ಜಮ್ಶೆಡ್‌ಪುರ, ಜಾರ್ಖಂಡ್: ಛತ್ ಪ್ರಸಾದ ಮತ್ತು ಸಾಮಗ್ರಿ ವಿತರಣೆಗೆ ಪೆಂಡಾಲ್ ನಿರ್ಮಾಣಕ್ಕಾಗಿ ಬಿಜೆಪಿ, ಸ್ವತಂತ್ರ ಅಭ್ಯರ್ಥಿ ಶಾಸಕರ ಮಧ್ಯೆ ಹೊಡೆದಾಟ ನಡೆದಿದೆ. ಇದರಲ್ಲಿ ಉಭಯ ಗುಂಪಿನ ಹಲವರು ಗಾಯಗೊಂಡಿದ್ದು, ಪರಸ್ಪರ ದೂರು ದಾಖಲಿಸಿದ್ದಾರೆ.
ಪೆಂಡಾಲ್ ನಿರ್ಮಾಣ ವಿವಾದ: ಜೆಮ್ಯಡ್ಪುರದ ಸೂರ್ಯ ದೇಗುಲದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ರಘುವರದಾಸ್ ಅವರ ಬೆಂಬಲಿಗರು ವೇದಿಕೆ ನಿರ್ಮಾಣ ಮಾಡುತ್ತಿದ್ದರು.
ಮತ್ತೊಂದೆಡೆ ಸ್ವತಂತ್ರ ಶಾಸಕ ಸರಯೂ ರೈ ಬೆಂಬಲಿಗರು ಪೂಜೆಯ ನಂತರ ಛತ್ ಪೂಜಾ ಸಾಮಗ್ರಿ ಮತ್ತು ಪ್ರಸಾದವನ್ನು ವಿತರಿಸಲು ಪೆಂಡಾಲ್ ಹಾಕುತ್ತಿದ್ದರು. ಈ ವೇಲೆ ಉಭಯ ಗುಂಪುಗಳ ಮಧ್ಯೆ ಪೆಂಡಾಲ್ ವಿಷಯಕ್ಕೆ ವಾಗ್ವಾದ ನಡೆದಿದೆ. ಇದು ತೀವ್ರತೆ ಪಡೆದುಕೊಂಡು ಮಾರಾಮಾರಿ ನಡೆದಿದೆ.
ಶಾಸಕ ಸರಯೂ ರೈ ಅವರ ಆಪ್ತ ಸಹಾಯಕ ಹಾಗೂ ಅವರ ಪಕ್ಷದ ಜಿಲ್ಲಾಧ್ಯಕ್ಷ ಸುಬೋಧ್ ಶ್ರೀವಾಸ್ತವ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಬಳಿಕ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಇದು ನಗರದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.
ಓದಿ: ಛತ್ ಪ್ರಸಾದ ತಯಾರಿ ವೇಳೆ ಸಿಲಿಂಡರ್ ಸ್ಫೋಟ: 30 ಭಕ್ತರಿಗೆ ಗಂಭೀರ ಗಾಯ