ETV Bharat / bharat

ಕಾಮನ್‌ವೆಲ್ತ್ ಕ್ರೀಡಾಕೂಟ : ಭಾರತೀಯ ಅಥ್ಲೀಟ್​ಗಳ ಸಾಧನೆ ಶ್ಲಾಘಿಸಿದ ಮೋದಿ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನೀವು ಪದಕಗಳೊಂದಿಗೆ ಹಿಂದಿರುಗುತ್ತೀರಿ ಎನ್ನುವ ವಿಶ್ವಾಸ ನನಗಿತ್ತು ಎಂದು ಭಾರತೀಯ ಅಥ್ಲೀಟ್‌ಗಳ ಬಗ್ಗೆ ಪ್ರಧಾನಿ ಮೋದಿ ಅಭಿಮಾನದ ಮಾತುಗಳನ್ನಾಡಿದರು.

Modi appreciated the performance of Indian athletes
ಭಾರತೀಯ ಅಥ್ಲೀಟ್​ಗಳ ಸಾಧನೆ ಶ್ಲಾಘಿಸಿದ ಮೋದಿ
author img

By

Published : Aug 13, 2022, 3:23 PM IST

ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ನಮ್ಮ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಪ್ರಶಸ್ತಿಗಳನ್ನು ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶನಿವಾರ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ರಾಷ್ಟ್ರವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ದಾಖಲಿಸಿದ್ದು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿರುವುದರ ಜೊತೆಗೆ ದೇಶ ಮೊದಲ ಬಾರಿಗೆ ಚೆಸ್​ ಒಲಿಂಪಿಯಾಡ್​ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ ಎಂದು ಹೇಳಿದರು.

ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದರೂ ನಿಮ್ಮ ಯಶಸ್ಸು ಒಟ್ಟಿಗೆ ಆಚರಿಸುವುದಾಗಿ ಕಾಮನ್​ವೆಲ್ತ್​ ಕ್ರೀಡಾಕೂಟ ಪ್ರಾರಂಭಗೊಳ್ಳುವ ಮೊದಲು ಭರವಸೆ ನೀಡಿದ್ದೆ. ನೀವು ಯಶಸ್ಸುಗಳೊಂದಿಗೆ ಹಿಂದಿರುಗುತ್ತೀರಿ ಎಂದು ನನಗೆ ವಿಶ್ವಾಸವಿತ್ತು. ನಾವು ಜೊತೆಯಾಗಿ ವಿಜಯೋತ್ಸವ ಆಚರಿಸುತ್ತೇವೆ ಎಂಬ ನಂಬಿಕೆ ಇತ್ತು ಎಂದು ನುಡಿದರು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಾಲ್ಕು ಹೊಸ ಕ್ರೀಡೆಗಳಲ್ಲಿ ಗೆಲುವಿನ ಹಾದಿ ತುಳಿದಿದ್ದೇವೆ. ಲಾನ್ ಬಾಲ್‌ನಿಂದ ಅಥ್ಲೆಟಿಕ್ಸ್‌ವರೆಗೆ ಅಭೂತಪೂರ್ವ ಪ್ರದರ್ಶನವನ್ನು ನಮ್ಮವರು ನೀಡಿದ್ದಾರೆ. ಇದರಿಂದಾಗಿ ಯುವಕರಲ್ಲಿ ಹೊಸ ಕ್ರೀಡೆಗಳತ್ತ ಆಸಕ್ತಿ ಹೆಚ್ಚಾಗಲಿದೆ. ಈ ಹೊಸ ಕ್ರೀಡೆಗಳಲ್ಲಿ ನಾವು ನಮ್ಮ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಇದನ್ನೂ ಓದಿ : ದಾಲ್​ ಸರೋವರದಲ್ಲಿ ತಿರಂಗಾ ಶಿಕರ.. ಇದೊಂದು ಅದ್ಭುತವೆಂದು ಬಣ್ಣಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.