ಮಂಡಲ (ಮಧ್ಯಪ್ರದೇಶ) : ಮಂಗವೊಂದು ಲಿಕ್ಕರ್ ಶಾಪ್ಗೆ ನುಗ್ಗಿ ಮದ್ಯ ಸೇವಿಸಿದ ಘಟನೆ ಜಿಲ್ಲೆಯ ಬಮ್ಹಾನಿ ಬಜಾರ್ನಲ್ಲಿ ನಡೆದಿದೆ.
ಬಮ್ಹಾನಿ ಬಜಾರ್ನ ಅಂಗ್ರೇಜಿ (ಇಂಗ್ಲಿಷ್) ಮದ್ಯದಂಗಡಿಗೆ ನುಗ್ಗಿದ ಕೋತಿರಾಯ, ಮೊದಲು ಅಧಿಕಾರಿಯಂತೆ ಪುಸ್ತಕಗಳನ್ನು ಪರಿಶೀಲನೆ ನಡೆಸಿದ್ದಾನೆ. ಬಳಿಕ ಮದ್ಯದ ಬಾಟಲಿಯೊಂದನ್ನು ಎತ್ತಿಕೊಂಡು ಗಟಗಟನೆ ಮದ್ಯ ಸೇವಿಸಿದ್ದಾನೆ.
ಪ್ರೊಫೆಷನಲ್ ಕುಡುಕನಿಗಿಂತ ಒಂದು ಕೈ ಮೇಲು ಎಂಬಂತೆ ಮಂಗ ಮದ್ಯ ಸೇವಿಸುವುದನ್ನು ನೋಡಿದ ಅಂಗಡಿಯವನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಹಾಗಾಗಿ, ಆತ ಮತ್ತು ಸುತ್ತಲೂ ನೆರೆದಿದ್ದ ಜನ ಮೂಕ ಪ್ರೇಕ್ಷಕರಾಗಿದ್ದರು.
ಓದಿ : ಅಪಘಾತಕ್ಕೀಡಾದ ಸೇನಾ ವಾಹನ : ಜವಾನ ಸಾವು, ಏಳು ಮಂದಿಗೆ ಗಾಯ
ಒಳ್ಳೆಯ ಬೆಲೆಯ ಎಣ್ಣೆ ಬಾಟಲಿಯನ್ನು ಕುಡಿದು ಮುಗಿಸಿದ ಕಪಿರಾಯಗೆ ಒಂದು ಕ್ಷಣ ತಲೆ ಗಿರ್ ಅಂದಿದೆ. ಆಗ ಅಂಗಡಿಯವರು ನೀರು ಕುಡಿಸಿ, ಬಿಸ್ಕೇಟ್ ಕೊಟ್ಟು ಉಪಚರಿಸಿದರು. ಮಂಗ ಮದ್ಯ ಕುಡಿಯುವುದನ್ನು ನೋಡಲು ಜನ ಮುಗಿ ಬಿದ್ದಿದ್ದರು.