ಶ್ರೀನಗರ(ಜಮ್ಮು ಕಾಶ್ಮೀರ): ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೈಬಾದ ಅಂಗಸಂಸ್ಥೆಯಾದ ಟಿಆರ್ಎಫ್ನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸಾವನ್ನಪ್ಪಿದ ಭಯೋತ್ಪಾದಕರನ್ನು ಶೋಪಿಯಾನ್ ಮೂಲದ ಸಮೀರ್ ಅಹ್ಮದ್ ಶಾ ಮತ್ತು ಪುಲ್ವಾಮಾದ ರಯೀಸ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ.
-
#ShopianEncounterUpdate: 01 more #terrorist killed (Total 02, both local terrorists of #terror outfit LeT/TRF). #Incriminating materials including arms and ammunition recovered. Search going on.Further details shall follow. @JmuKmrPolice https://t.co/u9UtwO78ml
— Kashmir Zone Police (@KashmirPolice) January 22, 2022 " class="align-text-top noRightClick twitterSection" data="
">#ShopianEncounterUpdate: 01 more #terrorist killed (Total 02, both local terrorists of #terror outfit LeT/TRF). #Incriminating materials including arms and ammunition recovered. Search going on.Further details shall follow. @JmuKmrPolice https://t.co/u9UtwO78ml
— Kashmir Zone Police (@KashmirPolice) January 22, 2022#ShopianEncounterUpdate: 01 more #terrorist killed (Total 02, both local terrorists of #terror outfit LeT/TRF). #Incriminating materials including arms and ammunition recovered. Search going on.Further details shall follow. @JmuKmrPolice https://t.co/u9UtwO78ml
— Kashmir Zone Police (@KashmirPolice) January 22, 2022
ನಿಖರ ಮಾಹಿತಿಯನ್ನು ಆಧರಿಸಿ, ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಕಿಲ್ಬಾಲ್ ಪ್ರದೇಶವನ್ನು ಸುತ್ತುವರೆದು ದಾಳಿ ನಡೆಸಿದೆ. ಮೊದಲಿಗೆ ಶರಣಾಗಲು ಉಗ್ರರಿಗೆ ಸೂಚನೆ ನೀಡಲಾಗಿತ್ತು, ಆದರೂ ಉಗ್ರರು ಗುಂಡಿನ ದಾಳಿ ನಡೆಸಿದ ಕಾರಣದಿಂದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಮಗುಚಿದ ದೋಣಿಗಳು: 25 ಮಂದಿ ರಕ್ಷಣೆ, 8 ಮಂದಿ ನಾಪತ್ತೆ
ಎನ್‌ಕೌಂಟರ್ ನಡೆದ ಸ್ಥಳದಲ್ಲಿದ್ದ ಕೆಲವು ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ