ETV Bharat / bharat

ಕೃಷ್ಣ ಜನ್ಮಾಷ್ಟಮಿ ನಿಯಮ ಜಾರಿ: ಮೊಸರು ಗಡಿಗೆ ಆಚರಣೆಗೆ ಸಿಸಿಟಿವಿ.. ಮಫ್ತಿಯಲ್ಲಿ ಪೊಲೀಸರ ಕಣ್ಗಾವಲು - ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದವರ ಮೇಲೆ ಕ್ರಮಕ್ಕೆ ಮುಂದಾದ ಪೊಲೀಸರು.

ರಾಜ್ಯ ಭಯೋತ್ಪಾದನಾ ನಿಗ್ರಹ ದಳ
ರಾಜ್ಯ ಭಯೋತ್ಪಾದನಾ ನಿಗ್ರಹ ದಳ
author img

By ETV Bharat Karnataka Team

Published : Sep 7, 2023, 6:15 AM IST

ಮುಂಬೈ: ಕೃಷ್ಣಾ ಎಂದಾಗ ಅವನು ಗೋಪಿಕೆಯರೊಂದಿಗೆ ಮಾಡುತ್ತಿದ್ದ ತುಂಟಾಟಗಳು ನೆನಪಿಗೆ ಬರುತ್ತವೆ. ಆದರೆ ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆಯನ್ನು ಆಚರಿಸುವಾಗ ಕುಚೇಷ್ಟೆಗಳನ್ನು ಮಾಡಿ ಅನುಚಿತವಾಗಿ ವರ್ತಿಸಿದರೆ ಅಂತಹವರ ಮೇಲೆ ನಿಗಾ ಇಡಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಮಫ್ತಿಯಲ್ಲಿ ಪೊಲಿಸರು ಜನರ ಜೊತೆಯೇ ಇದ್ದು, ಆ ರೀತಿ ನಡೆದುಕೊಂಡದ್ದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಬಣ್ಣದ ನೀರನ್ನು ಅಜಾಗರೂಕತೆಯಿಂದ ಎಸೆಯುವುದು ಮತ್ತು ಮೊಸರು ಗಡಿಗೆ ಹಬ್ಬದ ಸಮಯದಲ್ಲಿ ಮಹಿಳೆಯರಿಗೆ ಅಶ್ಲೀಲ ಸನ್ನೆಗಳು ಅಥವಾ ಅಸಭ್ಯ ಕಾಮೆಂಟ್‌ಗಳು, ಕೋಮು ಉದ್ವಿಗ್ನತೆಯನ್ನು ಉಂಟುಮಾಡಬಹುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು. ಹೀಗಾಗಿ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಬೈ ಪೊಲೀಸ್​ ಕಾರ್ಯಾಚರಣೆ ವಿಭಾಗದ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಪಾದಚಾರಿಗಳ ಮೇಲೆ ಆಕ್ಷೇಪಾರ್ಹ ಭಾಷೆ, ಅವಾಚ್ಯ ಶಬ್ಧಗಳಿಂದ ನಿಂದನೆ, ಬಣ್ಣದ ನೀರು, ಬಣ್ಣ ಅಥವಾ ಪೌಡರ್ ಎರಚುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ನಿಯಮ ಜಾರಿಗೆ ತಂದ ಪೊಲೀಸ್​: ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೊಸರು ಗಡಿಗೆ ಉತ್ಸವವನ್ನು ಆಚರಿಸುವಾಗ ಈ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹಬ್ಬದ ಸಮಯದಲ್ಲಿ, ರಹಸ್ಯ ಪೊಲೀಸ್ ಅಧಿಕಾರಿಗಳು ಎಲ್ಲಾ ಘಟನೆಗಳನ್ನು ಮೇಲ್ವಿಚಾರಣೆ ಮಾಡಲು ಗುಂಪಿನೊಂದಿಗೆ ಬೆರೆಯುತ್ತಾರೆ.

ಸಿಸಿಟಿವಿ, ಮಫ್ತಿ ಪೊಲೀಸ್​ ಕಣ್ಗಾವಲು: ಭದ್ರತೆಯ ದೃಷ್ಟಿಯಿಂದ ಮೊಸರು ಗಡಿಗೆ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ನಗರದಲ್ಲಿ ಸುಮಾರು 5 ಸಾವಿರ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಚಲನವಲನದ ಮೇಲೆ ನಿಗಾ ಇಡಲಿದ್ದಾರೆ. ಇದಲ್ಲದೆ, ವಿವಿಧ ವಿಶೇಷ ಪಡೆಗಳಾದ ಕೇಂದ್ರ ಮತ್ತು ರಾಜ್ಯ ಮೀಸಲು ಪಡೆಗಳು, ಗಲಭೆ ನಿಯಂತ್ರಣ ಪಡೆಗಳು, ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಕ್ಷಿಪ್ರ ಕಾರ್ಯಾಚರಣೆ ಪಡೆ, ಫೋರ್ಸ್ ಒನ್ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್, ಜೊತೆಗೆ ಮುಂಬೈ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಣ್ಗಾವಲು ಇಡಲಿದ್ದಾರೆ. ಹಬ್ಬವನ್ನು ಸುರಕ್ಷಿತವಾಗಿ ಮತ್ತು ವ್ಯವಸ್ಥಿತವಾಗಿ ಆಚರಿಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು 500ಕ್ಕೂ ಅಧಿಕ ಮಕ್ಕಳ ಜನನ: ಸಾವಿರ ಗಡಿ ದಾಟುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.