ಲಿ ಎಫ್​ಐಆರ್​​ ದಾಖಲಿಸಿದ್ದಾರೆ. ಅಲ್ಲದೇ ಸೇತುವೆ ಕುಸಿತದ ಘಟನೆಯ ತನಿಖೆಗಾಗಿ ಗುಜರಾತ್ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ.

ಇದನ್ನೂ ಓದಿ: ಮೋರ್ಬಿ ತೂಗು ಸೇತುವೆ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.