ETV Bharat / bharat

ದುಷ್ಕರ್ಮಿಗೆ ಗುಂಡು ಹಾರಿಸಿ ಹತ್ಯೆ: ಕೊಲೆಗಾರರ ಮಾಹಿತಿ ನೀಡಲು ಹೋದ ಸ್ಥಳೀಯರ ಮೇಲೆ ಲಾಠಿ ಪ್ರಹಾರ? - The body of a miscreant was detected at Bhatpara in North 24 Parganas district of West Bengal on Friday

ಕೊಲೆಯಾದವ ಸಮಾಜ ವಿರೋಧಿ ಚಟುವಟಿಕೆಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಈತನ ಹೆಸರು ಪೊಲೀಸ್ ಡೈರಿಗಳಲ್ಲಿ ದಾಖಲಾಗಿದೆ.

Miscreant shot dead at Bhatpara
Miscreant shot dead at Bhatpara
author img

By

Published : Apr 23, 2021, 5:17 PM IST

Updated : Apr 23, 2021, 5:35 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರದಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಆತನ ಶವದ ಬಳಿ ಇದ್ದ ಅಕ್ರಮ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಯನ್ನು ರಾಜ ಚೌಧರಿ (20) ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲವರು ತಮ್ಮ ನಿವಾಸದ ಬಳಿ ಮೋಟರ್ ಸೈಕಲ್‌ಗಳಲ್ಲಿ ಬಂದು ಗುಂಡು ಹಾರಿಸಿದ್ದಾರೆ ಎಂದು ಸಾವಿಗೀಡಾದ ಯುವಕನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅವನನ್ನು ಕೊಂದ ನಂತರ ಅವರು ಸ್ಥಳದಿಂದ ಓಡಿಹೋಗಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಕೊಲೆಗಾರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಬದಲಿಗೆ ಕೊಲೆಗಾರನ ಬಗ್ಗೆ ಮಾಹಿತಿ ನೀಡಲು ಹೋದಾಗ ಸ್ಥಳೀಯರ ಮೇಲೆಯೇ ಲಾಠಿ ಚಾರ್ಜ್​ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳೀಯ ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ತೆರಳಿ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.

ಇನ್ನು ಕೊಲೆಯಾದವ ಸಮಾಜ ವಿರೋಧಿ ಚಟುವಟಿಕೆಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಈತನ ಹೆಸರು ಪೊಲೀಸ್ ಡೈರಿಗಳಲ್ಲಿ ಇದ್ದು, ಆತ ಪೆರೋಲ್​ ಮೇಲೆ ಹೊರಬಂದಿದ್ದನಂತೆ.

Last Updated : Apr 23, 2021, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.