ಮುಂಬೈ: ನವೆಂಬರ್ 26ರಂದು ಅರಬ್ಬಿ ಸಮುದ್ರದಲ್ಲಿ ಪತನವಾಗಿದ್ದ ಮಿಗ್ -29ಕೆ ವಿಮಾನದ ಪೈಲೆಟ್ನನ್ನು ಪತ್ತೆ ಹಚ್ಚಲು ಭಾರತೀಯ ನೌಕಾಪಡೆಯಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಕಾಣೆಯಾಗಿರುವ ಎರಡನೇ ಪೈಲಟ್ ಸಿಡಿಆರ್ ನಿಶಾಂತ್ ಸಿಂಗ್ ಅವರನ್ನು ಪತ್ತೆ ಹಚ್ಚಲು ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ಕರಾವಳಿಯಲ್ಲಿ ತೀವ್ರ ಶೋಧ ಕಾರ್ಯ ಕೈಗೊಂಡಿವೆ ಎಂದು ರಕ್ಷಣಾ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಪಘಾತಕ್ಕೀಡಾದ ಮಿಗ್-29ಕೆ ಅವಶೇಷ ಪತ್ತೆಮಾಡಿದ ನೌಕಾ ಪಡೆ.. ಪೈಲಟ್ಗಾಗಿ ಮುಂದುವರಿದ ಶೋಧ
ಮಿಗ್ -29ಕೆ ವಿಮಾನದ ಅವಶೇಷಗಳು ಈಗಾಗಲೇ ಪತ್ತೆಯಾಗಿದ್ದು, ಅವಶೇಷ ಪತ್ತೆಯಾದ ಪ್ರದೇಶ ಸುತ್ತಲೂ ವಿಶೇಷ ಉಪಕರಣಗಳು ಹಾಗೂ ನುರಿತರನ್ನು ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಿಗ್ -29ಕೆ ವಿಮಾನವು ರಷ್ಯಾದ ಏರೋಸ್ಪೇಸ್ ಕಂಪನಿ ಮೈಕೋಯಾನ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಭಾರತೀಯ ನೌಕಾಪಡೆಯಲ್ಲಿ 45 ಮಿಗ್ ವಿಮಾನಗಳಿವೆ.
ಸದ್ಯಕ್ಕೆ ಪೈಲೆಟ್ ಶೋಧಕ್ಕಾಗಿ 9 ಯುದ್ಧ ನೌಕೆಗಳು, 14 ಏರ್ಕ್ರಾಫ್ಟ್ಗಳು, ಫಾಸ್ಟ್ ಇಂಟರ್ಸೆಪ್ಟರ್ ಕ್ರಾಫ್ಟ್ ಅನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ನೌಕಾಪಡೆ ಭಾನುವಾರ ಮಾಹಿತಿ ನೀಡಿತ್ತು.