ETV Bharat / bharat

'ಪ್ರಜಾಪ್ರಭುತ್ವದ ಹತ್ಯೆ ತಡೆಯಲು ನಾವು ಒಟ್ಟಾಗಿ ಬರುತ್ತಿದ್ದೇವೆ': ಉದ್ಧವ್ ಠಾಕ್ರೆ

author img

By

Published : May 11, 2023, 4:04 PM IST

ಎಲ್ಲ ವಿರೋಧಪಕ್ಷಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ಬಲಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.

ನಿತೇಶ್ ಕುಮಾರ್ ಮತ್ತು ತೇಜಸ್ವಿ ಯಾದವ್
ನಿತೇಶ್ ಕುಮಾರ್ ಮತ್ತು ತೇಜಸ್ವಿ ಯಾದವ್

ಮುಂಬೈ : ಒಂದು ಕಾಲದಲ್ಲಿ ರಾಜ್ಯದ ಶಕ್ತಿ ಕೇಂದ್ರವಾಗಿದ್ದ ಮಾತೋಶ್ರೀಯಲ್ಲಿ ಇಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಘಟನೆಗಳು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖವಾಗಿವೆ. ಇಂದು ಸುಪ್ರೀಂಕೋರ್ಟ್ 16 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪಂಚ ಸದಸ್ಯರ ಪೀಠ, ಯಾವುದೇ ನಿರ್ಧಾರಕ್ಕೆ ಬರಲಾಗದೇ, ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲು ತೀರ್ಮಾನಿಸಿದೆ.

ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಉದ್ಧವ್ ಠಾಕ್ರೆ ಅವರನ್ನು ಅವರ ಸ್ವಂತ ನಿವಾಸ ಮಾತೋಶ್ರೀಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಕಳೆದ ಕೆಲ ದಿನಗಳಿಂದ ನಿತೀಶ್​ ಕುಮಾರ್​, ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅವರು, ರಾಹುಲ್​ ಗಾಂಧಿ, ಸೋನಿಯಾ,ಮಮತಾ ಬ್ಯಾನರ್ಜಿ, ಕೇಜ್ರಿವಾಲ್​ ಸೇರಿದಂತೆ ಎಲ್ಲ ಪ್ರತಿಪಕ್ಷಗಳ ನಾಯಕರೊಂದಿಗೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ.

ಇದೇ ಉದ್ದೇಶದ ಭಾಗವಾಗಿ ನಿತೀಶ್​ ಕುಮಾರ್ ಇಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದು, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿತೇಶ್ ಕುಮಾರ್​ಗೆ ತೇಜಸ್ವಿ ಯಾದವ್ ಕೂಡ ಸಾಥ್​ ನೀಡಿದರು. ಉಭಯ ನಾಯಕರು ಠಾಕ್ರೆ ಜೊತೆಗಿನ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಭವಿಷ್ಯದಲ್ಲಿ ಒಂದಾಗುವ ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮೊದಲ ಬಾರಿಗೆ ಮಾತೋಶ್ರೀಗೆ ಬಂದಿದ್ದಾರೆ. ನಾನು ಅವರನ್ನು ಹೋರಾಟಗಾರರು ಎಂದು ಕರೆಯುತ್ತಿದ್ದೇನೆ ಎಂದರು. ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಎಂಬ ವಾತಾವರಣವನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಉಳಿವಿಗೆ ನಾವೆಲ್ಲ ಒಗ್ಗೂಡಿ ಹೋರಾಡಬೇಕಾದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದೇವೆ. ಇದೇ ಉದ್ದೇಶದಿಂದ ಇಂದು ನಿತೀಶ್ ಕುಮಾರ್ ಮಾತೋಶ್ರೀಗೆ ಬಂದಿದ್ದಾರೆ ಎಂದರು.

ಮುಂದುವರಿದು ಮಾತನಾಡಿದ ಉದ್ಧವ್ ಠಾಕ್ರೆ, ನಾನು ಇಂದು ಶುಭ ದಿನವೆಂದು ಪರಿಗಣಿಸುತ್ತೇನೆ. ಏಕೆಂದರೆ, ನಾವು ಇಷ್ಟು ದಿನ ಕಾಯುತ್ತಿದ್ದ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ಇಂದು ಬಂದಿದೆ. ನಿತೇಶ್ ಕುಮಾರ್ ಜೀ, ನೀವೂ ಇಂದು ಮಾತೋಶ್ರೀಗೆ ಬಂದಿದ್ದೀರಿ. ಈಗ ನಾವು ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ನಾನು ಸಹ ನನ್ನ ಸ್ವಂತ ಪಕ್ಷಕ್ಕಾಗಿ ಹೋರಾಡುತ್ತಿಲ್ಲ. ಬದಲಿಗೆ, ಜನರಿಗಾಗಿ ಈ ಮಹಾರಾಷ್ಟ್ರಕ್ಕಾಗಿ ಮತ್ತು ಈ ದೇಶಕ್ಕಾಗಿ ಹೋರಾಡುತ್ತೇನೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈಗ ನಾವು ಒಟ್ಟಿಗೆ ಬಂದಿದ್ದೇವೆ. ಅದು ಮುಖ್ಯವಾದ ವಿಷಯ ಎಂದರು.

ಒಗ್ಗಟ್ಟಿನಿಂದ ಹೋರಾಡಿ: ಬಳಿಕ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, "ಇಂದು ನಿರ್ಧಾರ ತೆಗೆದುಕೊಂಡಿರುವುದು ಒಳ್ಳೆಯದು. ಇಡೀ ದೇಶವು ಒಟ್ಟಾಗಿ ಹೋರಾಟ ಮಾಡಲು ಬಯಸುತ್ತಿದೆ. ದೇಶವು ಹೇಗೆ ಸ್ವತಂತ್ರವಾಯಿತು ಎಂದು ಎಲ್ಲರಿಗೂ ತಿಳಿದಿದೆ. ನಾಡಿನ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಹೋರಾಬೇಕಾದ ಅಗತ್ಯತೆ ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಹಲವು ಪಕ್ಷಗಳ ಜೊತೆ ನಾವಿದ್ದೇವೆ. ಇದೀಗ ಎಲ್ಲರೂ ಒಗ್ಗೂಡೋಣ. ಆದಷ್ಟು ಬೇಗ ಎಲ್ಲ ಪಕ್ಷಗಳು ಕೂಡಿ ಒಂದು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಇಡೀ ದೇಶ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ. ಈ ಒಗ್ಗಟ್ಟು ಎಲ್ಲ ಯಶಸ್ಸಿಗೆ ಕಾರಣವಾಗುತ್ತದೆ. ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಶಿವಸೇನೆ vs ಶಿವಸೇನೆ: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.