ಕೊಟ್ಟಾಯಂ (ಕೇರಳ): ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ, ರತೀಶ್ ಎಂಬ ಸಾಕು ಬೆಕ್ಕೊಂದು ಇತ್ತೀಚೆಗೆ ತನ್ನ ಯಜಮಾನನ ಮನೆಯನ್ನು ಸೇರಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಪಟ್ಟಣದಲ್ಲಿರುವ ತನ್ನ ಯಜಮಾನನ ಮನೆಗೆ ಬೆಕ್ಕು ಬಂದಿದೆ.
ಉಷಮ್ಮ ಎಂಬುವವರು 2016 ರಲ್ಲಿ ಇದನ್ನು ದತ್ತು ಪಡೆದರು. ಮಲಯಾಳಂನ 'ಕಟ್ಟಪ್ಪನೈಲೆ ಹೃತಿಕ್ ರೋಷನ್' ಚಿತ್ರದ ಪ್ರಸಿದ್ಧ ಸಂಭಾಷಣೆಯ 'ಉಣರು ರತೀಶ್' ಎಂದು ಅದಕ್ಕೆ ಹೆಸರಿಟ್ಟಿದ್ದೆವು. ನಾಲ್ಕು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಬೆಕ್ಕಿನ ಕಾಲು ಮುರಿದಿತ್ತು. ಬಳಿಕ ಬೆಕ್ಕಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಉಷಮ್ಮ ಹೇಳಿದರು.
ದುರಾದೃಷ್ಟವಶಾತ್, ಶಸ್ತ್ರಚಿಕಿತ್ಸೆಯ ನಂತರ ಕೆಲವು ವರ್ಷಗಳವರೆಗೆ ರತೀಶ್ ಕಣ್ಮರೆಯಾಯಿತು. ಮನೆಯವರು ಕಂಗಾಲಾಗಿದ್ದರು ಮತ್ತು ಇದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಕಣ್ಮರೆಯಾದ ನಂತರ, ಉಷಮ್ಮ ಮತ್ತು ಅವರ ಕುಟುಂಬದವರು ಅದರ ಹೆಸರನ್ನು ಕರೆಯುವ ಮೂಲಕ ಸುತ್ತಮುತ್ತ ಸಾಕಷ್ಟು ಹುಡುಕಿದ್ದರು. ಆದ್ರೂ ಬೆಕ್ಕು ಸಿಕ್ಕಿರಲಿಲ್ಲ.
ಇದನ್ನೂ ಓದಿ: ಅಳಿಲು ಹಾರುವ ಬೆಕ್ಕು ಬೇಟೆ: ಕೊಡಗಿನಲ್ಲಿ ಆರೋಪಿ ಬಂಧನ
ನಮ್ಮ ಬೆಕ್ಕು ಎರಡು ವರ್ಷಗಳ ಹಿಂದೆ ಅಂದರೆ ಕೋವಿಡ್ ಸಮಯದಲ್ಲಿ ಕಾಣೆಯಾಗಿತ್ತು. ಈಗ ಅದು ನಮ್ಮ ಮನೆಗೆ ಮರಳಿದೆ. ನಾಲ್ಕು ವರ್ಷಗಳ ಹಿಂದೆ ಬೆಕ್ಕು ಅಪಘಾತವನ್ನು ಸಹ ಎದುರಿಸಿತ್ತು. ಶಸ್ತ್ರಚಿಕಿತ್ಸೆಗಾಗಿ ನಾವು 6000 ರೂಪಾಯಿಗಳನ್ನು ಖರ್ಚು ಮಾಡಿದ್ದೆವು. ಈಗ ಅದು ಹಿಂತಿರುಗಿರುವುದರಿಂದ ನಮಗೆ ಸಂತೋಷವಾಗಿದೆ ಎಂದು ಉಷಮ್ಮ ಹೇಳಿದರು.
ರತೀಶ್ ಮನೆಗೆ ವಾಪಸ್ ಆಗಿದೆ ಎಂಬ ವಿಷಯ ತಿಳಿದ ಬಳಿಕ ಬೇರೆ ಜಿಲ್ಲೆಗಳಿಂದಲೂ ಜನರು ಇದನ್ನು ನೋಡಲು ಬರುತ್ತಿದ್ದಾರಂತೆ. ಬೆಕ್ಕು ಆದಾಗೆ ಮಾಲೀಕನ ಮನೆಗೆ ಬಂದಿದೆ. ಅಲ್ಲದೇ ಮನೆಗೆ ಬಂದ ತಕ್ಷಣ ಉಷಮ್ಮ ಅವರ ಹತ್ತಿರ ಹೋಗಿದೆ.