ETV Bharat / bharat

ಶಿಂಧೆ ಗುಂಪಿನ ಕಾರ್ಯಕರ್ತರಿಂದ ಉದ್ಧವ್ ಠಾಕ್ರೆ ಗುಂಪಿನ ಮಹಿಳೆ ಮೇಲೆ ಹಲ್ಲೆ - ರಾಜಕೀಯದಲ್ಲಿ ಬಿಗಿವಿನ ವಾತಾವರಣ

ಉದ್ಧವ್ ಠಾಕ್ರೆ ಗುಂಪಿನಲ್ಲಿದ್ದ ಗರ್ಭಿಣಿಯ ಮೇಲೆ ಹಲ್ಲೆ ಶಿಂಧೆ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

Assault on pregnant woma
ಉದ್ಧವ್ ಠಾಕ್ರೆ ಗುಂಪಿನ ಮಹಿಳೆ ಮೇಲೆ ಹಲ್ಲೆ
author img

By

Published : Apr 4, 2023, 8:28 PM IST

ಥಾಣೆ (ಮಹಾರಾಷ್ಟ್ರ): ಠಾಕ್ರೆ ಗುಂಪಿನ ಮಹಿಳಾ ಕಾರ್ಯಕರ್ತೆಯೊಬ್ಬರು ಶಿಂಧೆ ಗುಂಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದ್ದರಿಂದ ಉದ್ಧವ್ ಠಾಕ್ರೆ ಗುಂಪಿನ ಗರ್ಭಿಣಿಗೆ ಶಿಂಧೆ ಕಾರ್ಯಕರ್ತರ ಗುಂಪು ಥಳಿಸಿದೆ. ಪರಿಣಾಮ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಹಿಳೆ ಮೇಲೆ ಮನಬಂದಂತೆ ಹಲ್ಲೆ: ಕಳೆದ ಕೆಲವು ದಿನಗಳಿಂದ ಶಿಂಧೆ ಗುಂಪಿನ ಕಾರ್ಯಕರ್ತರು ವಿರೋಧಿಗಳ ಬಾಯಿ ಮುಚ್ಚಿಸಲು ಅಥವಾ ಅವರ ಟೀಕೆಗಳನ್ನು ಮಾಡಿರುವ ಬೆನ್ನಲ್ಲೆ ಹಲ್ಲೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಕಾಸರ್ವದ್ವಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಠಾಕ್ರೆ ಗುಂಪಿನ ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಲಾಗಿದೆ. ಠಾಕ್ರೆ ಗುಂಪಿನ ಕಾರ್ಯಕರ್ತರು ಈಗ ಥಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಠಾಕ್ರೆ ಗುಂಪಿನ ಮುಖಂಡರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಯುವ ಸೇನಾ ಕಾರ್ಯಕರ್ತೆ ರೋಶನಿ ಮೇಲೆ ಶಿಂಧೆ ಗುಂಪಿನ ಸುಮಾರು 20 ಮಹಿಳೆಯರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ತನಿಖೆ ನಡೆಸಿ ಮಾಹಿತಿ ಪಡೆಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

''ಶಿಂಧೆ, ಫಡ್ನವಿಸ್ ಸರ್ಕಾರವು ಗೆದ್ದಿರುವ ಸ್ಥಾನಗಳನ್ನು ಜನರಿಗೆ ತೊಂದರೆ ನೀಡಲು ಬಳಸುತ್ತಿದೆ ಎಂದು ಠಾಕ್ರೆ ಕಾರ್ಯಕರ್ತರ ಗುಂಪಿನ ಸಂಸದ ರಾಜನ್ ವಿಖಾರೆ ಟೀಕಿಸಿದ್ದಾರೆ. ''ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ಪ್ರಜ್ಞೆ ತಪ್ಪಿದರೂ ಯಾರೂ ಗಮನ ಹರಿಸಲಿಲ್ಲ. ರಾಜನ್ ವಿಖೆ ಸಾಹೇಬರು ನನ್ನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಯಾರೂ ಅಲ್ಲಿಯೂ ಗಮನ ಹರಿಸಲಿಲ್ಲ. ನನ್ನ ಹೊಟ್ಟೆಯಲ್ಲಿ ನಿರಂತರ ನೋವು ಕಾಣಿಸುತ್ತಿದೆ. ನಾನು ಹಲವು ಬಾರಿ ವಾಂತಿ ಮಾಡುತ್ತಿದ್ದೇನೆ. ಆದರೂ ಯಾರೂ ಗಮನ ಹರಿಸದ ಕಾರಣ ಕೊನೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನನ್ನ ತಪ್ಪೇನು? ನಾಳೆ ನನಗೆ ಏನಾದರೂ ಅನಾಹುತವಾದರೆ ಅದಕ್ಕೆ ಯಾರು ಹೊಣೆ'' ಎಂದು ಹಲ್ಲೆಗೊಳಗಾದ ಮಹಿಳೆ ರೋಶನಿ ಪ್ರಶ್ನಿಸಿದರು.

ವೈದ್ಯರು ಹೇಳಿದ್ದೇನು?: ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ದೇಹದ ಮೇಲೆ ಯಾವುದೇ ಸಕ್ರಿಯ ರಕ್ತಸ್ರಾವ ಮತ್ತು ಆಂತರಿಕ ಗಾಯಗಳಿಲ್ಲ. ಮೂಳೆಗಳು ಮುರಿತವಾಗಿಲ್ಲ. ದೇಹದಲ್ಲಿ ಆದ ಕೆಲವು ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಮಹಿಳೆಯ ಸ್ಥಿತಿ ಸ್ಥಿರವಾಗಿದೆ. ಸೋನೋಗ್ರಫಿ ಯಾವುದೇ ಆಂತರಿಕ ಗಾಯವನ್ನು ತೋರಿಸಿಲ್ಲ ಎಂದು ಸಂಪದ ಆಸ್ಪತ್ರೆಯ ಡಾ.ಉಮೇಶ ಸುದಮ್ ಅಲೆಗಾಂವಕರ ಮಾಹಿತಿ ನೀಡಿದರು.

ಕಾರ್ಯಕರ್ತರು ಗರಂ: ಕಳೆದ ಕೆಲ ದಿನಗಳಿಂದ ಶಿಂಧೆ ಗುಂಪಿನ ಕಾರ್ಯಕರ್ತರು ಎದುರಾಳಿಗಳ ಬಾಯಿ ಮುಚ್ಚಿಸಲು ಅಥವಾ ಟೀಕೆಗೆ ಉತ್ತರಿಸಲು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು, ಈ ವಿಷಯ ಗಂಭೀರವಾಗಿದ್ದು, ಇದೀಗ ಎಲ್ಲ ಹಂತದಿಂದಲೂ ಟೀಕೆ ವ್ಯಕ್ತವಾಗುತ್ತಿದೆ. ಫೋನ್ ಮೂಲಕ ಹುಡುಕಿಕೊಡುವುದಾಗಿ ಬೆದರಿಕೆ ಹಾಕಿದ್ದರೆ. ಇಂದು ಮತ್ತೊಮ್ಮೆ ಕಾಸರವಾಡವಲಿ ಪೊಲೀಸ್ ಠಾಣೆಯಲ್ಲಿ ಠಾಕ್ರೆ ಗುಂಪಿನ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ವಿಚಾರವಾಗಿದೆ. ಕಾನೂನು ಸುವ್ಯವಸ್ಥೆ ಇದೆಯೇ ಎಂದು ಠಾಕ್ರೆ ಗುಂಪಿನ ಕಾರ್ಯಕರ್ತರು ಪ್ರಶ್ನಿಸಿದರು.

ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು: ಒಂದೆಡೆ ಕೆಲ ಮುಖಂಡರು ಗೂಂಡಾಗಳೊಂದಿಗೆ ತಿರುಗಾಡುವುದು. ಮತ್ತೊಂದೆಡೆ ಅವರ ವಿರುದ್ಧ ಮಾತನಾಡಿ ಥಳಿಸಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಚಿತ್ರಣವನ್ನು ತೋರಿಸುತ್ತಿದ್ದರೆ, ಶಿಂಧೆ ಗುಂಪಿನ ಕಾರ್ಯಕರ್ತರು ಪದೇ ಪದೇ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂದು ಕೂಡಾ ಮಹಿಳೆಗೆ ತೀವ್ರವಾಗಿ ಥಳಿಸಿದ್ದಾರೆ. ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಕಚೇರಿಯಿಂದ ಮನೆಗೆ ಹೋಗುತ್ತಿದ್ದ ಯುವ ಸೇನಾ ಕಾರ್ಯಕರ್ತೆ ರೋಶನಿಗೆ ಮೇಲೆ ಸುಮಾರು 20 ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಶಿಂಧೆ ವಿರುದ್ಧ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಗಂಭೀರವಾಗಿ ಥಳಿಸಿದ್ದಾರೆ. ಆಗಲೂ ಕೂಡಾ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ.

ಇದನ್ನೂ ಓದಿ: ಹೆತ್ತ ಶಿಶುವನ್ನು ಬಕೆಟ್​ನಲ್ಲಿ ಬಿಟ್ಟು ಆಸ್ಪತ್ರೆಗೆ ತೆರಳಿದ ತಾಯಿ: ಪೊಲೀಸರು ಮಗುವನ್ನು ರಕ್ಷಿಸಿದ್ದು ಹೀಗೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.