ETV Bharat / bharat

ಹಳ್ಳಿಗೆ ಬಂದು ಪಾಠ ಮಾಡುವ ‘ಸ್ಕೂಟರ್ ಮೇಷ್ಟ್ರು’.. ಸ್ಕೂಟರ್​​ ಅನ್ನೇ ಮಿನಿ ಶಾಲೆಯನ್ನಾಗಿಸಿದ ಶಿಕ್ಷಕ - ಬಡ ಕುಟುಂಬಗಳ ಮಕ್ಕಳು

ಸುಮಾರು ಒಂದು ವರ್ಷದಿಂದ ಈ ಚಂದ್ರಹಾಸ್ ಗ್ರಾಮಕ್ಕೆ ಬರುತ್ತಿದ್ದಾರೆ. ಸರ್ಕಾರಿ ಶಾಲೆ ಮುಚ್ಚಿದ ನಂತರ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಇವರು ಬೆನ್ನೆಲುಬಾಗಿದ್ದಾರೆ. ಕೊರೊನಾ ಅವಧಿಯಲ್ಲಿ ಶಾಲೆಗೆ ಹೋಗದ ಬಡ ಮಕ್ಕಳಿಗೆ ಕಲಿಸುವುದು ಅವರ ಉದ್ದೇಶ. ಅದಕ್ಕಾಗಿ ಅವರು ಸ್ಕೂಟರ್​ನಲ್ಲಿ ಬರುತ್ತಿದ್ದು, ಅದನ್ನೇ ಮಿನಿ ಶಾಲೆಯನ್ನಾಗಿಸಿದ್ದಾರೆ.

ಹಳ್ಳಿಗೆ ಬಂದು ಪಾಠ ಮಾಡುವ ‘ಸ್ಕೂಟರ್ ಮೇಷ್ಟ್ರು’

author img

By

Published : May 13, 2021, 6:03 AM IST

ಭೋಪಾಲ್​​ (ಮಧ್ಯಪ್ರದೇಶ): ಕೊರೊನಾ ಯುಗದಲ್ಲಿ ಎಲ್ಲವೂ ಕಳೆದು ಹೋಯಿತು. ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದರು ಮತ್ತು ಆನ್‌ಲೈನ್ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಅನುಕೂಲವಂತರ ಮಕ್ಕಳು ಮಾತ್ರ ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿದ್ದರು. ಹಳ್ಳಿಗಳ ಬಡ ಮಕ್ಕಳು ಅಸಹಾಯಕರಾಗಿದ್ದರು. ಈ ಮಕ್ಕಳಿಗಾಗಿ, ಸಾಗರದ ಶಿಕ್ಷಕ ಚಂದ್ರಹಾಸ್ ಶ್ರೀವಾಸ್ತವ್​ ಅವರಿಗೆ ಭರವಸೆಯ ಮುನ್ನುಡಿಯಾಗಿ ಹೊರ ಹೊಮ್ಮಿದ್ದಾರೆ.

ಸ್ಕೂಟರ್​ನಲ್ಲಿ ಬರುವ ಈ ಮೇಷ್ಟ್ರು ಮತ್ತು ಅವರ ಸ್ಕೂಟರ್​ ಶಾಲೆ ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಸುಮಾರು ಒಂದು ವರ್ಷದಿಂದ ಈ ಚಂದ್ರಹಾಸ್ ಗ್ರಾಮಕ್ಕೆ ಬರುತ್ತಿದ್ದಾರೆ. ಸರ್ಕಾರಿ ಶಾಲೆ ಮುಚ್ಚಿದ ನಂತರ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಇವರು ಬೆನ್ನೆಲುಬಾಗಿದ್ದಾರೆ. ಕೊರೊನಾ ಅವಧಿಯಲ್ಲಿ ಶಾಲೆಗೆ ಹೋಗದ ಬಡ ಮಕ್ಕಳಿಗೆ ಕಲಿಸುವುದು ಅವರ ಉದ್ದೇಶವಾಗಿದೆ.

ಹಳ್ಳಿಗೆ ಬಂದು ಪಾಠ ಮಾಡುವ ‘ಸ್ಕೂಟರ್ ಮೇಷ್ಟ್ರು’.

ಪ್ರತಿ ಮನೆಯ ಮಕ್ಕಳು ಒಂದಡೆ ಒಟ್ಟುಗೂಡುತ್ತಾರೆ. ಅವರು ಕುಳಿತುಕೊಳ್ಳಲು ತಮ್ಮದೇ ಆದ ಮ್ಯಾಟ್ ಅಥವಾ ಚೀಲಗಳನ್ನು ತರುತ್ತಾರೆ. ಈ ಬಡ ಮಕ್ಕಳಿಗೆ ಮಾಸ್ಟರ್ ಚಂದ್ರಹಾಸ್ ಸ್ವಂತ ಖರ್ಚಿನಲ್ಲಿ ಜ್ಞಾನಾರ್ಜನೆ ಮಾಡಿಸುತ್ತಿದ್ದಾರೆ.

ಮೊದಲು ಈ ವೇದಿಕೆಯು ಕೊಳಚೆಯ ರಾಶಿಯಾಗಿತ್ತು. ಎತ್ತರದ ವೇದಿಕೆಯನ್ನು ಒಂದು ರೀತಿಯ ಶಾಲೆಯಾಗಿ ಪರಿವರ್ತಿಸಲು ಮಾಸ್ಟರ್ ಜಿ ಒತ್ತಾಯಿಸಿದರು. ತಮ್ಮ ಜೇಬಿನಿಂದ ಸ್ವಲ್ಪ ಹಣ ಖರ್ಚು ಮಾಡಿದರು. ಗ್ರಾಮಸ್ಥರು ಸಹ ಅವರನ್ನು ಬೆಂಬಲಿಸಿದರು. ಈಗ ಅಲ್ಲಿ ತರಗತಿಗಳು ನಡೆಯುತ್ತವೆ.

ಮಕ್ಕಳಿಗೆ ಕಲಿಸುವ ವಿಧಾನ ಅನನ್ಯವಾಗಿದೆ. ಅವರು ವಿವಿಧ ಆಟಗಳನ್ನು ಮತ್ತು ಕ್ರೀಡಾ ಚಟುವಟಿಕೆಗಳನ್ನು ಬೋಧನಾ ವಿಧಾನವಾಗಿ ಬಳಸುತ್ತಾರೆ. ಇದನ್ನು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಅವರ ಬೋಧನೆ ನೋಡಿದಾಗ ಮಕ್ಕಳು ಆಟವಾಡುತ್ತಾರೆಯೇ ಅಥವಾ ಅಧ್ಯಯನ ಮಾಡುತ್ತಿದ್ದಾರೆಯೇ ಎಂದು ಕಂಡು ಹಿಡಿಯುವುದು ಅಸಾಧ್ಯ.

ಕೊರೊನಾ ಸಾಂಕ್ರಾಮಿಕ ರೋಗದಲ್ಲಿ, ವಿಪತ್ತನ್ನು ಒಂದು ಅವಕಾಶವನ್ನಾಗಿ ಮಾಡಲು ಶ್ರಮಿಸಬೇಕು. ಕೆಲವರು ಸಮಾಜದ ಸೇವೆ ಮಾಡಿದರೆ, ಇನ್ನೂ ಕೆಲವರು ತಮ್ಮ ವ್ಯವಹಾರವನ್ನು ಅನೇಕ ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಮಾಸ್ಟರ್ ಚಂದ್ರಹಾಸ್ ಅವರಂತಹ ನೂರಾರು ಜನರ ಸಂಕಲ್ಪದಿಂದಾಗಿ ಭಾರತ ಮುಂದೆ ಸಾಗುತ್ತಿದೆ. ಅಜ್ಞಾನದ ವಿರುದ್ಧ ಅವರ ಹೋರಾಟ ನಿಜಕ್ಕೂ ಶ್ಲಾಘನೀಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.