ETV Bharat / bharat

ಕಾಣೆಯಾಗಿದ್ದ 3 ವರ್ಷದ ಮಗು ಸೂಟ್​ಕೇಸ್​ನಲ್ಲಿ ಜೀವಂತವಾಗಿ ಪತ್ತೆ - ಕರ್ನಾಲ್​ ಸುದ್ದಿ

ಮನೆಹೊರಗೆ ಆಟವಾಡುತ್ತಿದ್ದ ವೇಳೆ ಕಾಣೆಯಾಗಿದ್ದ ಮಗು ಮೂರೇ ಗಂಟೆಗಳಲ್ಲಿ ಮನೆ ಸಮೀಪದ ಪೊದೆಯ ಬಳಿ ಸೂಟ್​ಕೇಸ್​ ಒಳಗೆ ಜೀವಂತವಾಗಿ ಸಿಕ್ಕಿದೆ.

Missing boy found alive in suitcase
ಕಾಣೆಯಾಗಿದ್ದ 3 ವರ್ಷದ ಮಗು ಸೂಟ್​ಕೇಸ್​ನಲ್ಲಿ ಜೀವಂತವಾಗಿ ಪತ್ತೆ
author img

By

Published : Mar 2, 2021, 12:18 PM IST

ಕರ್ನಾಲ್ (ಹರಿಯಾಣ): ನಾಪತ್ತೆಯಾಗಿದ್ದ ಮೂರು ವರ್ಷದ ಗಂಡು ಮಗು ಕೆಲವೇ ಗಂಟೆಗಳಲ್ಲಿ ಸೂಟ್​ಕೇಸ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹರಿಯಾಣದ ಕರ್ನಾಲ್​ ಜಿಲ್ಲೆಯ ಕುಂಜ್‌ಪುರದಲ್ಲಿ ವಾಸಿಸುತ್ತಿರುವ ದಂಪತಿಯ ಮಗು ಅಮನ್​​, ಮನೆ ಹೊರಗೆ ಆಟವಾಡುತ್ತಿದ್ದ ವೇಳೆ ಕಾಣೆಯಾಗಿದ್ದನು. ತಕ್ಷಣವೇ ದೂರು ನೀಡಿದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಪಾಕ್​ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ.. ಆದರೂ ಬದುಕುಳಿಯದ ಪ್ರಯಾಣಿಕ

ತಾವೇ ಹುಡುಕುತ್ತ ಹೊರಟ ಪೋಷಕರಿಗೆ, ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಪೊದೆಯಲ್ಲಿ ಸೂಟ್​ಕೇಸ್​ ಕಾಣಿಸಿದ್ದು, ಅದರೊಳಗೆ ತಮ್ಮ ಮಗ ಜೀವಂತವಾಗಿ ಸಿಕ್ಕಿದ್ದಾನೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.