ETV Bharat / bharat

ಮೊಬೈಲ್ ಟವರ್​ನ್ನೇ​ ಕದ್ದ ಖದೀಮರು.. ಕಂಪನಿ ಅಧಿಕಾರಿಗಳಂತೆ ಬಂದು ದುಷ್ಕೃತ್ಯ!

ಪಾಟ್ನಾದ ಗಾರ್ಡ್ನಿಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಕಳ್ಳತನವಾಗಿದೆ.

mobile-tower-theft-in-patna
ಪಾಟ್ನಾದಲ್ಲಿ ಮೊಬೈಲ್ ಟವರ್ ಕಳ್ಳತನ
author img

By

Published : Nov 27, 2022, 5:46 PM IST

ಪಾಟ್ನಾ(ಬಿಹಾರ): ಬಿಹಾರದಲ್ಲಿ ಕಬ್ಬಿಣದ ಸೇತುವೆ ಕಳ್ಳತನವಾದ ಬಳಿಕ ಇದೀಗ ಮೊಬೈಲ್ ಟವರ್ ಕಳ್ಳತನ ನಡೆದಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಪಾಟ್ನಾದ ಗಾರ್ಡ್ನಿಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಕಚ್ಚಿ ತಲಾಖ್ ಪ್ರದೇಶದಲ್ಲಿನ ಖಾಲಿ ಜಾಗದಲ್ಲಿ ಏರ್​ಸೆಲ್​ ಮೊಬೈಲ್ ಟವರ್​ನ್ನು ಸ್ಥಾಪಿಸಲಾಗಿತ್ತು. ಹಲವು ತಿಂಗಳಿನಿಂದ ಮೊಬೈಲ್ ಕಂಪನಿಯು ಟವರ್ ಬಾಡಿಗೆಯನ್ನು ಜಮೀನು ಮಾಲೀಕರಿಗೆ ಪಾವತಿಸಿರಲಿಲ್ಲ. ಶನಿವಾರ 15 ರಿಂದ 20 ಮಂದಿ ಕಂಪನಿಯ ಅಧಿಕಾರಿಗಳಂತೆ ನಟಿಸಿ ಬಂದಿದ್ದು, ಟವರ್ ಬಾಡಿಗೆ ನೀಡಲು ಸಾಧ್ಯವಿಲ್ಲವೆಂದು ಹೇಳಿ ಟವರನ್ನೇ ಕೊಂಡೊಯ್ದಿದ್ದಾರೆ.

ಬಳಿಕ ಮಾಲಿಕರಿಗೆ ಇದು ಕಳ್ಳತನವೆಂದು ಅರಿವಾಗಿದ್ದು, ಘಟನೆಯ ಕುರಿತು ಗಾರ್ಡ್ನಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಏರ್​ಸೆಲ್​ ಮೊಬೈಲ್ ಕಂಪನಿಯವರು ಯಾವುದೇ ಅಧಿಕಾರಿಯನ್ನು ಕಳುಹಿಸದಿರುವುದು ಕಂಡುಬಂದಿದೆ. ಇದೀಗ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಾಗಿಲು ಮುರಿದು ಕಳ್ಳತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.