ETV Bharat / bharat

ಮಧ್ಯರಾತ್ರಿ ವೇಳೆ ರೂಪದರ್ಶಿ, ಆಕೆಯ ಸ್ನೇಹಿತರಿಗೆ ಕಿರುಕುಳ.. ನಾಲ್ವರ ಬಂಧನ

ಪಶ್ಚಿಮ ಬಂಗಾಳದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮಾಡೆಲ್​ ಮತ್ತು ಆಕೆಯ ಸ್ನೇಹಿತರಿಗೆ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

author img

By

Published : Aug 11, 2023, 7:23 AM IST

Model harassed  friends beaten up at night in Kolkata  ಮಧ್ಯರಾತ್ರಿ ವೇಳೆ ರೂಪದರ್ಶಿ  ಆಕೆಯ ಸ್ನೇಹಿತರಿಗೆ ಕಿರುಕುಳ  ನಾಲ್ವರು ಬಂಧನ  ಸ್ನೇಹಿತರಿಗೆ ಕೆಲ ದುಷ್ಕರ್ಮಿಗಳು ಹಲ್ಲೆ  ಹಲ್ಲೆ ಮಾಡಿರುವ ಸಂಗತಿ ಬೆಳಕಿಗೆ  ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ  ಧಾಬಾದಲ್ಲಿ ಊಟ ಮತ್ತು ಮದ್ಯ ಸೇವಿಸಿ ಕಾರಿನಲ್ಲಿ ಮನೆಗೆ  ಮಾಡೆಲ್​​ ಅವರ ವಾಹನವನ್ನು ಹಿಂಬಾಲಿಸು
ಮಧ್ಯರಾತ್ರಿ ವೇಳೆ ರೂಪದರ್ಶಿ

ಕೋಲ್ಕತ್ತಾ, ಪಶ್ಚಿಮ ಬಂಗಾಳ: ನಗರದಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಉದ್ಬವಿಸಿದೆ. ಮಧ್ಯರಾತ್ರಿ ಸುಮಾರಿಗೆ ಕೆಲ ದುಷ್ಕರ್ಮಿಗಳು ಮಾಡೆಲ್​ ಮತ್ತು ಆಕೆಯ ಸ್ನೇಹಿತರಿಗೆ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ದಕ್ಷಿಣ ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದ ಬಳಿ ನಡೆದಿದೆ. ಇನ್ನು ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಸ್ಥಳೀಯ ಆಧಾರದ ಮೇಲೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿರುವುದೇನು?: ’’ಮಾಡೆಲ್, ಆಕೆಯ ಗೆಳತಿ ಮತ್ತು ಇಬ್ಬರು ಸ್ನೇಹಿತರು ಬುಧವಾರ ರಾತ್ರಿ ಬಾಲಿಗುಂಜ್ ಸರ್ಕುಲರ್ ರೋಡ್ ಬಳಿಯ ಧಾಬಾದಲ್ಲಿ ಊಟ ಮತ್ತು ಮದ್ಯ ಸೇವಿಸಿ ಕಾರಿನಲ್ಲಿ ಮನೆಗೆ ಕಡೆ ಹೋದರು. ಷೇಕ್ಸ್‌ಪಿಯರ್ ರಸ್ತೆ ಮಾರ್ಗವಾಗಿ ಸಾಗುತ್ತಿದ್ದಾಗ ಮಾಡೆಲ್‌ನ ಕಾರಿನ ಹಿಂದೆ ಮತ್ತೊಂದು ಕಾರು ಹಿಂಬಾಲಿಸುತ್ತಿತ್ತು. ಅಷ್ಟೇ ಅಲ್ಲ ಹಿಂಬಾಲಿಸುತ್ತಿದ್ದ ಕಾರು ಪದೇ ಪದೆ ಹಾರ್ನ್ ಮಾಡಿ ಟಾರ್ಚರ್​ ನೀಡುತ್ತಿತ್ತು ಎಂದು ಮಾಡೆಲ್​ ತಂಡ ಆರೋಪಿಸಿದೆ. ವಾಹನವನ್ನು ಓವರ್ ಟೇಕ್ ಮಾಡಲು ಅವಕಾಶವಿದ್ದರೂ ಅವರು ಮಾಡೆಲ್​​ ಅವರ ವಾಹನವನ್ನು ಹಿಂಬಾಲಿಸುತ್ತಿದ್ದರು. ಕಾರು ವಿಕ್ಟೋರಿಯಾ ಸ್ಮಾರಕದ ಸೌತ್ ಗೇಟ್ ತಲುಪಿದಾಗ ಆರೋಪಿಗಳು ಮಾಡೆಲ್ ಕಾರನ್ನು ತಮ್ಮ ಕಾರಿನಿಂದ ಅಡ್ಡಗಟ್ಟಿ ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾಡೆಲ್ ಜೊತೆ ಕಾರಿನಲ್ಲಿದ್ದ ಆಕೆಯ ಗೆಳತಿ ಹಾಗೂ ಇಬ್ಬರು ಸ್ನೇಹಿತರು ಕಾರಿನಿಂದ ಕೆಳಗಿಳಿದು ಐವರು ಆರೋಪಿ ಯುವಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆ ವೇಳೆ ಆರೋಪಿಯೊಬ್ಬ ಮಾಡೆಲ್​ನನ್ನು ರಹಸ್ಯವಾಗಿ ವಿಡಿಯೋ ಚಿತ್ರಕರಿಸುತ್ತಿದ್ದ. ಬಳಿಕ ಯುವಕ ತನ್ನ ಫೋನ್ ತೆಗೆದುಕೊಂಡು ಹೋಗಲು ಮುಂದಾದಾಗ ಜಗಳ ಶುರುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾಡೆಲ್ ಜೊತೆಗಿದ್ದ ಇಬ್ಬರು ಸ್ನೇಹಿತರನ್ನು ಆರೋಪಿಗಳು ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಾಗ ಆರೋಪಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಮಾಡೆಲ್ ಗಾಯಗೊಂಡಿದ್ದ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೇಸ್ಟಿಂಗ್ಸ್ ಪೊಲೀಸ್ ಠಾಣೆಗೆ ತೆರಳಿದರು.

ಆರೋಪಿಗಳ ವಿರುದ್ಧ ರಾತ್ರಿಯೇ ಹೇಸ್ಟಿಂಗ್ಸ್​ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಪಾನಮತ್ತರಾಗಿದ್ದರು ಎನ್ನಲಾಗಿದೆ. ಬಳಿಕ ಪೊಲೀಸರು ದೂರುದಾರರಾದ ರೂಪದರ್ಶಿ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.

ಓದಿ: Mangaluru crime: ಬೀದಿ ನಾಟಕ ಕಲಾವಿದನಿಂದ ವಿದ್ಯಾರ್ಥಿನಿಯ ಅತ್ಯಾಚಾರ, ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.