ಬಾರಾಮುಲ್ಲಾ(ಶ್ರೀನಗರ): ಜಿಲ್ಲೆಯ ಸೊಪೋರ್ ಬಸ್ ನಿಲ್ದಾಣದ ಬಳಿಯ ಪೊಲೀಸ್ ಚೌಕಿಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಲಾಗಿದ್ದು, ಅದೃಷ್ಟವಶಾತ್ ಇದರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ರಸ್ತೆ ಪಕ್ಕದಲ್ಲಿ ಗ್ರೆನೇಡ್ ಸ್ಫೋಟಗೊಂಡಿದ್ದು, ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಕಾಶ್ಮೀರದ ಸೊಪೋರ್ ಪಟ್ಟಣದ ಪೊಲೀಸ್ ಚೌಕಿ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಇದರಿಂದ ಸ್ಥಳೀಯರಿಗೆ ಕೆಲಹೊತ್ತು ದಿನನಿತ್ಯದ ಜೀವನಕ್ಕೆ ತೊಂದರೆಯಾಯಿತು.
ಇದನ್ನೂ ಓದಿ: ಕುಡಿದ ನಶೆಯಲ್ಲಿದ್ದ ಹೆತ್ತಮ್ಮನಿಂದ ಮಗುವಿನ ಮೇಲೆ ಭಯಂಕರ ಹಲ್ಲೆ.. ವಿಡಿಯೋ ವೈರಲ್!
ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಮಾಹಿತಿ ಪ್ರಕಾರ, ಶಂಕಿತ ಉಗ್ರರು ಈ ಗ್ರೆನೇಡ್ ದಾಳಿ ನಡೆಸಿದ್ದು, ಗುರಿ ತಪ್ಪಿದ್ದರಿಂದ ರಸ್ತೆ ಬದಿಯಲ್ಲಿ ಸ್ಫೋಟಗೊಂಡಿದೆ ಎಂದಿದ್ದಾರೆ. ಉಗ್ರರ ಪತ್ತೆ ಹಚ್ಚಲು ಪೊಲೀಸರು ಹಾಗೂ ಭದ್ರತಾ ಪಡೆ ಈಗಾಗಲೇ ಈ ಪ್ರದೇಶ ಸುತ್ತುವರಿದಿವೆ. ಆದರೆ ಯಾವುದೇ ಉಗ್ರ ಸಂಘಟನೆ ಇದರ ಜವಾಬ್ದಾರಿ ಹೊತ್ತುಕೊಂಡಿಲ್ಲ.