ETV Bharat / bharat

ಆಯುಷ್​ ಸಚಿವಾಲಯ-ಏಮ್ಸ್ ಜಂಟಿ ಸಮಗ್ರ ಔಷಧ ವಿಭಾಗ ಪ್ರಾರಂಭಿಸಲು ಚಿಂತನೆ

ದೆಹಲಿ ಏಮ್ಸ್​ನಲ್ಲಿ ಸಮಗ್ರ ಔಷಧ ವಿಭಾಗ ಸ್ಥಾಪಿಸುವ ಬಗ್ಗೆ ಆಯುಷ್ ಕಾರ್ಯದರ್ಶಿ ಮತ್ತು ಏಮ್ಸ್ ನಿರ್ದೇಶಕ ಉತ್ಸುಕತೆ ತೋರಿದ್ದಾರೆ.

Integrative Medicine Department from AYUSH Ministry-AIMS
ದೆಹಲಿ ಏಮ್ಸ್​ನಲ್ಲಿ ಸಮಗ್ರ ಔಷಧ ವಿಭಾಗ
author img

By

Published : Dec 9, 2020, 5:10 PM IST

ನವದೆಹಲಿ: ಆಯುಷ್ ಸಚಿವಾಲಯ ಮತ್ತು ಏಮ್ಸ್ ಜಂಟಿಯಾಗಿ ಏಮ್ಸ್​ನಲ್ಲಿ ಸಮಗ್ರ ಔಷಧ ವಿಭಾಗ ಸ್ಥಾಪಿಸಲು ಚಿಂತನೆ ನಡೆಸಿದೆ.

ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಮತ್ತು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಜಂಟಿಯಾಗಿ ನವದೆಹಲಿ ಏಮ್ಸ್​ನ ಇಂಟಿಗ್ರೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ (ಸಿಐಎಂಆರ್) ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಆಯುಷ್ ಸಚಿವಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಕೀಮ್​ ಮೂಲಕ ಸಿಐಎಂಆರ್ ಈಗಾಗಲೇ ಉತ್ತಮ ಸಹಕಾರ ಪಡೆಯುತ್ತಿದೆ.

ಓದಿ : ಭಾರತ್ ಬಯೋಟೆಕ್‌ನಲ್ಲಿ ಕೊವ್ಯಾಕ್ಸಿನ್‌ ಬಗ್ಗೆ ವಿದೇಶಿ ರಾಯಭಾರಿಗಳಿಗೆ ಮಾಹಿತಿ

ಸಿಐಎಂಆರ್ ಮುಖ್ಯಸ್ಥ ಡಾ. ಗೌತಮ್ ಶರ್ಮಾ ಮತ್ತು ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಯೋಗ ಮತ್ತು ಆಯುರ್ವೇದ ವಿಭಾಗಗಳಲ್ಲಿ ಸಿಐಎಂಆರ್ ನಡೆಸುತ್ತಿರುವ ಅತ್ಯಾಧುನಿಕ ಸಂಶೋಧನಾ ಚಟುವಟಿಕೆಗಳನ್ನು ಪರಿಶೀಲನೆ ನಡೆಸಲಾಯಿತು. ಆಯುಷ್ ಸಚಿವಾಲಯ ಮತ್ತು ಏಮ್ಸ್ ಸಿಐಎಂಆರ್​ನಲ್ಲಿ ಸಂಶೋಧನಾ ಸಹಯೋಗ ಮತ್ತು ಸಹಕಾರಿ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಸಿಐಎಂಆರ್​ನಲ್ಲಿ ಹೆಚ್ಚುತ್ತಿರುವ ರೋಗಿಗಳು ಮತ್ತು ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳನ್ನು ಗಮನಿಸಿದ ಆಯುಷ್ ಕಾರ್ಯದರ್ಶಿ ಮತ್ತು ಏಮ್ಸ್ ನಿರ್ದೇಶಕ, ಇಲ್ಲಿ ಸಮಗ್ರ ಔಷಧ ವಿಭಾಗವನ್ನು ಅಭಿವೃದ್ದಿಪಡಿಸಲು ಉತ್ಸುಕತೆ ತೋರಿದ್ದಾರೆ. ಭವಿಷ್ಯದಲ್ಲಿ ಸಿಐಎಂಆರ್​ನಲ್ಲಿ ಶಾಶ್ವತ ವಿಭಾಗ ಸ್ಥಾಪಿಸಿ, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ನೇಮಿಸುವ ಉದ್ದೇಶ ಹೊಂದಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.