ಗಾಂಧಿನಗರ (ಗುಜರಾತ್): ನರೇಂದ್ರ ಮೋದಿ ದೇಶದ ಅತ್ಯಂತ ಯಶಸ್ವಿ ಪ್ರಧಾನಿ ಮತ್ತು ಪ್ರಸ್ತುತ ಪೀಳಿಗೆಯ ಶ್ರೇಷ್ಠ ಜಾಗತಿಕ ನಾಯಕ ಎಂದು ಖ್ಯಾತ ಉದ್ಯಮಿ, ಬಿಲಿಯನೇರ್ ಮುಖೇಶ್ ಅಂಬಾನಿ ಬಣ್ಣಿಸಿದ್ದಾರೆ. ಇದೇ ವೇಳೆ, ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತಿ ಪರಂಪರೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 150 ಶತಕೋಟಿ ಡಾಲರ್ (12 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
-
STORY | Modi most successful Indian PM, greatest global leader, says Mukesh Ambani
— Press Trust of India (@PTI_News) January 10, 2024 " class="align-text-top noRightClick twitterSection" data="
READ: https://t.co/EIWtvnwF3P
WATCH: pic.twitter.com/L9SUcOtU2N
">STORY | Modi most successful Indian PM, greatest global leader, says Mukesh Ambani
— Press Trust of India (@PTI_News) January 10, 2024
READ: https://t.co/EIWtvnwF3P
WATCH: pic.twitter.com/L9SUcOtU2NSTORY | Modi most successful Indian PM, greatest global leader, says Mukesh Ambani
— Press Trust of India (@PTI_News) January 10, 2024
READ: https://t.co/EIWtvnwF3P
WATCH: pic.twitter.com/L9SUcOtU2N
ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ ಅಂಬಾನಿ, ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಹೂಡಿಕೆದಾರರ ಶೃಂಗಸಭೆ. ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ನಮ್ಮ ಪ್ರೀತಿಯ ನಾಯಕ ನರೇಂದ್ರಭಾಯಿ ಮೋದಿ. ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಪ್ರಧಾನಿ. ಮೋದಿ ಮಾತನಾಡುವಾಗ ಇಡೀ ಜಗತ್ತು ಕೇಳುವುದಷ್ಟೇ ಅಲ್ಲ, ಚಪ್ಪಾಳೆ ತಟ್ಟುತ್ತದೆ ಎಂದು ಹೇಳಿದರು.
ಮೋದಿ ಹೈ ತೋ ಮುಮ್ಕಿನ್ ಹೈ: ವಿದೇಶದಲ್ಲಿರುವ ನನ್ನ ಸ್ನೇಹಿತರು, ಲಕ್ಷಾಂತರ ಭಾರತೀಯರು ಜಪಿಸುತ್ತಿರುವ 'ಮೋದಿ ಹೈ ತೋ ಮುಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಘೋಷಣೆಯ ಅರ್ಥವೇನು ಎಂದು ನನ್ನನ್ನು ಕೇಳುತ್ತಾರೆ?, ಇದರರ್ಥ ಭಾರತದ ಪ್ರಧಾನಿ ತಮ್ಮ ದೂರದೃಷ್ಟಿ, ದೃಢತೆ ಮತ್ತು ಕಾರ್ಯದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ ಎಂದು ನಾನು ಅವರಿಗೆ ಹೇಳುತ್ತೇನೆ. ಇದನ್ನು ಅವರು ಒಪ್ಪುತ್ತಾರೆ ಮತ್ತು ಅವರು ಕೂಡ ಮೋದಿ ಹೈ ತೋ ಮಮ್ಕಿನ್ ಹೈ ಎಂದು ಹೇಳುತ್ತಾರೆ ಎಂಬುವುದಾಗಿ ಅಂಬಾನಿ ವಿವರಿಸಿದರು.
ಇದೇ ವೇಳೆ, ನಾನು ಹೆಮ್ಮೆಯ ಗುಜರಾತಿ. ರಿಲಯನ್ಸ್ ಗುಜರಾತಿ ಕಂಪನಿಯೇ ಆಗಿತ್ತು. ಈಗಲೂ ಇರುತ್ತದೆ ಮತ್ತು ಮುಂದೆಯೂ ಇರಲಿದೆ. ವಿದೇಶಿಯರು ನವ ಭಾರತದ ಬಗ್ಗೆ ಯೋಚಿಸಿದಾಗ ಅವರು ಹೊಸ ಗುಜರಾತ್ ಬಗ್ಗೆಯೂ ಯೋಚಿಸುತ್ತಾರೆ. ಈ ಪರಿವರ್ತನೆ ಹೇಗೆ ಸಂಭವಿಸಿತು ಎಂದರೆ?. ಒಬ್ಬ ನಾಯಕನ ಕಾರಣದಿಂದಾಗಿ. ಅವರೇ ಅತ್ಯಂತ ಗೌರವಾನ್ವಿತ ನರೇಂದ್ರಭಾಯಿ ಮೋದಿ ಜಿ ಎಂದು ಅಂಬಾನಿ ಪ್ರಧಾನಿಯನ್ನು ಹಾಡಿ ಹೊಗಳಿದರು.
35 ಟ್ರಿಲಿಯನ್ ಡಾಲರ್ ಆರ್ಥಿಕತೆ: ಅಲ್ಲದೇ, ಒಬ್ಬ ರಾಷ್ಟ್ರೀಯವಾದಿ ಮತ್ತು ಅಂತಾರಾಷ್ಟ್ರೀಯವಾದಿಯಾಗಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ನಿಜವಾಗಿಯೂ ಮುಂಬರುವ ಪೀಳಿಗೆಯು ಕೃತಜ್ಞರಾಗಿರುತ್ತದೆ. ಅಮೃತ್ ಕಾಲಲ್ಲಿ ನೀವು (ಮೋದಿ) ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ವಿಕಾಸಿತ್ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದೀರಿ. 2047ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್ (ಪ್ರಸ್ತುತ 3 ಟ್ರಿಲಿಯನ್ ಡಾಲರ್ ಇದೆ) ಆರ್ಥಿಕತೆ ರಾಷ್ಟ್ರವಾಗುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಗೂ ತಡೆಯಲು ಸಾಧ್ಯವಿಲ್ಲ. ನಾನು ನೋಡುತ್ತಿರುವಂತೆ ಗುಜರಾತ್ ಮಾತ್ರವೇ 3 ಟ್ರಿಲಿಯನ್ ಆರ್ಥಿಕತೆಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: 'ಬಂಗಾರದ ರಾಮಮಂದಿರ': 42 ದ್ವಾರಗಳಿಗೆ ಚಿನ್ನಲೇಪನ, 100 ಕೆಜಿ ಬಂಗಾರ ಬಳಕೆ