ಚಂಡೀಗಢ : ಪಾಕಿಸ್ತಾನದ ಕರ್ತಾರ್ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ರೂಪದರ್ಶಿ ಸೌಲೇಹಾ ಫೋಟೋ ಶೂಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಚಾರ್ಜ್ ಡಿ ಅಫೇರ್ಸ್ಗೆ ಭಾರತ ಸರ್ಕಾರ ಸಮನ್ಸ್ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಪತ್ರಿಕ್ರಿಯೆ ನೀಡಿದ್ದು, ಕರ್ತಾರ್‌ಪುರದ ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್‌ನ ಪವಿತ್ರತೆಯನ್ನು ಪಾಕಿಸ್ತಾನದ ರೂಪದರ್ಶಿ ಹಾಗೂ ಬಟ್ಟೆಯೊಂದರ ಬ್ರಾಂಡ್ ಅಪವಿತ್ರಗೊಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ಚಾರ್ಜ್ ಡಿ ಅಫೇರ್ಸ್ಗೆ ಒತ್ತಾಯಿಸಲಾಗಿದೆ ಎಂದಿದ್ದಾರೆ.
ಇದರ ಜೊತೆಗೆ ಸಂಬಂಧಪಟ್ಟ ಪ್ರಾಧಿಕಾರಗಳು ಪ್ರಕರಣದ ಕುರಿತಂತೆ ತನಿಖೆ ನಡೆಸಬೇಕು. ಈ ಅಪರಾಧದಲ್ಲಿ ಭಾಗಿಯಾದ ಎಲ್ಲಾ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅರಿಂದಮ್ ಬಾಗ್ಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Our response to media queries on the incident of desecration of the sanctity of Gurudwara Shri Darbar Sahib in Pakistan: https://t.co/DhvUoxtpo0 pic.twitter.com/29afxbsKZ3
— Arindam Bagchi (@MEAIndia) November 30, 2021 " class="align-text-top noRightClick twitterSection" data="
">Our response to media queries on the incident of desecration of the sanctity of Gurudwara Shri Darbar Sahib in Pakistan: https://t.co/DhvUoxtpo0 pic.twitter.com/29afxbsKZ3
— Arindam Bagchi (@MEAIndia) November 30, 2021Our response to media queries on the incident of desecration of the sanctity of Gurudwara Shri Darbar Sahib in Pakistan: https://t.co/DhvUoxtpo0 pic.twitter.com/29afxbsKZ3
— Arindam Bagchi (@MEAIndia) November 30, 2021
ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ಪಾಕಿಸ್ತಾನಿ ರೂಪದರ್ಶಿ ಫೋಟೋಶೂಟ್ ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿದೆ. ಗುರುದ್ವಾರದಲ್ಲಿ ತಲೆಯ ಮೇಲೆ ಬಟ್ಟೆ ಹಾಕಿಕೊಳುವ ನಿಯಮವನ್ನು ರೂಪದರ್ಶಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸೌಲೇಹಾ, ನಾನು ಇತಿಹಾಸದ ಬಗ್ಗೆ ಮತ್ತು ಸಿಖ್ ಸಮುದಾಯದ ಬಗ್ಗೆ ತಿಳಿದುಕೊಳ್ಳಲು ಕರ್ತಾರ್‌ಪುರಕ್ಕೆ ಹೋಗಿದ್ದೆ. ಯಾರ ಭಾವನೆಗಳಿಗೆ ಅಥವಾ ಯಾವುದಕ್ಕೂ ನೋವುಂಟು ಮಾಡಲು ಈ ರೀತಿಯ ಫೋಟೋಗಳನ್ನು ತೆಗೆದುಕೊಂಡಿರಲಿಲ್ಲ. ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ ಎಂದು ಇನ್ಸ್ಟಾಗ್ರಾಂನಲ್ಲಿ ಕ್ಷಮೆ ಕೇಳಿದ್ದರು. ಇದರ ಜೊತೆಗೆ ಫೋಟೋಗಳನ್ನು ಡಿಲೀಟ್ ಮಾಡಿದ್ದರು.
ಇದನ್ನೂ ಓದಿ: ಪುಲ್ವಾಮಾ ಎನ್‌ಕೌಂಟರ್: ಇಬ್ಬರು ಜೈಷ್ ಉಗ್ರರನ್ನು ಹೊಡೆದುರುಳಿಸಿದ ಸೇನೆ