ಮುಂಬೈ : ದುಬೈನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರೊಬ್ಬರು ಅಕ್ರಮ ಚಿನ್ನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್(ಡಿಆರ್ಐ) ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಪ್ರಯಾಣಿಕರಿಂದ ಸುಮಾರು 4.54 ಕೋಟಿ ಮೌಲ್ಯದ 8.23 ಕೆಜಿ ಚಿನ್ನವನ್ನು ವಶಪಡಿಕೊಂಡಿದ್ದಾರೆ.
4 ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಮುಂಬೈನ ಛತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ. ಈ ಚಿನ್ನವನ್ನು ದ್ರವರೂಪದಲ್ಲಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
18 ಕೋಟಿ ಮೌಲ್ಯದ ಕೊಕೇನ್ ವಶ : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇದೇ ವಿಮಾನ ನಿಲ್ದಾಣದಲ್ಲಿ ಇಬ್ಬರು ವಿದೇಶಿ ಮಹಿಳೆಯರಿಂದ ಸುಮಾರು 18 ಕೋಟಿ ಮೌಲ್ಯದ 1.79 ಕೆಜಿ ಕೊಕೇನ್ನ್ನು ವಶಪಡಿಕೊಳ್ಳಲಾಗಿತ್ತು. ಇಥೋಪಿಯಾದ ಆಡೀಸ್ ಅಬಾಬಾದಿಂದ ಮುಂಬೈನ ಛತ್ರಪತಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೊಕೇನ್ ಪತ್ತೆಯಾಗಿತ್ತು. ಈ ಮಹಿಳೆಯರಲ್ಲಿ 4 ಕೈಚೀಲಗಳಲ್ಲಿ ಕೊಕೇನ್ ಇರುವ 8 ಪ್ಲಾಸ್ಟಿಕ್ ಪೌಚ್ ಗಳು ಪತ್ತೆಯಾಗಿದ್ದವು.
ಇದನ್ನೂ ಓದಿ : ಗುದದ್ವಾರದಲ್ಲಿ ಇಟ್ಟುಕೊಂಡು ಅಕ್ರಮ ಚಿನ್ನ ಸಾಗಣೆ: 28 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ಆರೋಪಿ ವಶಕ್ಕೆ
ಎಟಿಎಂ ಕಾರ್ಡ್ ಕದ್ದಿದ್ದರೆ ಹುಷಾರ್..( ಮುಂಬೈ): ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಿನ್ ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆ, ಜನ್ಮದಿನ ಅಥವಾ ಆಧಾರ್ ಕಾರ್ಡ್ ಸಂಖ್ಯೆಯಂತೆಯೇ ಇರಿಸಿದರೆ ಹುಷಾರ್. ಯಾಕೆಂದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಯಾರಾದರೂ ಕದ್ದರೆ, ಅವರು ನಿಮ್ಮ ಹಣವನ್ನು ಸುಲಭವಾಗಿ ಕದಿಯಬಹುದು. ಇಂತಹದೇ ಒಂದು ಘಟನೆ ಮುಂಬೈನ ಬೋರಿವಿಲಿಯಲ್ಲಿ ನಡೆದಿದೆ.
ಮುಂಬೈನ ಬಸ್ ನಿಲ್ದಾಣದ ಬಳಿ ನಿತ್ಯ ಪರ್ಸ್ ಮತ್ತು ಮೊಬೈಲ್ ಗಳನ್ನು ಕಳ್ಳತನ ಮಾಡಲಾಗುತ್ತಿದೆ. ಈ ನಡುವೆ ಮುಂಬೈನ ಪಶ್ಚಿಮ ಬೋರಿವಿಲಿಯಲ್ಲಿರುವ ಪೊಲೀಸರು ಪರ್ಸ್ ಕಳ್ಳತನದ ಸಂದರ್ಭದಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಚಲಿಸುವ ಬಸ್‌ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಜನಸಂದಣಿಯ ಲಾಭ ಪಡೆದು ಈ ಖದೀಮರು ಮಹಿಳೆಯರ ಪರ್ಸ್ ಕದಿಯುತ್ತಿದ್ದರು. ಈ ಆರೋಪಿಗಳು ಎಷ್ಟು ಚಾಣಾಕ್ಷರು ಎಂದರೆ ಮಹಿಳೆಯರ ಪರ್ಸ್ ಕದ್ದ ನಂತರ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದರು. ಅಷ್ಟೇ ಅಲ್ಲ ಮಹಿಳೆಯರ ಪರ್ಸ್ ನಲ್ಲಿ ಸಿಗುವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಆನ್ ಲೈನ್ ಶಾಪಿಂಗ್ ಕೂಡಾ ಮಾಡುತ್ತಿದ್ದರು.
ಮೀರಾ ರಸ್ತೆಯ ನಿವಾಸಿಯೊಬ್ಬರು ಬೋರಿವಿಲಿಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆಯ ಪರ್ಸ್ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ನೀಡಲಾಗಿತ್ತು. ಪರ್ಸ್‌ನಲ್ಲಿ ಸುಮಾರು 16,500 ರೂ ನಗದು, ಮೊಬೈಲ್ ಫೋನ್ ಮತ್ತು ಡೆಬಿಟ್ ಕಾರ್ಡ್ ಇತ್ತು. ಡೆಬಿಟ್ ಕಾರ್ಡ್ ನಿಂದಲೂ ಹಣ ಬಿಡಿಸಿಕೊಂಡಿದ್ದರು. ಮಹಿಳೆಯ ದೂರನ್ನು ಆಧರಿಸಿ, ಮಹಾರಾಷ್ಟ್ರ ಪೊಲೀಸರು ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಟಿವಿ ಸಹಾಯದಿಂದ ಮಹಿಳೆಯ ಡೆಬಿಟ್ ಕಾರ್ಡ್‌ನಿಂದ ತೆಗೆದ ಮೊತ್ತವನ್ನು ಪತ್ತೆ ಹಚ್ಚಿದ್ದರು. ಸಿಸಿಟಿವಿ ಸಹಾಯದಿಂದ ಪೊಲೀಸರು ಆರೋಪಿಗಳಾದ ಸಾಜಿದ್ ಅಬ್ದುಲ್ ಹೈ ಖಾನ್ (43), ಹಮೀದ್ ಅಬ್ದುಲ್ ಹೈ ಖಾನ್ (47) ಎಂಬವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 28 ಕೋಟಿ ರೂ ಮೌಲ್ಯದ ಕೊಕೇನ್ ವಶ