ಹರ್ದೊಯಿ(ಉತ್ತರ ಪ್ರದೇಶ): ಇಲ್ಲಿನ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ಬೈಕ್ನಲ್ಲಿಟ್ಟಿದ್ದ ಮೂರು ಲಕ್ಷ ರೂ ಹಣವಿದ್ದ ಬ್ಯಾಗ್ನೊಂದಿಗೆ ಕೋತಿಯೊಂದು ಮರವೇರಿ ಕುಳಿತ ಘಟನೆ ಉತ್ತರ ಪ್ರದೇಶದ ಹರ್ದೊಯಿಯಲ್ಲಿ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ಗಂಟೆಗಳ ಕಾಲ ಹರಸಾಹಸಪಟ್ಟು ಮಂಗನನ್ನು ಹಿಡಿದು, ಬ್ಯಾಗ್ ಅನ್ನು ಮಾಲೀಕನಿಗೆ ನೀಡಿದರು.
ಘಟನೆಯ ಸಂಪೂರ್ಣ ವಿವರ
ಪ್ಲಾಟ್ ಖರೀದಿ ಮಾಡಲು ತೆರಳುತ್ತಿದ್ದ ಯುವಕನೋರ್ವ ಕೆಲಸದ ನಿಮಿತ್ಯ ಪೊಲೀಸ್ ಠಾಣೆ ಎದುರು ಬೈಕ್ ನಿಲ್ಲಿಸಿದ್ದ. ಈ ವೇಳೆ ಹಣವಿದ್ದ ಬ್ಯಾಗ್ ಅನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಇದನ್ನು ಮರದಲ್ಲಿ ಕುಳಿತಿದ್ದ ಮಂಗ ಗಮನಿಸುತ್ತಿತ್ತು. ತನ್ನ ಕೆಲಸ ಮುಗಿಸಿಕೊಂಡು ಯುವಕ ವಾಪಸ್ ಬಂದು ನೋಡಿದಾಗ ಬ್ಯಾಗ್ ಅನ್ನು ಕಿತ್ತುಕೊಂಡಿದ್ದ ಮಂಗ ಮರವೇರಿ ಕುಳಿತಿತ್ತು.ಇದನ್ನು ಗಮನಿಸಿದ ಆತ ಈ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.
ಬಮತಾಪುರ ಗ್ರಾಮದ ನಿವಾಸಿ ಆಶಿಶ್ ಹರ್ದೊಯಿನಲ್ಲಿ ಪ್ಲಾಟ್ ಖರೀದಿ ಮಾಡಿದ್ದರು. ಅದಕ್ಕೆ ಹಣ ಪಾವತಿ ಮಾಡಲು 3 ಲಕ್ಷ ರೂ.ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕೆಲಸವಿದ್ದ ಕಾರಣ, ಬ್ಯಾಗ್ ಬೈಕ್ನಲ್ಲಿಟ್ಟು ಒಳಗೆ ಹೋಗಿದ್ದಾರೆ. ಈ ವೇಳೆ ಕೋತಿಯೊಂದು ಬೈಕ್ ಮೇಲೆ ಕುಳಿತುಕೊಂಡು ಚೀಲ ಕಿತ್ತುಕೊಂಡು ಮರವೇರಿತ್ತು.
ಇದನ್ನೂ ಓದಿ: ಯುಪಿಯಲ್ಲಿ ಅತ್ಯಂತ ಅಮಾನವೀಯ ಕೃತ್ಯ: 3 ತಿಂಗಳ ಹಸುಳೆ ಮೇಲೆ ಕಾಮುಕನಿಂದ ಅತ್ಯಾಚಾರ
ಸ್ಥಳಕ್ಕಾಗಮಿಸಿದ ಪೊಲೀಸರು ಕೆಲ ಗಂಟೆಗಳ ಕಾಲ ಶ್ರಮವಹಿಸಿ ಕೋತಿ ಹಿಡಿಯುವಲ್ಲಿ ಯಶಸ್ವಿಯಾದರು. ಹಣದ ಬ್ಯಾಗ್ ಅನ್ನು ಯುವಕನಿಗೆ ಒಪ್ಪಿಸಿದರು.