ETV Bharat / bharat

Sex education: ಸಹೋದರನಿಂದಲೇ ಗರ್ಭಿಣಿಯಾದ ಅಪ್ರಾಪ್ತೆ: ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸಿ ಎಂದ ಕೇರಳ ಹೈಕೋರ್ಟ್ - ಅಪ್ರಾಪ್ತ ಮಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯ

ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ವಿಷಯವನ್ನು ಸೇರಿಸುವ ಅಗತ್ಯತೆಯ ಬಗ್ಗೆ ಪರಿಶೀಲಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

Kerala HC recommends inclusion of sex education in curriculum

author img

By

Published : Jun 26, 2023, 4:20 PM IST

Updated : Jun 26, 2023, 4:51 PM IST

ಕೊಚ್ಚಿ (ಕೇರಳ) : ಸುರಕ್ಷಿತ ಲೈಂಗಿಕ ಶಿಕ್ಷಣ ವಿಷಯವನ್ನು ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸುವ ಅಗತ್ಯತೆಯ ಬಗ್ಗೆ ಪರಿಶೀಲಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಸಲಹೆ ನೀಡಿದೆ. ತನ್ನ ಸ್ವಂತ ಸಹೋದರನಿಂದಲೇ ಗರ್ಭಿಣಿಯಾಗಿರುವ ತನ್ನ ಅಪ್ರಾಪ್ತ ಮಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಯಾರೂ ಪೋಷಕರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ಆದರೆ ಇದಕ್ಕೆ ಸಮಾಜದಲ್ಲಿರುವ ನಾವೇ ಹೊಣೆಗಾರರು. ತನ್ನ ಸದಸ್ಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲಾಗದ ಕುಟುಂಬಗಳಲ್ಲಿ ಒಡಹುಟ್ಟಿದವರ ಮಧ್ಯೆ ಸಂಭೋಗ ಸಂಭವಿಸಬಹುದು. ಆದರೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿಯೂ ಇದು ಸಂಭವಿಸಬಹುದು. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸರಿಯಾದ 'ಲೈಂಗಿಕ ಶಿಕ್ಷಣ'ದ ಅಗತ್ಯತೆಯ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ. ಒಳ್ಳೆಯ ಕೌಟುಂಬಿಕ ವಾತಾವರಣ ಸಮಾಜಕ್ಕೆ ಅವಶ್ಯಕವಾಗಿದೆ. ಇಂತಹ ದುರದೃಷ್ಟವಂತ ವ್ಯಕ್ತಿಗಳನ್ನು ದೂಷಿಸುವ ಬದಲು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಸಾಧಿಸಲು ಒಗ್ಗಟ್ಟಾಗಬೇಕಿದೆ" ಎಂದು ಕೋರ್ಟ್ ಹೇಳಿತು.

ಶಾಲಾ- ಕಾಲೇಜುಗಳ ಪಠ್ಯಕ್ರಮದಲ್ಲಿ "ಸುರಕ್ಷಿತ ಲೈಂಗಿಕ ಶಿಕ್ಷಣ"ವನ್ನು ಸೇರಿಸುವ ಬಗ್ಗೆ ಅಧ್ಯಯನ ಮಾಡಲು ಅಗತ್ಯವಿದ್ದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕೂಡ ನ್ಯಾಯಾಲಯ ಕರೆ ನೀಡಿದೆ. ಈ ಹಿಂದೆ, ಅಪ್ರಾಪ್ತ ಬಾಲಕಿಯ ಏಳನೇ ತಿಂಗಳ ಗರ್ಭಾವಸ್ಥೆಯನ್ನು ವೈದ್ಯಕೀಯ ರೀತಿಯಲ್ಲಿ ಮುಕ್ತಾಯಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ನಂತರ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದರ ಬೆನ್ನಲ್ಲೇ ನ್ಯಾಯಾಲಯವು ಬಾಲನ್ಯಾಯ ಕಾಯ್ದೆಯ ಪ್ರಕಾರ ನವಜಾತ ಶಿಶುವಿನ ಪಾಲನೆ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಸೂಚಿಸಿದೆ.

ಮಗುವನ್ನು ತಮಗೆ ಒಪ್ಪಿಸಲಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಆಕೆಯ ಚಿಕ್ಕಪ್ಪನಿಗೆ ಒಪ್ಪಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ನ್ಯಾಯಾಲಯಕ್ಕೆ ತಿಳಿಸಿದೆ. “ಮೇಲಿನ ಆದೇಶಗಳ ಹಿನ್ನೆಲೆಯಲ್ಲಿ ಮುಂದಿನ ಆದೇಶದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಮಕ್ಕಳ ಕಲ್ಯಾಣ ಸಮಿತಿಯು ಕಾನೂನಿನ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನವಜಾತ ಶಿಶುವಿನ ರಕ್ಷಣೆ ರಾಜ್ಯದ ಕರ್ತವ್ಯವಾಗಿದೆ. ಈ ರೀತಿಯ ಮುಜುಗರಗಳು ಭವಿಷ್ಯದಲ್ಲಿ ನಮ್ಮ ಸಮಾಜದಲ್ಲಿ ಇರಕೂಡದು. ಪಾಲಕರು ಮತ್ತು ಸಂತ್ರಸ್ತ ಬಾಲಕಿಯ ಮುಜುಗರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಇಂದಿನ ಯುಗದಲ್ಲಿ ಲೈಂಗಿಕ ಶಿಕ್ಷಣ ಬಹಳ ಮುಖ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ನಮ್ಮ ಸುತ್ತಲಿನ ಪ್ರಪಂಚವು ಬದಲಾಗುತ್ತಿರುವುದನ್ನು ನಾವು ನೋಡುತ್ತಿರುವಂತೆಯೇ, ಆಧುನಿಕ ಭಾರತದಲ್ಲಿ ಲೈಂಗಿಕ ಶಿಕ್ಷಣದ ಪ್ರಸ್ತುತತೆ ಬಲವಾಗಿದೆ. ಏಕೆಂದರೆ ಪ್ರತಿಯೊಬ್ಬರಿಗೂ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಹದಿಹರೆಯದವರು ಸಂಶಯಾಸ್ಪದ ಮೂಲಗಳ ಮೂಲಕ ಲೈಂಗಿಕತೆಯ ಬಗ್ಗೆ ಮಾಹಿತಿ ಪಡೆಯಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ : FCI: ಇ-ಹರಾಜು ಮೂಲಕ ಮಾತ್ರ ಅಕ್ಕಿ, ಗೋಧಿ ಮಾರಾಟ- ಎಫ್​ಸಿಐಗೆ ಕೇಂದ್ರ ಸರ್ಕಾರ ಸೂಚನೆ

Last Updated : Jun 26, 2023, 4:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.