ನವದೆಹಲಿ: ನಿಯಂತ್ರಕವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಯಂತ್ರಾಂಶಗಳಿಲ್ಲದ ಎಕ್ಸ್‌ಬಾಕ್ಸ್ ಅನ್ನು ನೇರವಾಗಿ ಇಂಟರ್ನೆಟ್ ಸಂಪರ್ಕಿತ ಟೆಲಿವಿಷನ್ಗಳಲ್ಲಿ ಸೇರಿಸಲು ಜಾಗತಿಕ ಟಿವಿ ತಯಾರಕರೊಂದಿಗೆ ಕೆಲಸ ನಡೆಯುತ್ತಿದೆ ಎಂದು ಮೈಕ್ರೋಸಾಫ್ಟ್ ಘೋಷಿಸಿದೆ.
ಟೆಕ್ ದೈತ್ಯ ತನ್ನ ಎಕ್ಸ್‌ಕ್ಲೌಡ್ ಸ್ಟ್ರೀಮಿಂಗ್ ತಂತ್ರಜ್ಞಾನದ ಮೂಲಕ ಟಿವಿಗಳಿಗೆ ಎಕ್ಸ್‌ಬಾಕ್ಸ್ ಗೇಮ್ ಪಾಸ್ ಸೇವೆಯನ್ನು ತರುತ್ತದೆ. ಗೇಮ್ ಪಾಸ್‌ಗಾಗಿ ಹೊಸ ಚಂದಾದಾರಿಕೆ ಕೊಡುಗೆಗಳನ್ನು ಎಕ್ಸ್‌ಬಾಕ್ಸ್ ಅನ್ವೇಷಿಸುತ್ತಿದೆ. ಆದ್ದರಿಂದ ಪ್ರಪಂಚದಾದ್ಯಂತ ಆಟಗಾರರು ಈ ಮೋಜಿನ ಆಟಗಳನ್ನು ಆಡಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ.
ಕಂಪನಿಯು ಮೊಟ್ಟಮೊದಲ ಬಾರಿಗೆ ಜೂನ್ 13 ರಂದು ಉತ್ತಮ ಆಟಗಳ ಶ್ರೇಣಿಯನ್ನು ಅನಾವರಣಗೊಳಿಸಲಿದೆ. ಸಖತ್ ಎಂಜಾಯ್ ಮಾಡಿಕೊಂಡು ಎಕ್ಸ್ಬಾಕ್ಸ್ನಲ್ಲಿ ಗೇಮ್ಗಳನ್ನು ಆಡಬಹುದು. ಈ ಸೇವೆಯನ್ನು ಎಲ್ಲರಿಗೂ ಒದಗಿಸುವ ಸಲುವಾಗಿ ಕೆಲ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಎಕ್ಸ್‌ಬಾಕ್ಸ್ ಗೇಮ್ ಅನ್ನು ಆಸ್ಟ್ರೇಲಿಯಾ, ಬ್ರೆಜಿಲ್, ಮೆಕ್ಸಿಕೊ ಮತ್ತು ಜಪಾನ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕಂಪನಿ ಪ್ರಕಟಿಸಿದೆ.
ಇದನ್ನೂ ಓದಿ:ಮುಂದಿನ ವರ್ಷದಿಂದ ಸ್ಮಾರ್ಟ್‌ವಾಚ್‌ನಲ್ಲೂ ಫೇಸ್‌ಬುಕ್ ಕಾರ್ಯನಿರ್ವಹಣೆ
ಈ ಆಟಗಳು ಜನರನ್ನು ಒಟ್ಟುಗೂಡಿಸುತ್ತವೆ ಎಂದು ಎಕ್ಸ್ಬಾಕ್ಸ್ನ ಮುಖ್ಯಸ್ಥ ಸ್ಪೆನ್ಸರ್ ಹೇಳಿದ್ದಾರೆ. ಕನ್ಸೋಲ್ ಮತ್ತು ಗೇಮ್ ಪಾಸ್ ಎರಡನ್ನೂ ಕಡಿಮೆ ಮಾಸಿಕ ಬೆಲೆಗೆ ಖರೀದಿಸಲು ಕಂಪನಿ ಅವಕಾಶ ಮಾಡಿಕೊಡುತ್ತದೆ.