ETV Bharat / bharat

ಕಾಶ್ಮೀರ ಪಂಡಿತನ ಮನೆ ಭದ್ರತಾ ಸಿಬ್ಬಂದಿಯ ರೈಫಲ್​ ಕದಿಯಲು ಉಗ್ರರಿಂದ ಯತ್ನ - ಯೋಧನ ರೈಫಲ್​ ಕದಿಯಲು ಯತ್ನ

ಕಾಶ್ಮೀರದಲ್ಲಿ ಪಂಡಿತರಿಗೆ ಜೀವ ಬೆದರಿಕೆ ಬಂದ ಬೆನ್ನಲ್ಲೇ ಅವರ ಭದ್ರತೆಗೆ ಇದ್ದ ಯೋಧನ ರೈಫಲ್​ ಅನ್ನು ಕಸಿದುಕೊಳ್ಳುವ ವಿಫಲ ಯತ್ನ ನಡೆದಿದೆ.

militants-attempt
ಉಗ್ರರಿಂದ ಯತ್ನ
author img

By

Published : Apr 26, 2022, 4:23 PM IST

ಅನಂತನಾಗ್‌(ಜಮ್ಮು- ಕಾಶ್ಮೀರ): ಕಾಶ್ಮೀರ ಪಂಡಿತರೊಬ್ಬರ ಮನೆಗೆ ಭದ್ರತೆ ನೀಡಿದ್ದ ಸಿಆರ್​ಪಿಎಫ್​ ಯೋಧನ ರೈಫಲ್​ ಅನ್ನು ಕಸಿದುಕೊಳ್ಳಲು ಉಗ್ರರು ಯತ್ನಿಸಿದ ಘಟನೆ ನಡೆದಿದೆ. ಅನಂತನಾಗ್​ ರೇಶಿಬಜಾರ್​ನಲ್ಲಿರುವ ಪಂಡಿತರ ಮನೆಗೆ ಅರೆಸೇನಾಪಡೆಯ ಬಿಎಸ್​ಎಫ್​ ಯೋಧ ಕಾವಲು ಕಾಯುತ್ತಿದ್ದಾಗ ದಾಳಿ ಮಾಡಿ ಉಗ್ರರು ಯೋಧನ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಬಳಿಕ ಯೋಧನ ರೈಫಲ್​ ಕಸಿದುಕೊಳ್ಳಲು ಮುಂದಾಗಿದ್ದಾರೆ.

ಈ ವೇಳೆ ಪ್ರತಿರೋಧ ಒಡ್ಡಿದ ಯೋಧ ತನ್ನನ್ನು ರಕ್ಷಿಸಿಕೊಂಡಿದ್ದಲ್ಲದೇ, ಉಗ್ರರನ್ನು ಓಡಿಸಿದ್ದಾರೆ. ಅಲ್ಲದೇ, ಅಲ್ಲಿದ್ದ ಪೊಲೀಸರು ಕೂಡ ಯೋಧನ ನೆರವಿಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕೆಣಕಿದ ಉಗ್ರರು ಪರಾರಿಯಾಗಿದ್ದಾರೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 4 ತಾಸಲ್ಲಿ 25 ಕಿಮೀ ಈಜಿ ದಾಖಲೆ ಬರೆದ 10 ವರ್ಷದ ಪೋರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.