ETV Bharat / bharat

ನೃತ್ಯದ ವಿಚಾರಕ್ಕೆ ಬಾಲಕಿಗೆ ಪೆಟ್ರೋಲ್​ ಸುರಿದ ಬೆಂಕಿ ಹಚ್ಚಿದ ದುರುಳರು - ಪುಂಡ ಹುಡುಗರು

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ತಮ್ಮೊಂದಿಗೆ ನೃತ್ಯ ಮಾಡಲು ಅವಕಾಶ ನೀಡದ ಕಾರಣಕ್ಕೆ ಬಾಲಕಿಯೊಬ್ಬಳಿಗೆ ಇಬ್ಬರು ದುರುಳರು ಹಚ್ಚಿ ದುಷ್ಕೃತ್ಯ ಎಸಗಿದ್ದಾರೆ.

miscreants-set-fire-to-minor-girl-for-refusing-to-dance-in-bihar
ನೃತ್ಯದ ವಿಚಾರಕ್ಕೆ ಬಾಲಕಿಗೆ ಪೆಟ್ರೋಲ್​ ಸುರಿದ ಬೆಂಕಿ ಹಚ್ಚಿದ ದುರುಳರು
author img

By

Published : Jan 19, 2023, 8:19 PM IST

ವೈಶಾಲಿ (ಬಿಹಾರ): ಮದುವೆ ಸಮಾರಂಭದ ನಿಮಿತ್ತ ನಡೆಯುತ್ತಿದ್ದ ಗ್ರಾಮ ಪೂಜೆಯಲ್ಲಿ ನೃತ್ಯದ ವಿಚಾರವಾಗಿ ಬಾಲಕಿಯೊಬ್ಬಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ಆಘಾತಕಾರಿ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಅದೃಷ್ಟವಾಶತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇಲ್ಲಿನ ರಾಜಪಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಯುವಕನ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮದುವೆ ಪೂರ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪೂಜೆಯಲ್ಲಿ ಹುಡುಗಿಯರು ಸೇರಿಕೊಂಡು ನೃತ್ಯ ಮಾಡುತ್ತಿದ್ದರು. ಈ ವೇಳೆ, ಕೆಲ ಹುಡುಗರು ಒಳ ನುಗ್ಗಿ ಹುಡುಗಿಯರ ಮಧ್ಯೆ ಕುಣಿಯಲು ಮುಂದಾಗಿದ್ದಾರೆ. ಈಗ ಇದನ್ನು ವಿರೋಧಿಸಿದ ಹುಡುಗಿಯರು ಆ ಕಿಡಿಗೇಡಿ ಹುಡುಗರನ್ನು ಅಲ್ಲಿಂದ ಓಡಿಸಿದ್ದಾರೆ.

ರಾತ್ರಿ ಬಾಲಕಿಯನ್ನು ತಡೆದು ಬೆದರಿಕೆ ತಂತ್ರ: ತಾವು ಡ್ಯಾನ್ಸ್​ ಮಾಡುತ್ತಿದ್ದಾಗ ಒಳ ನುಗ್ಗಿದ ಕಾರಣ ಹಾಗೂ ಹುಡುಗಿಯರು ಓಡಿಸಿದ್ದರಿಂದ ಆ ಕಿಡಿಗೇಡಿ ಹುಡುಗರು ಸಿಟ್ಟಾಗಿದ್ದಾರೆ. ಹೀಗಾಗಿಯೇ ಹುಡುಗಿಯರ ಗುಂಪಿನಲ್ಲಿದ್ದ 6ನೇ ತರಗತಿಯ ಬಾಲಕಿಯನ್ನು ಟಾರ್ಗೆಟ್​ ಮಾಡಿ ಆಕೆಗೆ ಬೆದರಿಸುವ ಯಂತ್ರ ಮಾಡಿದ್ದಾರೆ. ಮರು ದಿನ ಮದುವೆ ಮೆರವಣಿಗೆ ಮುಗಿಸಿ ಹಿಂತಿರುಗುತ್ತಿದ್ದಾಗ ಪುಂಡ ಹುಡುಗರು ತಡೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಬಾಲಕಿ ಚೀರಿಕೊಂಡಿದ್ದರಿಂದ ಆಕೆಯನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಬಾಲಕಿ ಮನೆಗೆ ಬಂದು ಅಜ್ಜಿ ಜೊತೆ ಮಲಗಿದ್ದಾಳೆ.

ಮರು ದಿನ ಮತ್ತೆ ಬಾಲಕಿಗಾಗಿ ಕಾದ ಪುಂಡರು: ಅವತ್ತು ರಾತ್ರಿಯನ್ನು ಬಾಲಕಿ ಚೀರಾಟ ಮಾಡಿದ್ದರಿಂದ ಪುಂಡರು ಬಿಟ್ಟು ಹೋಗಿದ್ದಾರೆ. ಆದರೆ, ಇದರ ಮರು ದಿನ ಸಹ ಬಾಲಕಿಗಾಗಿ ಪುಂಡರ ಗುಂಪಿನಲ್ಲಿದ್ದ ಇಬ್ಬರು ಸಹೋದರರು ಕಾದು ಕುಳಿತಿದ್ದಾರೆ. ಬೆಳಗ್ಗೆ ಬಾಲಕಿ ಬರ್ಹಿದೆಸೆಗೆ ತೆರಳಲು ಮನೆಯಿಂದ ಹೊರಟಿದ್ದಳು. ಈ ವೇಳೆ ಬಂದ ಇಬ್ಬರು ಸಹೋದರರು ಆಕೆಯನ್ನು ಹಿಡಿದುಕೊಂಡಿದ್ದಾರೆ. ಅಲ್ಲದೇ, ಬಾಲಕಿಯ ಬಾಯಿ ಮುಚ್ಚಿ ಹಿಡಿದು ಬೇರೆಡೆ ಕರೆದೊಯ್ದು ಬೆದರಿಸಿದ್ದಾರೆ.

ಪೆಟ್ರೋಲ್​ ಸುರಿದ ಬೆಂಕಿ ಹಚ್ಚಿ ದುಷ್ಕೃತ್ಯ: ಬರ್ಹಿದೆಸೆಗೆ ತೆರಳುತ್ತಿದ್ದ ಬಾಲಕಿಯನ್ನು ಹಿಂದಿನಿಂದ ಬಂದು ಬಾಯಿ ಮುಚ್ಚಿದ ದುರುಳರು, ಸ್ವಲ್ಪ ದೂರ ಎಳೆದೊಯ್ದು ಜೀವ ಬೆದರಿಕೆ ಹಾಕಿದ್ದಾರೆ. ನಿನ್ನನ್ನು ಸುಟ್ಟು ಬಿಸಾಡುತ್ತೇವೆ ಎಂದು ಹೆದರಿಸಿದ್ದಾರೆ. ಅಂತೆಯೇ, ಬಾಲಕಿ ಮೇಲೆ ಕಿರಾತಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಸಿದ್ದಾರೆ. ಅಲ್ಲದೇ, ಚೂರಿಯಿಂದ ಇರಿದಿದ್ದಾರೆ. ಇದರಿಂದ ಬಾಲಕಿಯ ಚೀರಾಟ ಮತ್ತು ಆಳುವುದು ಕೇಳಿಸಿಕೊಂಡು ಜನರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲೇ, ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲು: ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಬೆಂಕಿ ನಂದಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬಾಲಕಿಯ ದೇಹದ ಕೆಲವು ಭಾಗ ಸುಟ್ಟಿದ್ದು, ಹಾಜಿಪುರ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿ, ಬಾಲಕಿಯ ಪ್ರಾಪ್ತ ಬಾಲಕನ ಹೇಳಿಕೆಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ಪೊಲೀಸ್​ ಅಧಿಕಾರಿಗಳು: ಬಾಲಕಿಯ ಮೇಲಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ 'ಈಟಿವಿ ಭಾರತ್​' ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಮಹುವಾ ಎಸ್‌ಡಿಪಿಒ ಪೂನಂ ಕೇಸರಿ ಅವರ ಮೊಬೈಲ್ ಸ್ವಿಚ್ಡ್​​ ಆಫ್ ಆಗಿತ್ತು. ರಾಜಪಕರ್ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಕುಮಾರ್ ಅವರ ಮೊಬೈಲ್ ಸಂಖ್ಯೆ ವ್ಯಾಪ್ತಿಯಿಂದ ಹೊರಗಿದೆ ಎಂದು ಬರುತ್ತಿತ್ತು. ಇದೇ ವೇಳೆ ವೈಶಾಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮನೀಶ್ ಅವರ ಫೋನ್​ ರಿಂಗ್​ ಆದರೂ ಕೂಡ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ​ಬೋರ್​ಗೆ ವಾಹನ ಡಿಕ್ಕಿ: ಚಾಲಕನ ಹೊಟ್ಟೆಗೆ ಚುಚ್ಚಿದ ಬೋರ್​ ಹಿಡಿಕೆ... ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.