ಸುರೇಂದ್ರನಗರ: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸಿವೆ. ಗುಜರಾತ್‌ನ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮೋದಿ ಸುರೇಂದ್ರನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಿಪಕ್ಷಗಳು ನೀಚ ರಾಜಕಾರಣ ಮಾಡುವ ಬದಲು ಅಭಿವೃದ್ಧಿಯ ಬಗ್ಗೆ ಚಿಂತಿಸಲಿ. ನೀಚ, ಕೀಳು ಜಾತಿ, ಸಾವಿನ ವ್ಯಾಪಾರಿ ಎಂದು ನೀವು ನನ್ನನ್ನು ಕರೆದಿದ್ದೀರಿ. ನಾನು ಸೇವಕ ಅಥವಾ ಸೇವಾದಾರ್ ಇದು ಶೋ ಆಫ್ ಅಲ್ಲ ಎಂದು ಹರಿಹಾಯ್ದಿದ್ದಾರೆ.
ಇಲ್ಲಿನ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವೇ ನನ್ನ ಬಂಡವಾಳ. ಬಹುಶಃ ಈ ಹಿಂದೆ ಯಾವ ನಾಯಕರಿಗೂ ಇಷ್ಟೊಂದು ಆಶೀರ್ವಾದ ಸಿಕ್ಕಿಲ್ಲ. ನೀವು ತುಂಬಾ ಪ್ರೀತಿ ಕೊಟ್ಟಿದ್ದೀರಿ. ನಿಮಗಾಗಿ ಸೇವೆ ಮಾಡುವುದು ಇನ್ನಷ್ಟು ಬಾಕಿ ಇದೆ. ನಿಮಗೆ ಸೇವೆ ಮಾಡಲು ಮತ್ತೆ ಕಮಲಕ್ಕೆ ಅವಕಾಶ ಕೊಡಿ ಎಂದು ಜನತೆಯನ್ನು ಮೋದಿ ಕೇಳಿದರು.
ಇದನ್ನೂ ಓದಿ:ಗುಜರಾತ್ನಲ್ಲಿ ಮೋದಿ, ರಾಹುಲ್ ಗಾಂಧಿ ಚುನಾವಣಾ ರ‍್ಯಾಲಿ ಇಂದು