ಗುವಾಹಟಿ (ಅಸ್ಸೋಂ): ದಾರಿ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ತನ್ನ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಅನ್ನು ಚರಂಡಿಗೆಸೆದ ಮಹಿಳೆ, ಆತ ತಪ್ಪಿಸಿಕೊಳ್ಳದಂತೆ ತಡೆದಿರುವ ಘಟನೆ ನಗರದ ಜನನಿಬಿಡ ಪ್ರದೇಶದಲ್ಲಿ ನಡೆದಿದೆ.
- " class="align-text-top noRightClick twitterSection" data="">
ಭಾವನ ಕಶ್ಯಪ್ ಎಂಬ ಮಹಿಳೆ ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ.
ಆರೋಪಿ ನನ್ನ ಬಳಿ ಬಂದು ದಾರಿ ಕೇಳಿದ, ನಾನು ಗೊತ್ತಿಲ್ಲ ಎಂದೆ. ತಕ್ಷಣ ಆತ ನನ್ನ ಹತ್ತಿರ ಬಂದು ಖಾಸಗಿ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದ. ಅಲ್ಲದೇ, ನನ್ನ ದೇಹದ ಮೇಲೆ ಕೈ ಹಾಕಿ ಲೈಂಗಿಕವಾಗಿ ದಾಳಿ ಮಾಡಲು ಮುಂದಾಗಿದ್ದಾನೆ. ಇದರಿಂದ ಅರೆಕ್ಷಣ ನನಗೆ ಏನು ಮಾಡಬೇಕು ಎಂದು ತೋಚದೆ ವಿಚಲಿತಳಾದೆ ಎಂದು ಮಹಿಳೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾಳೆ.
ಓದಿ: ಹಲ್ಲೆ ಮಾಡಿದವರ ಮನೆ ಮುಂದೆ ಶವ ಸುಟ್ಟ ಸಂಬಂಧಿಕರು: ಸ್ಥಳದಲ್ಲಿದ್ದ ಪೊಲೀಸರು ಮಾಡಿದ್ದೇನು?
ಆತನ ಸ್ಕೂಟರ್ ಅನ್ನು ಚರಂಡಿಗೆ ದೂಡಿ ಹಾಕಿದ ಬಳಿಕ ಈ ವಿಡಿಯೋ ಮಾಡಲಾಗಿದೆ ಎಂದು ಮಹಿಳೆ ತಿಳಿಸಿದ್ದಾಳೆ. ಆರೋಪಿ ತಕ್ಷಣ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ, ಆದರೆ, ನಾನು ಬಿಡಲಿಲ್ಲ. ಆತನ ಸ್ಕೂಟರ್ ಅನ್ನು ಎಳೆದು ಹಿಡಿದೆ. ಅಷ್ಟೊತ್ತಿಗೆ ಸ್ಥಳೀಯರು ನನ್ನ ಸಹಾಯಕ್ಕೆ ಬಂದರು. ಆರೋಪಿ ನನ್ನ ಬಳಿ ಸ್ಕೂಟರ್ ಮೇಲೆತ್ತಿ ಕೊಡುವಂತೆ ಕೇಳಿಕೊಂಡ. ಮದುಸಾನ ರಾಜ್ಕುಮಾರ್ ಎಂದು ಆತನ ಹೆಸರು ಗೊತ್ತಾಗಿದೆ ಎಂದು ಮಹಿಳೆ ತಿಳಿಸಿದ್ದಾಳೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ದ ಗುವಾಹಟಿಯ ರುಕ್ಮಿಣಿ ನಗರದ ಡಿಸ್ಪೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.