ನವದೆಹಲಿ: ಕ್ಯಾಬಿನೆಟ್ ವಿಸ್ತರಣೆ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವರೊಂದಿಗೆ ನಡೆಯಬೇಕಿದ್ದ ಸಭೆ ರದ್ದುಗೊಂಡಿದೆ. ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿಯವರ ಅಧಿಕೃತ ನಿವಾಸ ಲೋಕ ಕಲ್ಯಾಣ ಮಾರ್ಗದಲ್ಲಿ ಸಭೆ ನಿಗದಿಪಡಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ನಿನ್ನೆಯಷ್ಟೇ ಅಮಿತ್ ಶಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜತೆ ಚರ್ಚಿಸಿದ್ದರು.
ಸಭೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಭಾಗವಹಿಸಬೇಕಿತ್ತು. ಸಚಿವಾಲಯಗಳು ಮತ್ತು ಎಲ್ಲಾ ಸಚಿವರ ಕಾರ್ಯ ವೈಖರಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಪ್ರಧಾನಿ ಸಚಿವರಿಗೆ ಸೂಚಿಸಿದ್ದರು. ಇದಕ್ಕೂ ಮುನ್ನ ಜೂನ್ 20 ರಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಎನ್‌ಡಿಎ ಸರ್ಕಾರದ ಉನ್ನತ ಸಚಿವರೊಂದಿಗೆ ಸಭೆ ನಡೆಸಿದ್ದರು. ಕ್ಯಾಬಿನೆಟ್ ಪುನರ್ರಚನೆಯ ಮಾತುಕತೆಯ ಮಧ್ಯೆ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಅವರು ಪಿಎಂ ಮೋದಿಯವರೊಂದಿಗೆ ಭಾನುವಾರ ತಮ್ಮ ನಿವಾಸದಲ್ಲಿ ಗಂಟೆಗೂ ಅಧಿಕ ಕಾಲ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ನ.17 ರಿಂದ ಮೂರು ದಿನ ಬೆಂಗಳೂರು ಟೆಕ್ ಸಮಿಟ್: ಮೋದಿ, ಕಮಲಾ ಹ್ಯಾರಿಸ್ಗೆ ಆಹ್ವಾನ