ಸೂರತ್ (ಗುಜರಾತ್) : 68 ರ ಹರೆಯದ ನಟ್ಟುಭಾಯಿ ವಾಸ್ವಾನಿ ಅವರು ಮಾರುವ ಟೀ ಅಷ್ಟೇ ಅವರ ಅಂಗಡಿಯೂ ಭಾರಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕಾರಣ ಈ ಗಾಡಿಯಲ್ಲಿ ಬೆಳಕಿಗಾಗಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಪ್ರತಿ ತಿಂಗಳು 1000 ರಿಂದ 1500 ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆಯಂತೆ.
ಸೂರತ್‌ನ ಉದ್ನಾ ಪ್ರದೇಶದಲ್ಲಿ ಜೈ ರಾಮ್ ಜಿ ಟೀ ಸೆಂಟರ್ ನಡೆಸುತ್ತಿರುವ ವಾಸ್ವಾನಿ ಚಾಯ್ ವಾಲಾ ಚಾಚಾ ಎಂದೇ ಜನಪ್ರಿಯರಾಗಿದ್ದಾರೆ. ಕಳೆದ 35 ವರ್ಷಗಳಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಅವರು ತಮ್ಮ ಪ್ಲಾನ್ನಿಂದ ತಿಂಗಳಿಗೆ 1000 ರಿಂದ 2500 ರೂಪಾಯಿ ವಿದ್ಯುತ್ ಬಿಲ್ ಉಳಿಸುತ್ತಿದ್ದಾರೆ.
ಗ್ರಾಮದಲ್ಲಿ ಜನರಿಗೆ ಸೌರಫಲಕಗಳು ಹೇಗೆ ಉಪಯುಕ್ತವಾಗುತ್ತಿವೆಯೋ ಅದೇ ರೀತಿ ನಮ್ಮ ಅಂಗಡಿಯಲ್ಲೂ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಬಹುದು ಎಂಬ ಆಲೋಚನೆ ಬಂದಿತು. ಇದಕ್ಕಾಗಿ ಅಹಮದಾಬಾದ್ನಿಂದ ಎರಡೂವರೆ ಸಾವಿರ ರೂಪಾಯಿ ನೀಡಿ ಸೋಲಾರ್ ಪ್ಯಾನಲ್‌ಗಳನ್ನು ಖರೀದಿಸಿದ್ದೇನೆ. ಇದರಿಂದ ಪ್ರತಿ ತಿಂಗಳು ಅವರ ಹಣವನ್ನು ಉಳಿಸಬಹುದು ಎನ್ನುತ್ತಾರೆ ಈ ವ್ಯಾಪಾರಿ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ವಿಡಿಯೋ ವೈರಲ್