ETV Bharat / bharat

ಜಾಗತೀಕರಣದೊಂದಿಗೆ ಸ್ವಾವಲಂಬಿಗಳಾಗಿರುವುದು ಬಹಳ ಮುಖ್ಯ : ಪಿಎಂ ಮೋದಿ - ಐಐಟಿ ದೆಹಲಿಯ ವಾರ್ಷಿಕ ಸಮಾವೇಶ ಸಮಾರಂಭದಲ್ಲಿ ಮೋದಿ ಭಾಗಿ

ಸ್ಟಾರ್ಟ್ ಅಪ್ ಉದ್ಯಮವು 50,000ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಯತ್ತ ಸಾಗುತ್ತಿದೆ. ಪ್ರಸ್ತುತ ಮತ್ತು ಭವಿಷ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿಯಮಗಳನ್ನು ಮಾರ್ಪಡಿಸುತ್ತದೆ. ದೇಶವು ನಿಮಗೆ ವ್ಯಾಪಾರ ಮಾಡುವುದನ್ನು ಸುಲಭವಾಗಿಸುತ್ತದೆ..

ಐಐಟಿ ದೆಹಲಿಯ ವಾರ್ಷಿಕ ಸಮಾವೇಶ ಸಮಾರಂಭದಲ್ಲಿ ಮೋದಿ ಭಾಗಿ

author img

By

Published : Nov 7, 2020, 12:35 PM IST

ನವದೆಹಲಿ : ಜಾಗತೀಕರಣದೊಂದಿಗೆ ಸ್ವಾವಲಂಬಿಗಳಾಗಿರುವುದು ಬಹಳ ಮುಖ್ಯ. ಇದು ಸ್ವಾವಲಂಬಿ ಭಾರತ ಅಭಿಯಾನದ ಯಶಸ್ಸಿಗೆ ಒಂದು ದೊಡ್ಡ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಐಐಟಿ ದೆಹಲಿಯ 51ನೇ ವಾರ್ಷಿಕ ಸಮಾವೇಶ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತೀಕರಣ ಮುಖ್ಯ. ಆದರೆ, ಅದೇ ಸಮಯದಲ್ಲಿ ಸ್ವಾವಲಂಬನೆ ಕೂಡ ಅಷ್ಟೇ ಮುಖ್ಯ. ಇಂದು ಪದವಿ ನೀಡಲಾಗುವ ಎಲ್ಲ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಪೋಷಕರಿಗೆ ಮತ್ತು ಎಲ್ಲರಿಗೂ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ನೀವು ಅದೃಷ್ಟಶಾಲಿ ಬ್ಯಾಚ್, ಹೊಸ ವಿಷಯಗಳನ್ನು ಕಲಿಯಲು ನಿಮಗೆ ಅವಕಾಶವಿದೆ. ಆದ್ದರಿಂದ ಅದನ್ನು ಹೆಚ್ಚು ಬಳಸಿಕೊಳ್ಳಿ. ಇದಲ್ಲದೆ, ತಂತ್ರಜ್ಞಾನವನ್ನು ಬಳಸಿಕೊಂಡು ಸ್ಟಾರ್ಟ್ ಅಪ್ ಉದ್ಯಮದಲ್ಲಿ ಭಾಗವಹಿಸಲು ಈಸ್ ಆಫ್ ಇನ್ನೋವೇಶನ್ (ಇಒಐ)ನಲ್ಲಿ ಹೂಡಿಕೆ ಮಾಡಲು ಜನರಿಗೆ ಆಹ್ವಾನಿಸುತ್ತೇವೆ ಎಂದರು.

  • " class="align-text-top noRightClick twitterSection" data="">

ಸ್ಟಾರ್ಟ್ ಅಪ್ ಉದ್ಯಮವು 50,000ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಯತ್ತ ಸಾಗುತ್ತಿದೆ. ಪ್ರಸ್ತುತ ಮತ್ತು ಭವಿಷ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿಯಮಗಳನ್ನು ಮಾರ್ಪಡಿಸುತ್ತದೆ. ದೇಶವು ನಿಮಗೆ ವ್ಯಾಪಾರ ಮಾಡುವುದನ್ನು ಸುಲಭವಾಗಿಸುತ್ತದೆ. ದೇಶವಾಸಿಗಳ ಜೀವನವನ್ನು ಸುಲಭಗೊಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಹೊಸ ಸ್ಟಾರ್ಟ್ಅಪ್‌ಗಳಿಗಾಗಿ ಮೊದಲ ಬಾರಿಗೆ ಇಷ್ಟು ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಹೂಡಿಕೆ ಮಾರ್ಗಗಳು ತೆರೆದಿವೆ ಎಂದು ಮೋದಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.