ETV Bharat / bharat

ಕುದಿಯುವ ಹಾಲಿನ ಬೃಹತ್​ ಬಾಯ್ಲರ್​ಗೆ​​ ಬಿದ್ದು ಪ್ರಾಣ ಕಳೆದುಕೊಂಡ ಮಕ್ಕಳು! - ಪ್ರಾಣ ಕಳೆದುಕೊಂಡ ಮಕ್ಕಳು

ಬಿಹಾರದ ಗ್ರಾಮವೊಂದರಲ್ಲಿ ಮನೆಯ ಒಳಗೆ ಕುದಿಯಲು ಇಟ್ಟಿದ್ದ ಹಾಲಿನ ಬೃಹತ್​ ಬಾಯ್ಲರ್​ಗೆ ಬಿದ್ದು ಮಕ್ಕಳಿಬ್ಬರು ಅಸುನೀಗಿದ ಘಟನೆ ನಡೆದಿದೆ. ಮನೆಯಲ್ಲಿ ಸುಮಾರು 30 ಲೀಟರ್​ ಹಾಲು ಕುದಿಯಲು ಇಟ್ಟಿದ್ದರು. ಆಟವಾಡುತ್ತಲೇ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

Children die after falling into boiling milk in Bihar
ಸಂಗ್ರಹ ಚಿತ್ರ
author img

By

Published : Nov 2, 2020, 8:28 PM IST

Updated : Nov 2, 2020, 11:42 PM IST

ಮಧುಬಾನಿ (ಬಿಹಾರ): ಆಟವಾಡುತ್ತಲೇ ಇಬ್ಬರು ಮಕ್ಕಳು ಕುದಿಯುವ ಹಾಲಿನ ಬಾಯ್ಲರ್​ಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಧುಬನಿ ಪಟ್ಟಣದ ಬರೇಲ್ ಗ್ರಾಮದಲ್ಲಿ ಸಂಭವಿಸಿದೆ. ಅಮಿತ್ (2) ಮತ್ತು ಸಹೋದರಿ ಅಂಜಲಿ (5) ಮೃತಪಟ್ಟ ಮಕ್ಕಳೆಂದು ತಿಳಿದು ಬಂದಿದೆ.

ತೀವ್ರ ಸುಟ್ಟ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಆಟ ಆಡುವಾಡುತ್ತದ್ದ ಮಕ್ಕಳು ಇದ್ದಕ್ಕಿದ್ದಂತೆ ಭಾರಿ ಗಾತ್ರದ ಹಾಲು ಕುದಿಯುವ ಬಾಯ್ಲರ್​ಗೆ ಬಿದ್ದಿದ್ದಾರೆ. ಬಿದ್ದ ತಕ್ಷಣ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ತೀವ್ರ ಸುಟ್ಟ ಗಾಯಗೊಂಡಿದ್ದ ಅಮಿತ್ ಮತ್ತು ಸಹೋದರಿ ಅಂಜಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದರ್ಭಂಗಾದ ಡಿಹೆಚ್​ಹೆಚ್ ಆಸ್ಪತ್ರೆ​ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆಡ ಆಡುತ್ತಲೇ ಇಬ್ಬರೂ ಸುಮಾರು 30 ಲೀಟರ್​ ಹಾಲು ಕುದಿಯುತ್ತಿದ್ದ ಭಾರಿ ಗಾತ್ರದ ಬಾಯ್ಲರ್​ಗೆ ಬಿದ್ದಿದ್ದಾರೆ.

Last Updated : Nov 2, 2020, 11:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.