ಕೋಲ್ಕತಾ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿಯವರು ಅಕ್ಕಪಕ್ಕದಲ್ಲಿದ್ದರೂ ಯಾವುದೇ ದಾಳಿ ಅಥವಾ ಪ್ರತಿ ದಾಳಿ ನಡೆಸದೇ, ನಗುತ್ತಿದ್ದಾರೆ. ಇದು ಅಸಾಧ್ಯ ಎಂದು ನಿಮಗನಿಸಿದರೆ ನಿಮ್ಮ ಯೋಚನೆ ತಪ್ಪು. ಈ ದೃಶ್ಯವನ್ನು ಇದೀಗ ನಾವು ಕೋಲ್ಕತ್ತಾದಲ್ಲಿ ಕಾಣಬಹುದಾಗಿದೆ.
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಅವರ ಚಿತ್ರವಿರುವ ಸಿಹಿ ತಿಂಡಿಗಳು ಎಲ್ಲರ ಗಮನ ಸೆಳೆಯುತ್ತಿವೆ. ಸಿಹಿ ತಿಂಡಿಗಳ ಮೇಲೆ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಅವರ ನಗುತ್ತಿರುವ ಮುಖಗಳನ್ನು ಕಾಣಬಹುದಾಗಿದೆ.
ಉತ್ತರ ಕೋಲ್ಕತ್ತಾದ ಶತಮಾನದಷ್ಟು ಹಳೆಯದಾದ ಸಿಹಿತಿಂಡಿ ತಯಾರಕಾರಾದ ನಾನಿ ಲಾಲ್ ಘೋಷ್ ಈ ಸಿಹಿತಿಂಡಿಗಳನ್ನು ತಯಾರಿಸಿದ್ದಾರೆ. ರುಚಿಯಾದ ಸಿಹಿತಿಂಡಿಗಳ ಮೇಲೆ ಪಕ್ಷದ ಚಿಹ್ನೆಗಳು ಕೂಡಾ ಇವೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಾರಗಳ ಮುಂಚೆಯೇ, ಈ ಸಿಹಿ ತಿಂಡಿಗಳು ಭಾರಿ ಬೇಡಿಕೆಯನ್ನು ಪಡೆದಿವೆ. ಜನರು ಈ ರುಚಿಕರವಾದ ಸಿಹಿತಿಂಡಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಿಹಿತಿಂಡಿಗಳ ಅಂಗಡಿಯ ಕಡೆಗೆ ಹೋಗುತ್ತಿದ್ದಾರೆ.
ಬಂಗಾಳದಲ್ಲಿ ಒಂದು ಗಾದೆ ಇದೆ. ಅದೇನೆಂದರೆ 'ನೀವು ಎಂದಿಗೂ ಬೆಂಗಾಲಿಯನ್ನು ರಾಜಕೀಯ ಮತ್ತು ಸಿಹಿತಿಂಡಿಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ'. ನಾನಿ ಲಾಲ್ ಘೋಷ್ ಸಿಹಿತಿಂಡಿಗಳ ಅಂಗಡಿಯಲ್ಲಿ ಈ ಗಾದೆ ಸಾಬೀತಾಗಿದೆ.