ETV Bharat / bharat

ಚಲಿಸುತ್ತಿದ್ದ ರೈಲಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು.. ಕಾರಣ ಇಲ್ಲದಿಲ್ಲ.. - ಡೆಹ್ರಾಡೂನ್-ಹೌರಾ ಉಪಾಸನಾ ಎಕ್ಸ್‌ಪ್ರೆಸ್

ಪಶ್ಚಿಮ ಬಂಗಾಳ ನಿವಾಸಿಯಾದ ಕುನಾಲ್ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಪಾಟ್ನಾದಲ್ಲಿ ಜೈಲಿನಲ್ಲಿದ್ದ ಆತನನ್ನು ಬಂಗಾಳದ ಸೀಲ್ಡಾಗೆ ಕರೆದೊಯ್ಯಲಾಗುತ್ತಿತ್ತು. ಕುನಾಲ್​ನನ್ನು ಕೊಲ್ಲುವುದಾಗಿ ಅಪರಿಚಿತರಿಂದ ಬೆದರಿಕೆ ಬಂದ ಹಿನ್ನೆಲೆ ಆತನನ್ನು ಅಂಗವಿಕಲರ ಬೋಗಿಗೆ ಕಳುಹಿಸಲಾಗಿತ್ತು..

Miscreants open fire on moving train, home gurad hurt
ಚಲಿಸುತ್ತಿದ್ದ ರೈಲಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು: ನಡೆದಿತ್ತಾ ಅಪರಾಧಿಯ ಹತ್ಯೆ ಯತ್ನ..?
author img

By

Published : Feb 26, 2021, 7:00 AM IST

ಲಖಿಸರೈ (ಬಿಹಾರ): ಚಲಿಸುತ್ತಿದ್ದ ರೈಲಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಬಿಹಾರದ ದಾನಾಪುರ ಜಿಲ್ಲೆಯ ಕಿಯುಲ್ ನಿಲ್ದಾಣದ ಬಳಿ ನಡೆದಿದೆ. ರೈಲ್ವೆ ನಿಲ್ದಾಣದ ಹೋಂಗಾರ್ಡ್​ಗೆ ಗುಂಡು ತಾಗಿ, ಗಾಯವಾಗಿದೆ.

ಡೆಹ್ರಾಡೂನ್-ಹೌರಾ ಉಪಾಸನಾ ಎಕ್ಸ್‌ಪ್ರೆಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಕೆಲಸ ಮುಗಿಸಿ ಹೊರಡುತ್ತಿದ್ದ ಹೋಂ ಗಾರ್ಡ್ ಭುನೇಶ್ವರ್ ಕುಮಾರ್ ಅವರಿಗೆ ಗಾಯವಾಗಿದೆ. ನಂತರ ಸಾರ್ವಜನಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಫ್​ಐಆರ್ ದಾಖಲಾಗಿದೆ.

ರೈಲ್ವೆ ಮೇಲೆ ಗುಂಡು ಹಾರಿಸಲು ಕಾರಣವೇನು? : ಪಶ್ಚಿಮ ಬಂಗಾಳ ನಿವಾಸಿಯಾದ ಕುನಾಲ್ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಪಾಟ್ನಾದಲ್ಲಿ ಜೈಲಿನಲ್ಲಿದ್ದ ಆತನನ್ನು ಬಂಗಾಳದ ಸೀಲ್ಡಾಗೆ ಕರೆದೊಯ್ಯಲಾಗುತ್ತಿತ್ತು. ಕುನಾಲ್​ನನ್ನು ಕೊಲ್ಲುವುದಾಗಿ ಅಪರಿಚಿತರಿಂದ ಬೆದರಿಕೆ ಬಂದ ಹಿನ್ನೆಲೆ ಆತನನ್ನು ಅಂಗವಿಕಲರ ಬೋಗಿಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲಿ ಸ್ತಬ್ಧವಾಗಲಿವೆ 6 ಲಕ್ಷಕ್ಕೂ ಹೆಚ್ಚು ಲಾರಿಗಳು!

ಆದರೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಅದೇ ರೈಲಿನಲ್ಲಿ ಕರ್ತವ್ಯ ಮುಗಿಸಿ ಹೊರಡುತ್ತಿದ್ದ ಹೋಂ ಗಾರ್ಡ್ ಭುನೇಶ್ವರ್ ಕುಮಾರ್​ಗೆ ಕೈಗೆ ಗಾಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈಗ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.