ETV Bharat / bharat

Modi to meet Musk: ಅಮೆರಿಕದಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭೇಟಿ ಮಾಡಲಿದ್ದಾರೆ ಪ್ರಧಾನಿ ಮೋದಿ - Etv Bharat Kannada

ಮೂರು ದಿನಗಳ ಪ್ರವಾಸಕ್ಕೆ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದು, ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಸೇರಿದಂತೆ ಹಲವು ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

Modi US visit: PM to meet Tesla founder Elon Musk first after Twitter take over
ಅಮೆರಿಕಾದಲ್ಲಿ ಎಲೋನ್ ಮಸ್ಕ್ ಭೇಟಿಯಾಗಲಿರುವ ಪ್ರಧಾನಿ ಮೋದಿ
author img

By

Published : Jun 20, 2023, 3:51 PM IST

ಹೈದರಾಬಾದ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಹ್ವಾನದ ಮೇರೆಗೆ​ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಟ್ವಿಟರ್ ಮಾಲೀಕ, ಟೆಸ್ಲಾ ಕಂಪೆನಿ ಸಹ ಸಂಸ್ಥಾಪಕ ಎಲೋನ್ ಮಸ್ಕ್ ಅವರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಇದರ ಜೊತೆಗೆ ನೊಬೆಲ್ ಪ್ರಶಸ್ತಿ ಪುರಸ್ಕೃತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರು ಸೇರಿದಂತೆ ಸುಮಾರು 24 ಗಣ್ಯರನ್ನೂ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

2022ರ ಅಕ್ಟೋಬರ್‌ನಲ್ಲಿ ಮಸ್ಕ್​ ಟ್ವಿಟರ್​ ಕಂಪೆನಿ ಖರೀದಿಸಿದ ನಂತರ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅವರನ್ನು ಭೇಟಿಯಾಗುತ್ತಿದ್ದಾರೆ. ಟೆಸ್ಲಾ ಮೋಟಾರ್ಸ್ ಸಿಇಒ ಆಗಿರುವ ಮಸ್ಕ್​ ತಮ್ಮ ಟೆಸ್ಲಾ ಸಂಸ್ಥೆ ವಿಸ್ತರಣೆಯ ಬಗ್ಗೆ ಒಲವು ಹೊಂದಿದ್ದಾರೆ. ಭಾರತದಲ್ಲಿ ಉತ್ಪಾದನಾ ಘಟಕ ತೆರೆಯಲು ತಾವು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ, 2015ರ ಸೆಪ್ಟೆಂಬರ್​ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ ಮಸ್ಕ್​ ಅವರೊಂದಿಗೆ ಮೋದಿ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: PM Modi US Visit: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ.. ನಿರ್ಗಮನಕ್ಕೆ ಮುನ್ನ ಹೇಳಿದ್ದೇನು?

ಇತ್ತೀಚೆಗೆ ಎಲೋನ್ ಮಸ್ಕ್ ಯುರೋಪಿಯನ್ ಪ್ರವಾಸಕ್ಕೆ ಕೈಗೊಂಡಿದ್ದರು. ಅಲ್ಲಿ ಅವರು ವಿವಿಧ ನಾಯಕರೊಂದಿಗೆ ಸುದೀರ್ಘ ಸಭೆಗಳನ್ನು ನಡೆಸಿದ್ದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನೂ ಭೇಟಿಯಾಗಿದ್ದರು. ಫ್ರಾನ್ಸ್ ಕೂಡ ಟೆಸ್ಲಾ ಫ್ಯಾಕ್ಟರಿ ಹೊಂದುವ ಆಸಕ್ತಿ ತೋರಿಸಿದೆ. ಇದು ಸ್ಥಾಪನೆಯಾದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಫ್ರಾನ್ಸ್​ ಹೊಂದಿದೆ. ಮಸ್ಕ್​ ಭೇಟಿಯಾದ ನಂತರ ಮ್ಯಾಕ್ರನ್, "ನಾವು ಒಟ್ಟಿಗೆ ಕೆಲಸ ಮಾಡೋಣ. ಫ್ರಾನ್ಸ್ ​ಅನ್ನು ಆಯ್ಕೆ ಮಾಡಿ" ಎಂದು ಮಸ್ಕ್​ ಜೊತೆಗಿರುವ ಫೋಟೋ ಟ್ವೀಟ್​ ಮಾಡಿದ್ದರು. ಇದನ್ನು ಮಸ್ಕ್ ರಿಟ್ವೀಟ್ ಕೂಡಾ ಮಾಡಿಕೊಂಡಿದ್ದರು.

ಮತ್ತೊಂದೆಡೆ, ಪ್ರಧಾನಿ ಮೋದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ವೈವಿಧ್ಯೀಕರಣದ ಅಗತ್ಯತೆಯ ಬಗ್ಗೆ ಮಾತನಾಡಿದ್ದು ಗಮನಾರ್ಹ. ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿದೆ, ಅವಲಂಬಿತವಾಗಿದೆ. ಸ್ಥಿತಿಸ್ಥಾಪಕತ್ವವನ್ನು ಸೃಷ್ಟಿಸಲು, ಪೂರೈಕೆ ಸರಪಳಿಗಳಲ್ಲಿ ಹೆಚ್ಚಿನ ವೈವಿಧ್ಯತೆ ಇರಬೇಕು ಎಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರಮುಖರ ಭೇಟಿ: ಪ್ರಧಾನಿ ಮೋದಿ ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಹಲವು ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್, ಗ್ರ್ಯಾಮಿ ಪ್ರಶಸ್ತಿ ವಿಜೇತ, ಅಮೆರಿಕ-ಭಾರತೀಯ ಮೂಲಕ ಗಾಯಕ ಫಾಲು (ಫಲ್ಗುಣಿ ಶಾ), ಪಾಲ್ ರೋಮರ್, ನಿಕೋಲಸ್ ನಾಸಿಮ್ ತಾಲೆಬ್, ರೇ ಡಾಲಿಯೊ, ಜೆಫ್ ಸ್ಮಿತ್, ಮೈಕೆಲ್ ಫ್ರೊಮಾನ್ ಡೇನಿಯಲ್ ರಸ್ಸೆಲ್, ಎಲ್ಬ್ರಿಡ್ಜ್ ಕಾಲ್ಬಿ, ಡಾ ಪೀಟರ್ ಅಗ್ರೆ, ಚಂದ್ರಿಕಾ ಟ್ಲಾಸ್ಕೊ ಮತ್ತು ಡಾ ಸ್ಟೀಫನ್ ಕ್ಲಾಸ್ಕೊನ್ ಅವರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: Modi US visit: ಇಂದಿನಿಂದ ಪ್ರಧಾನಿ ಮೋದಿ ಅಮೆರಿಕ, ಈಜಿಪ್ಟ್‌ ಪ್ರವಾಸ: ಕಾರ್ಯಕ್ರಮಗಳು ಹೀಗಿವೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.