ಕೋಲ್ಕತ್ತಾ: 'ಜನರು ಸಹಜವಾಗಿ ತಪ್ಪು ಮಾಡುತ್ತಾರೆ ಆದರೆ ಅದನ್ನು ಸರಿಪಡಿಕೊಳ್ಳಬೇಕು' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೆಲಸ ಮಾಡುವಾಗ ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಸರಿಪಡಿಸಬಹುದು. ಕೆಲವರು ಎಲ್ಲ ಒಳ್ಳೆಯ ಕೆಲಸವನ್ನು ನೋಡುವುದಿಲ್ಲ, ಇದ್ದಕ್ಕಿದ್ದಂತೆ ಕೂಗಲು ಪ್ರಾರಂಭಿಸುತ್ತಾರೆ. ನಕಾರಾತ್ಮಕತೆಯು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಧನಾತ್ಮಕವಾಗಿ ಯೋಚಿಸೋಣ ಎಂದು ಕೋಲ್ಕತ್ತಾದಲ್ಲಿ ನಡೆದ ವಿದ್ಯಾರ್ಥಿಗಳ ಕ್ರೆಡಿಟ್ ಕಾರ್ಡ್ ವಿತರಣೆ ಸಮಾರಂಭದಲ್ಲಿ ಹೇಳಿದರು.
'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್ ಬಗ್ಗೆ ದೇಶಾದ್ಯಂತ ಸದ್ಯ ವಿವಾದ ಏರ್ಪಟ್ಟಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ವೇಳೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆ ಎಂದು ಟಿಎಂಸಿ ಟ್ವೀಟ್‌ನಲ್ಲಿ ಹೇಳಿದೆ. ಮತ್ತು ಪಕ್ಷವು ಯಾವುದೇ ರೀತಿಯಲ್ಲಿ ಅದನ್ನು ಅನುಮೋದಿಸುವುದಿಲ್ಲ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅಂತಹ ಕಾಮೆಂಟ್‌ಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: Kaali poster row: ಲೀನಾ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸುವಂತೆ ಗೃಹ ಸಚಿವರ ಆಗ್ರಹ
ನಾನು ಹೇಳುತ್ತಿರುವುದು ತಪ್ಪು ಎಂದು ಬಿಜೆಪಿ ಸಾಬೀತುಪಡಿಸಲಿ. ಅವರು ನನ್ನ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಎಲ್ಲಿ ಬೇಕಾದರೂ ಕೇಸ್ ಹಾಕಲಿ. ನಾನು ಎಲ್ಲದ್ದಕ್ಕೂ ಸಿದ್ದ ಎಂಬ ರೀತಿಯಲ್ಲಿ ಮಹುವಾ ಮೊಯಿತ್ರಾ ಈಗಾಗಲೇ ಸರಣಿ ಟ್ವೀಟ್ಗಳ ಮೂಲಕ ಸವಾಲೆಸೆದಿದ್ದಾರೆ.