ಜಮ್ಮು ಕಾಶ್ಮೀರ : ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಣಿಹಾಲ್ ಬಟಾಪುರ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಭದ್ರತಾ ಪಡೆ ಮತ್ತು ಉಗ್ರರು ಮುಖಾಮುಖಿಯಾಗುವ ಮೊದಲು, ಉಗ್ರರಿಗೆ ಶರಣಾಗಲು ಭದ್ರತಾ ಪಡೆ ತಿಳಿಸಿತ್ತು. ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೊರಗೆ ಬಂದು ಶರಣಾಗುವಂತೆ ಹಲವಾರು ಬಾರಿ ಅಧಿಕಾರಿಗಳು ಹೇಳಿದ್ದರು.
ಉಗ್ರ ಅಕಿಬ್ ಅಹ್ಮದ್ ಮಲಿಕ್ ಅವರ ಪತ್ನಿ ಮತ್ತು ಒಂದು ವರ್ಷದ ಮಗನನ್ನು ಸಹ ಅಲ್ಲಿ ಹಾಜರುಪಡಿಸಲಾಗಿತ್ತು. ಆದರೆ, ಉಗ್ರರು ಶರಣಾಗಲು ನಿರಾಕರಿಸಿದರು. ಈ ಹಿನ್ನೆಲೆ ಸೇನೆ ಅನಿವಾರ್ಯವಾಗಿ ಗುಂಡಿನ ಚಕಮಕಿ ನಡೆಸಿದೆ.