ವಲಸೆ ಕಾರ್ಮಿಕರೊಬ್ಬರು ಚಲಿಸುತ್ತಿರುವ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆದ್ದಪಲ್ಲಿ ಜಿಲ್ಲೆಯ ರಾಮಗುಡಂ ರೈಲು ನಿಲ್ದಾಣದಲ್ಲಿ ಒಡಿಶಾದ ಕಾರ್ಮಿಕರೊಬ್ಬರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಹೈದರಾಬಾದ್‌ನಿಂದ ರಾಮಗುಂಡಂ ರೈಲು ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಗುಡಂ ರೈಲು ನಿಲ್ದಾಣದಲ್ಲಿ ಬರುತ್ತಿದ್ದ ಟ್ರೈನ್ ಎದುರು ಹೋಗಿ ನಿಂತು ಸಾವನ್ನಪ್ಪಿದ್ದಾರೆ.
ಎಲ್ಲಾ ಪ್ರಯಾಣಿಕರು ಈ ದೃಶ್ಯ ನೋಡುತ್ತಿದ್ದರೂ ಅಸಹಾಯಕರಾಗಿದ್ದರು. ಆದರೆ, ಮೃತರು ಮಾನಸಿಕ ಅಸ್ವಸ್ಥರಾಗಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.